ಬೆಂಗಳೂರು: ಸಿದ್ದರಾಮಯ್ಯ ಅವರೇ ನೀವು ನಯಾಪೈಸೆ ಲಂಚ ತೆಗೆದುಕೊಂಡಿಲ್ಲ ಅಂದರೆ ಹ್ಯೂಬ್ಲೋಟ್ ವಾಚ್ ಎಲ್ಲಿಂದ ಬಂತು ಎಂದು ಬಿಜೆಪಿ ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದೆ.
ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿಹೋಗಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ನಿರಪೇಕ್ಷಣಾ ಪತ್ರಕ್ಕಾಗಿ (ಎನ್‍ಒಸಿ) ಗುತ್ತಿಗೆದಾರರು ಒಂದು ರೂಪಾಯಿ ಕೊಟ್ಟಿಲ್ಲ. ಯಾರೂ ಕೂಡ ಹಣವನ್ನು ಕೊಟ್ಟಿಲ್ಲ. ಒಂದು ವೇಳೆ ಕೊಟ್ಟಿದ್ದಾರೆಂದು ಸಾಬೀತು ಪಡಿಸಿದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದರು. ಇದನ್ನೂ ಓದಿ: ಪೊಲೀಸರು ಪ್ರಾಮಾಣಿಕರಾಗಿಲ್ಲದಿದ್ದರೆ, ನಾಗರೀಕರು ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ: ಆರಗ ಜ್ಞಾನೇಂದ್ರ
ಈ ಹೇಳಿಕೆ ಕುರಿತಂತೆ ಬಿಜೆಪಿ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರೇ, ರಾಜಕೀಯ ನಿವೃತ್ತಿ ನೀಡಬೇಡಿ. ದೇಶಾದ್ಯಂತ ಕಾಂಗ್ರೆಸ್ ಹಡಗನ್ನು ಮುಳುಗಿಸಲು ನಿಮ್ಮಂತಹ ನಾಯಕರ ಅಗತ್ಯವಿದೆ. ಅಂದ ಹಾಗೆ ನೀವು ನಯಾಪೈಸೆ ಲಂಚ ತೆಗೆದುಕೊಂಡಿಲ್ಲ ಎಂದು ಹೇಳಿದ್ದೀರಿ. ಹಾಗಾದರೆ ಹ್ಯೂಬ್ಲೋಟ್ ವಾಚ್ ಬಂದಿದ್ದೆಲ್ಲಿಂದ ಎಂದು ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದೆ.
ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರು ತಮ್ಮ ಸುತ್ತಲೂ ಭ್ರಷ್ಟರ ದಂಡನ್ನೇ ಇಟ್ಟುಕೊಂಡಿದ್ದರು. ಸಿದ್ದರಾಮಯ್ಯ ಅವರ ಆತ್ಮೀಯರೆಲ್ಲರ ಮೇಲೂ ಕಪ್ಪು ಹಣ ಸಂಗ್ರಹಣೆ ಆರೋಪವಿತ್ತು. ಸಿದ್ದರಾಮಯ್ಯನವರೇ ನಿಮ್ಮ ಸಲಹೆಗಾರರೊಬ್ಬರ ಮೇಲೆ ಐಟಿ ದಾಳಿಯಾದಾಗ ರಾತ್ರಿ ಬಂದು ನಿಮ್ಮ ಮುಂದೆ ಕಣ್ಣೀರು ಸುರಿಸಿದ್ದು ನೆನಪಿದೆಯೇ? ಅದಕ್ಕೇನು ಹೇಳುತ್ತೀರಿ? ಎಂದು ಕೇಳಿದೆ. ಇದನ್ನೂ ಓದಿ: ಮೊದ್ಲು ಜನ್ರಿಗೆ ಆದಾಯ ಬರುವಂತೆ ಮಾಡಿ, ಆಮೇಲೆ ದರ ಏರಿಕೆ ಮಾಡಿ : ಡಿಕೆಶಿ
ಮುಖ್ಯಮಂತ್ರಿಯಾಗಿದ್ದಾಗ @siddaramaiah ಅವರು ತಮ್ಮ ಸುತ್ತಲೂ ಭ್ರಷ್ಟರ ದಂಡನ್ನೇ ಇಟ್ಟುಕೊಂಡಿದ್ದರು.
ಸಿದ್ದರಾಮಯ್ಯ ಅವರ ಆತ್ಮೀಯರೆಲ್ಲರ ಮೇಲೂ ಕಪ್ಪ ಹಣ ಸಂಗ್ರಹಣೆ ಆರೋಪವಿತ್ತು.
ಸಿದ್ದರಾಮಯ್ಯನವರೇ, ನಿಮ್ಮ ಸಲಹೆಗಾರರೊಬ್ಬರ ಐಟಿ ದಾಳಿಯಾದಾಗ ರಾತ್ರಿ ಬಂದು ನಿಮ್ಮ ಮುಂದೆ ಕಣ್ಣೀರು ಸುರಿಸಿದ್ದು ನೆನಪಿದೆಯೇ? ಅದಕ್ಕೇನು ಹೇಳುತ್ತೀರಿ?
— BJP Karnataka (@BJP4Karnataka) January 22, 2022
ಜಾರ್ಜ್, ಎಚ್.ಸಿ.ಮಹಾದೇವಪ್ಪ, ಗೋವಿಂದರಾಜು, ಕೆಂಪಯ್ಯ ಇವರೆಲ್ಲ ನಿಮ್ಮ ಅತ್ಯಾಪ್ತರಲ್ಲವೇ? ಇವರೆಲ್ಲರ ಮೇಲೆ ಐಟಿ ದಾಳಿ ನಡೆದಿದ್ದನ್ನು ನೆನಪಿಸಿಕೊಳ್ಳಿ. ನೀವು ಭ್ರಷ್ಟಾಚಾರ ನಡೆಸಿಲ್ಲವೆಂದು ಎದೆತಟ್ಟಿ ಹೇಳಿರಬಹುದು. ಆದರೆ ಭ್ರಷ್ಟ ಹಣ ಸಂಗ್ರಹಕ್ಕೆ ಸುತ್ತಲೂ ವ್ಯವಸ್ಥೆ ರೂಪಿಸಿಕೊಂಡಿಲ್ಲವೆಂದು ಹೇಳುವ ಧೈರ್ಯವಿದೆಯೇ ಎಂದು ವಾಗ್ದಾಳಿ ನಡೆಸಿದೆ.