ಶಿಮ್ಲಾ: ಕೇಂದ್ರ ಪ್ರಸಾರ ಖಾತೆ ಮತ್ತು ಕ್ರೀಡಾ ಖಾತೆಯ ಸಚಿವ ಅನುರಾಗ್ ಠಾಕೂರ್(Anurag Thakur) ಪ್ರತಿನಿಧಿಸುತ್ತಿರುವ ಹಿಮಾಚಲ ಪ್ರದೇಶದ ಹಮೀರ್‌ಪುರ(Hamirpur) ಲೋಕಸಭಾ ಕ್ಷೇತ್ರದಲ್ಲಿ ಬರುವ ಎಲ್ಲಾ 5 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ(BJP) ಅಭ್ಯರ್ಥಿಗಳು ಸೋತಿದ್ದಾರೆ.
ಬಾರ್ಸರ್‌ನಲ್ಲಿ 13,792 ಮತಗಳಿಂದ ಕಾಂಗ್ರೆಸ್(Congress) ಗೆದ್ದರೆ ನಾದೌನ್‌ನಲ್ಲಿ 3,363 ಮತಗಳಿಂದ ಗೆದ್ದಿದೆ. ಸುಜಾನ್‌ಪುರ್‌ನಲ್ಲಿ 399 ಮತಗಳಿಂದ ಜಯಗಳಿಸಿದರೆ ಭೋರಂಜ್‌ನಲ್ಲಿ 60 ಮತಗಳಿಂದ ಕಾಂಗ್ರೆಸ್ ಜಯಗಳಿಸಿದೆ. ಇದನ್ನೂ ಓದಿ: Himachal Pradesh Election Result: ಕಾಂಗ್ರೆಸ್ 40, ಬಿಜೆಪಿ 25 ಸ್ಥಾನ ಗೆಲುವು
Advertisement
Advertisement
ಹಮೀರ್‌ಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆಶಿಶ್ ಶರ್ಮಾ ಗೆಲುವು ಸಾಧಿಸಿದ್ದಾರೆ. ಅನುರಾಗ್ ಠಾಕೂರ್ ಅವರ ತಂದೆ 78 ವರ್ಷದ ಮಾಜಿ ಸಿಎಂ ಪ್ರೇಮ್ ಕುಮಾರ್ ಧುಮಾಲ್(Prem Kumar Dhumal) ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತು.
Advertisement
ಅನುರಾಗ್ ಠಾಕೂರ್ ಹಮೀರ್‌ಪುರ ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. 2008ರ ಉಪಚುನಾವಣೆ, 2009, 2014, 2019ರಲ್ಲಿ ಠಾಕೂರ್ ಈ ಕ್ಷೇತ್ರದಿಂದ ಗೆದ್ದಿದ್ದಾರೆ.
Advertisement
2019ರ ಚುನಾವಣೆಯಲ್ಲಿ ಅನುರಾಗ್ ಠಾಕೂರ್ 3,99,572 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದ್ದರು. ಅನುರಾಗ್ ಠಾಕೂರ್ 6,82,992 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿ 2,83,120 ಮತಗಳನ್ನು ಪಡೆದಿದ್ದರು.