Bengaluru CityDistrictsKarnatakaLatestMain Post

ಮೊದ್ಲು ಜನ್ರಿಗೆ ಆದಾಯ ಬರುವಂತೆ ಮಾಡಿ, ಆಮೇಲೆ ದರ ಏರಿಕೆ ಮಾಡಿ: ಡಿಕೆಶಿ

ಬೆಂಗಳೂರು: ಮೊದಲು ಜನರಿಗೆ ಆದಾಯ ಬರುವಂತೆ ಸರ್ಕಾರ ಮಾಡಿ ಕೊಡಲಿ. ಆಮೇಲೆ ದರ ಏರಿಕೆ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸರ್ಕಾರ ದರ ಏರಿಕೆ ಮಾಡುತ್ತಿರುವ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಲು, ವಿದ್ಯುತ್, ಸಾರಿಗೆ ದರ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ. ಮೊದಲು ಜನರಿಗೆ ಆದಾಯ ಬರುವಂತೆ ಸರ್ಕಾರ ಮಾಡಿ ಕೊಡಲಿ. ಆಮೇಲೆ ದರ ಏರಿಕೆ ಮಾಡಲಿ. ಕೇಸ್‍ಗಳ ಸಂಖ್ಯೆ ಕಡಿಮೆ ಇದ್ದಾಗ, ಲಾಕ್‍ಡೌನ್, ಸೀಲ್‍ಡೌನ್, ಬ್ರೇಕ್‍ಡೌನ್ ಅಂತಾರೆ. ಅವೈಜ್ಞಾನಿಕ ರೂಲ್ಸ್‌ಗಳನ್ನು ಸರ್ಕಾರ ತರುತ್ತಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ನೋಡಬೇಕು. ಆಂಧ್ರ, ತೆಲಂಗಾಣಗಳಲ್ಲಿ ಕರ್ಫ್ಯೂ ಎಲ್ಲ ಮಾಡಿಲ್ಲ. ಇಲ್ಲಿ ಮಾತ್ರ ಯಾಕೆ? ನೈಟ್ ಕರ್ಫ್ಯೂ ಕೂಡಾ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೋವಿಡ್‌ ಯಾರನ್ನೂ ಬಿಟ್ಟಿಲ್ಲ, ದೇವೇಗೌಡರಿಗೆ ಕೊರೊನಾ ತೀವ್ರತೆ ಇಲ್ಲ: ಬೊಮ್ಮಾಯಿ

MONEY

ಕಡಿಮೆ ಕೇಸ್ ಇದ್ದಾಗ ಕರ್ಫ್ಯೂ ಮಾಡಿದ್ದರು. ಕೇಸ್ ಹೆಚ್ಚಿದಾಗ ಕರ್ಫ್ಯೂ ತೆಗೆದಿದ್ದಾರೆ. ರೈತರು ನಷ್ಟ ಅನುಭವಿಸುತ್ತಿದ್ದರೂ, ಏನಾದರೂ ಕಾರ್ಯಕ್ರಮ ಕೊಟ್ರಾ? ಅವರ ರಕ್ಷಣೆಗೆ ಯಾಕೆ ಬರಲಿಲ್ಲ? ಸಿಮೆಂಟ್ ಕಬ್ಬಿಣ ರೇಟ್ ಕಡಿಮೆ ಮಾಡುವುದಕ್ಕೆ ಪ್ರಯತ್ನ ಮಾಡಿದ್ರಾ? ವಿದ್ಯುತ್ ಕಂಪನಿಗಳ ಪರಿಸ್ಥಿತಿ ಗೊತ್ತಿದೆ. ಆದರೆ ಜನರನ್ನು ರಕ್ಷಿಸುವ ಕೆಲಸ ಮೊದಲು ಮಾಡಲಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಗೋವಾ ಚುನಾವಣೆ- ಜಗದೀಶ್ ಶೆಟ್ಟರ್ ಪ್ರಚಾರ, ಮತಯಾಚನೆ

ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದೇವೆ ಎಂಬ ಕಾರಣಕ್ಕೆ ಕರ್ಫ್ಯೂ ಜಾರಿಗೆ ತಂದರು. ಜನರಿಗೆ ಬಹಳ ನಷ್ಟ ಆಗುವ ರೀತಿ ನಡೆದುಕೊಂಡರು. ಸರ್ಕಾರ ಪ್ರಾಕ್ಟಿಕಲ್ ಆಗಿ ಯೋಜನೆ ಜಾರಿ ಮಾಡಲಿ. ಅವೈಜ್ಞಾನಿಕ ರೂಲ್ಸ್ ಬೇಡ. ಲಂಡನ್‍ನಲ್ಲಿ ಎಲ್ಲರನ್ನು ಫ್ರೀ ಬಿಟ್ಟಿಲ್ಲವಾ. ಆಂಧ್ರ, ತೆಲಂಗಾಣದಲ್ಲಿ ಯಾವುದೇ ಕರ್ಫ್ಯೂ ಇಲ್ಲ. ಇಲ್ಲಿ ಯಾಕೆ ಕರ್ಫ್ಯೂ ಜಾರಿ ಮಾಡಿದ್ದರು. ಜನರಿಗೆ ತೊಂದರೆ ಕೊಡುವುದನ್ನು ಮೊದಲು ನಿಲ್ಲಿಸಿ. 50-50 ರೂಲ್ಸ್ ಯಾಕೆ? ಅದರಿಂದ ಎಷ್ಟು ಜನರಿಗೆ ಅನಾನುಕೂಲ ಆಗುತ್ತಿದೆ. ಬಸ್ಸಲ್ಲಿ, ಮೆಟ್ರೋದಲ್ಲಿ, ವಿಮಾನದಲ್ಲಿ ಎಲ್ಲೂ 50-50 ರೂಲ್ಸ್ ಇಲ್ಲ. ದೊಡ್ಡವರಿಗೆ ಒಂದು, ಬಡವರಿಗೆ ಒಂದು ರೂಲ್ಸಾ? ಮೊದಲು ಜನರಿಗೆ ಆದಾಯ ಬರುವಂತೆ ಮಾಡಿ ಬಳಿಕ ದರ ಏರಿಕೆ ಮಾಡಲಿ ಎಂದಿದ್ದಾರೆ.

Leave a Reply

Your email address will not be published.

Back to top button