ಮಂಡ್ಯ: ಈ ಮೊದಲು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿ ಅಶೋಕ್ರನ್ನು ಬಿಜೆಪಿ ನೇಮಕ ಮಾಡಿತ್ತು. ಈ ನೇಮಕದ ಬೆನ್ನಲ್ಲೇ ಸ್ವಪಕ್ಷೀಯರಿಂದ ವಿರೋಧ ವ್ಯಕ್ತವಾಗಿದ್ದು, ಪಕ್ಷಕ್ಕೆ ಸಾಕಷ್ಟು ಮುಜುಗರ ಉಂಟುಮಾಡಿದೆ. ಇದೀಗ ಪಕ್ಷಕ್ಕೆ ಎದುರಾಗಿರುವ ಮುಜುಗರ ತಪ್ಪಿಸಲು ಬಿಜೆಪಿ ಮತ್ತೆ ಬದಲಾವಣೆ ಮಂತ್ರ ಜಪಿಸುತ್ತಿದೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಕಮಾಲ್ ಮಾಡುವ ಉದ್ದೇಶದಿಂದ ಬಿಜೆಪಿ ಕಳೆದ ಒಂದು ವರ್ಷದಿಂದ ಪಕ್ಷ ಸಂಘಟನೆಗೆ ಒತ್ತು ನೀಡಿ ಸಾಕಷ್ಟು ಸ್ಟ್ಯಾಟರ್ಜಿ ಮಾಡುತ್ತಾ ಇದೆ. ಸಚಿವ ಗೋಪಾಲಯ್ಯ ಅವರು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾಗ ಜಿಲ್ಲೆಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉತ್ಸಾಹದಿಂದ ಸಂಘಟನೆ ಕೆಲಸದಲ್ಲಿ ತೊಡಗಿದ್ದರು.
ಬಿಜೆಪಿ ಅದ್ಯಾವ ಸ್ಟಾಟರ್ಜಿ ಇಟ್ಟುಕೊಂಡೊ ಏನೋ ಜ. 24ರಂದು ಗೋಪಾಲಯ್ಯ ಅವರ ಬದಲಿಗೆ ಸಚಿವ ಆರ್.ಅಶೋಕ್ರನ್ನು ಮಂಡ್ಯ ಉಸ್ತುವಾರಿಯಾಗಿ ನೇಮಕ ಮಾಡಿತು. ಇದಾದ ನಂತರ ಅಶೋಕ್ ಜ. 25ರಂದು ಶ್ರೀರಂಗಪಟ್ಟಣದಲ್ಲಿ ಸಂಭಾವ್ಯ ಅಭ್ಯರ್ಥಿ ಸಚ್ಚಿದಾನಂದ ಪರ ಪ್ರಚಾರದ ಕೆಲಸ ಮಾಡಿ ಜ. 26ರಂದು ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ಮಾಡಿದರು. ಈ ವೇಳೆ ಬಿಜೆಪಿಯ ಕಾರ್ಯಕರ್ತರು ಅಶೋಕ್ ಹೊಂದಾಣಿಕೆ ರಾಜಕೀಯ ಮಾಡುತ್ತಾರೆ ಎಂದು ಫೇಸ್ಬುಕ್ನಲ್ಲಿ ಹಾಗೂ ಗೋಡೆಗಳ ಮೇಲೆ ಗೋ ಬ್ಯಾಕ್ ಅಶೋಕ್ ಎಂಬ ಬರೆದು ಅಶೋಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಅಶೋಕ್ಗೆ ಮಂಡ್ಯ ಬಿಜೆಪಿಯಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆ ಜ. 26ರಂದು ಮಂಡ್ಯದಿಂದ ಹೊರಟ ಅಶೋಕ್ ಅಂದಿನಿಂದ ಇಂದಿನವರೆಗೂ ಮಂಡ್ಯ ಕಡೆ ಮುಖ ಮಾಡಿಲ್ಲ. ಕಾರ್ಯಕರ್ತರು ಮಾಡಿರುವ ವಿರೋಧದಿಂದ ಅಶೋಕ್ಗೆ ಹಾಗೂ ಬಿಜೆಪಿ ಪಕ್ಷಕ್ಕೆ ಸಾಕಷ್ಟು ಮುಜುಗರ ಉಂಟುಮಾಡಿದೆ. ಇದಲ್ಲದೇ ಮಂಡ್ಯ ಜಿಲ್ಲೆಯಲ್ಲಿ ಇಷ್ಟು ದಿನಗಳ ಕಾಲ ಉತ್ಸಾಹದಿಂದ ನಡೆಯುತ್ತಿದ್ದ ಬಿಜೆಪಿ ಸಂಘಟನಾ ಕಾರ್ಯವು ಸಹ ಮಂದವಾಗಿ ಸಾಗುತ್ತಿದೆ.
ಹೀಗಾಗಿ ಬಿಜೆಪಿ ರಾಜ್ಯ ನಾಯಕರು ಮತ್ತೆ ಉಸ್ತುವಾರಿ ಬದಲಾವಣೆಗೆ ಮುಂದಾಗಿದ್ದು, ಈ ಬಗ್ಗೆ ಹೈಕಮಾಂಡ್ ಸಹ ಸೂಚನೆ ನೀಡಿದೆ. ರಾಜ್ಯ ಬಿಜೆಪಿ ನಾಯಕರು ಅಲೋಚನೆ ಮಾಡಿದ್ದು, ಅಶೋಕ್ ಬದಲಿಗೆ ಈ ಹಿಂದೆ ಮಂಡ್ಯ ಜಿಲ್ಲೆಯ ಉಸ್ತುವಾರಿಯಾಗಿದ್ದ ನಾರಾಯಣಗೌಡಗೆ ಅಥವಾ ಗೋಪಾಲಯ್ಯ ಇಬ್ಬರಲ್ಲಿ ಒಬ್ಬರ ಹೆಗಲಿಗೆ ಮಂಡ್ಯ ಉಸ್ತುವಾರಿ ಜವಾಬ್ದಾರಿಯನ್ನು ನೀಡುವ ಆಲೋಚನೆ ಮಾಡಲಾಗುತ್ತಿದೆ. ಇದನ್ನೂ ಓದಿ: ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಿರುವ ಚೀನಾ ನಿರ್ಮಿತ ಭದ್ರತಾ ಕ್ಯಾಮೆರಾಗಳ ತೆರವು – ಆಸ್ಟ್ರೇಲಿಯಾ ನಿರ್ಧಾರ
ಒಟ್ಟಾರೆ ಬಿಜೆಪಿ ಏನೋ ಲೆಕ್ಕಾಚಾರ ಹಾಕಿಕೊಂಡು ಅಶೋಕ್ ಅವರ ಹೆಗಲಿಗೆ ಮಂಡ್ಯ ಉಸ್ತುವಾರಿ ಹಾಕಿದ ಬೆನ್ನಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆ ಬಿಜೆಪಿ ಮತ್ತೆ ಉಸ್ತುವಾರಿ ಬದಲಾವಣೆಯ ಮಂತ್ರ ಜಪಿಸಲು ಮುಂದಾಗಿದೆ. ಇದನ್ನೂ ಓದಿ: Spy Balloon Rowː ಚೀನಾದೊಂದಿಗೆ ಸಂಘರ್ಷಕ್ಕಿಳಿಯುವುದಿಲ್ಲ ಎಂದ ಜೋ ಬೈಡನ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k