ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆ ಮತ್ತಷ್ಟು ಹೆಚ್ಚಾಗುತ್ತಿದೆ. ಇಂದು ಒಟ್ಟು 14,473 ಹೊಸ ಕೇಸ್ ದಾಖಲಾಗಿದ್ದು, 5 ಮರಣ ಪ್ರಕರಣ ಪತ್ತೆಯಾಗಿದೆ. ಅಲ್ಲದೆ ಪಾಸಿಟಿವಿಟಿ ರೇಟ್ ಶೇ.10.30ಕ್ಕೆ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಕೊರೊನಾ ಆರ್ಭಟಿಸುತ್ತಿದ್ದು, ಇಂದು 10,800 ಹೊಸ ಕೇಸ್ ಪತ್ತೆಯಾಗಿದೆ.
Advertisement
ರಾಜ್ಯದಲ್ಲಿ ಇಂದು ಒಟ್ಟು 1,356 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 30,78,129 ಮಂದಿಗೆ ಕೊರೊನಾ ಬಂದಿದೆ. 39,66,461 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.0.03 ರಷ್ಟಿದೆ. ಕೊರೊನಾ ಜೊತೆಗೆ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 479 ತಲುಪಿದ್ದು, 500ರ ಸನಿಹದಲ್ಲಿದೆ. ಇದನ್ನೂ ಓದಿ: ಬೊಮ್ಮಾಯಿ ಆರೋಗ್ಯ ವಿಚಾರಿಸಿ ಸಲಹೆ ನೀಡಿದ ಪ್ರಧಾನಿ ಮೋದಿ
Advertisement
Advertisement
ರಾಜ್ಯದಲ್ಲಿ ಇಂದು ಒಟ್ಟು 2,09,474 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 1,40,452 ಸ್ಯಾಂಪಲ್ (ಆರ್ಟಿಪಿಸಿಆರ್ 1,00,035 + 40,417 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿ ಪುತ್ರನಿಗೂ ಕೋವಿಡ್
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಪ್ರತಿ ಜಿಲ್ಲೆಗಳಲ್ಲೂ ಕೂಡ ಕೊರೊನಾ ಪಾಸಿಟಿವ್ ಪ್ರಕರಣಗಳು ಏರಿಕೆ ಕಾಣುತ್ತಿದೆ. ಇಂದು ಬಾಗಲಕೋಟೆ 9, ಬಳ್ಳಾರಿ 101, ಬೆಳಗಾವಿ 79, ಬೆಂಗಳೂರು ಗ್ರಾಮಾಂತರ 160, ಬೆಂಗಳೂರು ನಗರ 10,800, ಬೀದರ್ 43, ಚಾಮರಾಜನಗರ 86, ಚಿಕ್ಕಬಳ್ಳಾಪುರ 91, ಚಿಕ್ಕಮಗಳೂರು 41, ಚಿತ್ರದುರ್ಗ 47, ದಕ್ಷಿಣ ಕನ್ನಡ 583, ದಾವಣಗೆರೆ 56, ಧಾರವಾಡ 178, ಗದಗ 21, ಹಾಸನ 121, ಹಾವೇರಿ 8, ಕಲಬುರಗಿ 109, ಕೊಡಗು 29, ಕೋಲಾರ 139, ಕೊಪ್ಪಳ 2, ಮಂಡ್ಯ 263, ಮೈಸೂರು 562, ರಾಯಚೂರು 29, ರಾಮನಗರ 59, ಶಿವಮೊಗ್ಗ 136, ತುಮಕೂರು 332, ಉಡುಪಿ 250, ಉತ್ತರ ಕನ್ನಡ 106, ವಿಜಯಪುರ 20 ಮತ್ತು ಯಾದಗಿರಿಯಲ್ಲಿ 13 ಪಾಸಿಟಿವ್ ಪ್ರಕರಣ ದಾಖಲಾಗಿದೆ.