ಬೆಂಗಳೂರು: ಬಿಟ್ ಕಾಯಿನ್ (Bit Coin) ಹಗರಣಕ್ಕೆ ಮರುಜೀವ ಸಿಕ್ಕಂತಾಗಿದೆ. ಅಧಿಕೃತವಾಗಿ ಚಾಲನೆಗೆ ಬಂದಿದ್ದು, ಮರು ತನಿಖೆ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದ ಡಿಜಿ&ಐಜಿ ಅಲೋಕ್ ಮೋಹನ್ ಪ್ರಕರಣದ ಸಾರಾಂಶ ತಿಳಿಸಿದ್ದಾರೆ. ಈ ಮೂಲಕ ಪ್ರಕರಣದ ಮರು ತನಿಖೆಗೆ ಮುಂದಾಗಿದೆ ಕಾಂಗ್ರೆಸ್ (Congress) ಸರ್ಕಾರ.
ಪ್ರಕರಣದ ಮೊದಲ ಹಂತವಾಗಿ ನಗರ ಪೊಲೀಸ್ ಆಯುಕ್ತ ದಯಾನಂದ್ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದರು. ಬಳಿಕ ಅಲೋಕ್ ಮೋಹನ್ ಪತ್ರದ ಮೂಲಕ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ. ಯಾವ ತನಿಖಾ ಸಂಸ್ಥೆಗೆ ತನಿಖೆಗೆ ನೀಡಬೇಕೆಂದು ತೀರ್ಮಾನ ಮಾಡಲಿರೋ ಸರ್ಕಾರ ಸಿಐಡಿಯಿಂದಲಾ? ಎಸ್‌ಐಟಿ ಇಂದಲಾ ತನಿಖೆ? ಎಂಬುದನ್ನು ಇನ್ನೆರಡು ದಿನಗಳಲ್ಲಿ ಸ್ಪಷ್ಟಪಡಿಸಲಿದೆ. ಇದನ್ನೂ ಓದಿ: ಬಿಜೆಪಿಯಲ್ಲಿ ತೀವ್ರಗೊಂಡ ಒಳಜಗಳ- ವೇದಿಕೆಯಲ್ಲಿಯೇ ಯತ್ನಾಳ್, ನಿರಾಣಿ ಪರಸ್ಪರ ಟಾಂಗ್
Advertisement
Advertisement
ಕಾಟನ್ ಪೇಟೆಯಲ್ಲಿ ದಾಖಲಾಗಿದ್ದ ಬಿಟ್ ಕಾಯಿನ್ ಪ್ರಕರಣದಲ್ಲಿ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ. ಮತ್ತೆ ತನಿಖೆ ಮಾಡಿಸಲು ಮುಂದಾದ ಸರ್ಕಾರ, ಬಿಜೆಪಿ ಕಾಲದ ಪ್ರಕರಣಕ್ಕೆ ಮರು ಜೀವದ ತೀರ್ಮಾನ ಮಾಡಿದೆ.
Advertisement
Advertisement
ಬಿಟ್ ಕಾಯಿನ್ ಹಗರಣ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿತ್ತು. ಇದರಲ್ಲಿ ಕೆಲವು ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕೈ ಜೋಡಿಸಿದ್ದಾರೆ ಎಂಬ ವದಂತಿ ದಟ್ಟವಾಗಿತ್ತು. ಈ ಹಗರಣದ ಸೂತ್ರಧಾರ ಎನ್ನಲಾಗಿದ್ದ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ನಂತರ ಬಿಡುಗಡೆ ಮಾಡಿದ್ದರು. ಇದನ್ನೂ ಓದಿ: ಕೋಲಾರದ ರೆಸಾರ್ಟ್‌ನಲ್ಲಿ ಹೈಟೆಕ್ ವೇಶ್ಯಾವಾಟಿಕೆ – 14 ಜನರ ಬಂಧನ, 6 ಮಹಿಳೆಯರ ರಕ್ಷಣೆ