ನವದೆಹಲಿ: ಅರವಿಂದ್ ಕೇಜ್ರಿವಾಲ್ ಅವರು ಆರ್‌ಎಸ್‍ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡಬೇಕು ಜೊತೆಗೆ ಅಲ್ಲಿ ರಾಷ್ಟ್ರೀಯತೆಯ ಬಗ್ಗೆ ಕಲಿಯಲು 3 ವರ್ಷಗಳ ಕೋರ್ಸ್‍ಗೆ ಸೇರಿಕೊಳ್ಳಬೇಕು ಎಂದು ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅಭಿಪ್ರಾಯ ಪಟ್ಟರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ 10,000 ತಿರಂಗ ಶಾಖೆಗಳನ್ನು ತೆರೆಯಲಿರುವ ಬಗ್ಗೆ ಆಪ್ ಪಕ್ಷ ನೀಡಿರುವ ಹೇಳಿಕೆಯನ್ನು ಟೀಕಿಸಿ ಕೇವಲ ರಾಷ್ಟ್ರಧ್ವಜ ಹಿಡಿದುಕೊಂಡರೆ ರಾಷ್ಟ್ರವಾದಿಯಾಗುವುದಿಲ್ಲ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಾಷ್ಟ್ರೀಯತೆಯ ಬಗ್ಗೆ ಕಲಿಯಲು ಆರ್‌ಎಸ್‍ಎಸ್ ಕಚೇರಿಗೆ ಭೇಟಿ ನೀಡಬೇಕು ಎಂದು ತಿಳಿಸಿದರು.
Advertisement
Advertisement
ಕೇಜ್ರಿವಾಲ್ ಅವರು ಆರ್‌ಎಸ್‍ಎಸ್ ಸಿದ್ಧಾಂತದ ಮನೋಭಾವವನ್ನು ಅನುಸರಿಸಿದರೆ ಒಳ್ಳೆಯ ಮನುಷ್ಯರಾಗುತ್ತಾರೆ. ಇದರಿಂದಾಗಿ ಅವರನ್ನು ದೆಹಲಿಯ ಜಾಂಡೆವಾಲನ್ ಮತ್ತು ನಾಗ್ಪುರದಲ್ಲಿರುವ ಆರ್‌ಎಸ್‍ಎಸ್ ಕಚೇರಿಗೆ ಭೇಟಿ ನೀಡಲು ಹಾಗೂ ರಾಷ್ಟ್ರೀಯತೆಯ ಬಗ್ಗೆ ಕಲಿಯಲು ಆರ್‌ಎಸ್‍ಎಸ್‍ನ ಮೂರು ವರ್ಷಗಳ ಕೋರ್ಸ್‍ಗೆ ಹಾಜರಾಗಲು ಆಹ್ವಾನಿಸುತ್ತೇನೆ ಎಂದರು.
Advertisement
Advertisement
ಭಾರತದ ಸರ್ಜಿಕಲ್ ಸ್ಟ್ರೈಕ್ ಮತ್ತು ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಪ್ರಶ್ನಿಸಿದ ನಂತರ ಕೇಜ್ರಿವಾಲ್ ಹೇಗೆ ರಾಷ್ಟ್ರೀಯತಾವಾದಿಯಾಗುತ್ತಾರೆ ಎಂದ ಅವರು, ರಾಷ್ಟ್ರೀಯತೆ ವ್ಯಕ್ತಿಯ ಹೃದಯ ಮತ್ತು ಮನಸ್ಸಿನಲ್ಲಿದೆ. ಇದು ಇತ್ತೀಚಿನ ಉತ್ತರ ಪ್ರದೇಶ, ಗೋವಾ ಮತ್ತು ಉತ್ತರಾಖಂಡದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ನಂತರ ಆಪ್ ಹಾಗೂ ಕೇಜ್ರಿವಾಲ್‍ನ ನಕಲಿ ರಾಷ್ಟ್ರೀಯತೆಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕ್ಯಾಂಪಸ್ ಪ್ರವೇಶಕ್ಕೆ ರಾಹುಲ್‌ಗೆ ಅನುಮತಿ ನೀಡದ ವಿವಿ – ಉಸ್ಮಾನಿಯಾ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಈ ಹಿಂದೆ ದೆಹಲಿ ಸಚಿವ ಸಂಜಯ್ ಸಿಂಗ್ ಮಾತನಾಡಿ, ಬಿಜೆಪಿಯ ಒಡೆದು ಆಳುವ ನೀತಿಯ ಬಗ್ಗೆ ಜನರಿಗೆ ತಿಳಿಸಲು ಆಮ್ ಆದ್ಮಿ ಪಕ್ಷ(ಆಪ್)ವು ಮುಂದಿನ ಆರು ತಿಂಗಳಲ್ಲಿ ರಾಜ್ಯದಲ್ಲಿ 10,000 ತಿರಂಗ ಶಾಖೆಗಳನ್ನು ತೆರೆಯಲಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಖಲೀಸ್ತಾನ ಬೇಡಿಕೆ ಸಾಂವಿಧಾನಿಕ ಹಕ್ಕು ಎಂದ ಆಪ್ ನಾಯಕ ಹರ್‌ಪ್ರೀತ್‌ಸಿಂಗ್