ಚಿಕ್ಕೋಡಿ(ಬೆಳಗಾವಿ): ಕಾಗವಾಡ ಮತಕ್ಷೇತ್ರದ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್‍ಗೆ ಕೊರೊನಾ ಪಾಸಿಟಿವ್ ಧೃಡವಾಗಿದೆ.
ಕಳೆದ ವಾರ ಶಾಸಕರು ಬೆಂಗಳೂರಿಗೆ ಪ್ರವಾಸ ಮಾಡಿದ್ದರು. ಬೆಂಗಳೂರು ಪ್ರವಾಸ ಬಳಿಕ ಜ್ವರ ಕಾಣಿಸಿಕೊಂಡ ಹಿನ್ನೆಲೆ ಕೋವಿಡ್ ತಪಾಸಣೆ ಮಾಡಿಸಿದ್ದಾರೆ. RTPCR ತಪಾಸಣೆ ಬಳಿಕ ಶ್ರೀಮಂತ ಪಾಟೀಲ್‍ಗೆ ಕೊರೊನಾ ಬಂದಿರುವುದು ಧೃಡವಾಗಿದೆ.
Advertisement
Advertisement
ಕಾಗವಾಡ ತಾಲೂಕಾ ಆಸ್ಪತ್ರೆಯಲ್ಲಿ RTPCR ತಪಾಸಣೆ ಮಾಡಿಸಿರುವ ಅವರು ಸದ್ಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿರುವ ತಮ್ಮ ಸ್ವ-ಗೃಹದಲ್ಲಿ ಹೊಂ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ಕೋವಿಡ್ ತಪಾಸಣೆ ಮಾಡುವಂತೆ ಕೋರಿದ್ದಾರೆ. ಇದನ್ನೂ ಓದಿ: ಇಂದು ಒಟ್ಟು 14,473 ಪ್ರಕರಣ – ಪಾಸಿಟಿವಿಟಿ ರೇಟ್ 10.30%ಕ್ಕೆ ಏರಿಕೆ
Advertisement
Advertisement
ನನಗೆ ಯಾವುದೇ ರೋಗ ಲಕ್ಷಣಗಳು ಇರುವುದಿಲ್ಲ, ನಾನು ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿಯೇ ಹೋಂ ಐಸೋಲೇಷನ್ ನಲ್ಲಿ ಇರುತ್ತೇನೆ. ಯಾರು ಭಯಪಡಬೇಕಾದ ಅವಶ್ಯಕತೆ ಇಲ್ಲ. ನನ್ನ ಸಂಪರ್ಕಕ್ಕೆ ಬಂದಿರುವರು ತಮ್ಮಲ್ಲಿ ಯಾವುದೇ ರೋಗಲಕ್ಷಣಗಳು ಕಾಣಿಸಿದರೆ ದಯವಿಟ್ಟು ಕೋವಿಡ್ ತಪಾಸಣೆ ಮಾಡಿಸಿಕೊಳ್ಳಿ, ವೈದ್ಯರ ಸಲಹೆಯನ್ನು ಪಡೆಯಿರಿ ಎಂದು ತಿಳಿಸಿದ್ದಾರೆ.
ಈಗ ಕೋವಿಡ್ ಸೋಂಕು ಮತ್ತೆ ವ್ಯಾಪಕವಾಗಿ ಹರಡುತ್ತಿದ್ದು, ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಉಪಯೋಗಿಸಿ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿರಿ. ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ ಎಂದು ಶಾಸಕರು ಮನವಿ ಮಾಡಿದ್ದಾರೆ.