Bengaluru City

ದಯಮಾಡಿ ವದಂತಿಗಳನ್ನು ಹಬ್ಬಿಸಬೇಡಿ: ಕೈಮುಗಿದು ಬೇಡಿಕೊಂಡ ಪ್ರಥಮ್

Published

on

Share this

– ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಪ್ರಥಮ್ ಮೊದಲ ಪ್ರತಿಕ್ರಿಯೆ

– ನಟಿಯೊಂದಿಗೆ ಮಾಡಿದ್ದ ತಮಾಷೆ ಬಗ್ಗೆ ಸ್ಪಷ್ಟನೆ ನೀಡಿದ ಪ್ರಥಮ್

ಬೆಂಗಳೂರು: ಸ್ನೇಹಿತನೊಂದಿಗೆ ಜಗಳವಾಡಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಿಗ್ ಬಾಸ್ ವಿನ್ನರ್ ಪ್ರಥಮ್ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಡಿಸ್ಚಾರ್ಜ್ ಬಳಿಕ ಆಸ್ಪತ್ರೆಯಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಥಮ್, ಕೆಲವೊಂದು ರೂಮರ್ಸ್‍ನಿಂದ ಡಿಸ್ಟರ್ಬ್ ಆಗಿದ್ದೆ. ಇನ್ಮುಂದೆ ಯಾವತ್ತೂ ಈ ರೀತಿ ಮಾಡಲ್ಲ. ಸ್ವಲ್ಪ ಆತುರದ ನಿರ್ಧಾರ ತೆಗೆದುಕೊಂಡಿದ್ದೆ. ನನ್ನ ಬಗ್ಗೆ ಬಂದಿರೋ ವಿಷಯಗಳ ಬಗ್ಗೆ ಪರಿಶೀಲಿಸಿ. ಆದಷ್ಟು ಸತ್ಯಾಸತ್ಯತೆ ಪರಿಶೀಲಿಸಿ ವರದಿ ಪ್ರಸಾರ ಮಾಡಿ. ಮೀಡಿಯಾದವರು ಬೆಂಬಲಿಸಿ ಬೆಳೆಸಿದ್ದೀರ. ಇನ್ಮುಂದೆಯೂ ಇದೇ ರೀತಿ ಇರಲಿ ಅಂತಾ ಹೇಳಿದ್ರು.

ಕಿಮ್ಸ್ ಆಸ್ಪತ್ರೆಯ ವೈದ್ಯರು ನನ್ನನ್ನ ಚೆನ್ನಾಗಿ ನೋಡಿಕೊಂಡಿದ್ದಾರೆ. ಈ ಜಗತ್ತಿನಲ್ಲಿ ನಾನು ಯಾರನ್ನೂ ನಂಬಲ್ಲ. ಕೆಲವೊಂದು ಸುದ್ದಿಗಳು ನನಗೆ ನೋವು ತರಿಸಿತು. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ತೆಗೆದಕೊಂಡೆ ಅಂತಾ ಹೇಳಿದ್ರು.

ಮಾಧ್ಯಮಕ್ಕೆ ಧನ್ಯವಾದ: ಒಬ್ಬ ಸಾಮಾನ್ಯ ಮನುಷ್ಯನನ್ನು ಬಿಗ್ ಬಾಸ್ ಮೂಲಕ ಎತ್ತರಕ್ಕೆ ತಂದ ಮಾಧ್ಯಮಗಳಿಗೆ ನನ್ನ ಅಭಿನಂದನೆ. ಬಿಗ್ ಬಾಸ್‍ನಲ್ಲಿ ಗೆದ್ದ ಹಣದಲ್ಲಿ ಯಾರಿಗೆಲ್ಲಾ ನೀಡುತ್ತೇನೆ ಅಂತಾ ಮಾತು ಕೊಟ್ಟಿದ್ದೇನೋ ಆ ಮಾತಿಗೆ ಬದ್ಧನಾಗಿರುತ್ತೇನೆ. ಬಿಗ್ ಬಾಸ್‍ನಿಂದ ಏಪ್ರಿಲ್ 3ಕ್ಕೆ ಹಣ ನನ್ನ ಕೈ ಸೇರಿದೆ. ಈ ಮಧ್ಯೆಯೇ ಜನ ವದಂತಿ ಹಬ್ಬಿಸಿರೋದು ಬಹಳ ದುಃಖ ತಂದಿದೆ. ವಿಶ್ರಾಂತಿಗೆ ಅಂತಾ ಹೋದ್ರೂ ನಾನು ಸಮಾಜಕ್ಕಾಗಿ ಕೆಲಸ ಮಾಡುತ್ತೇನೆ. ಇಂದೇ ಹುಟ್ಟೂರಿನ ತವಸಾರೆ ಬೆಟ್ಟಕ್ಕೆ ಲೈಟ್ ಹಾಕಿಸ್ತೀನಿ. ಒಂದು ವಾರದ ನಂತರ ಶೂಟಿಂಗ್‍ಗೆ ಮರಳ್ತೀನಿ ಅಂತಾ ಹೇಳಿದ್ರು.

ಸಾಲ ಮಾಡಿಲ್ಲ: ಯಾರೋ ಪ್ರಥಮ್ 2 ಕೋಟಿ ರೂ. ಸಾಲ ಮಾಡಿದ್ದಾನೆ ಅಂತಾ ಹೇಳಿರೋದು ನನ್ನ ಕಿವಿಗೆ ಬಿದ್ದಿತ್ತು. ದೇವರಾಣೆ ಹೇಳ್ತೀನಿ ನಾನು ಒಂದೇ ಒಂದು ರೂ. ಸಾಲ ಮಾಡಿಲ್ಲ. ಸುಖಾಸುಮ್ಮನೆ ಸುಳ್ಳು ಸುದ್ದಿಗೆ ಕಿವಿಗೊಟ್ಟು ಪರಿಶೀಲಿಸದೆ ನನ್ನ ಬಗ್ಗೆ ಹಿಂದೆಯಿಂದ ಮಾತನಾಡಬೇಡಿ. ಬೇಕಿದ್ರೆ ಅದನ್ನು ಸ್ಪಷ್ಟಪಡಿಸಲು ನನ್ನ ಬಳಿಯೇ ಕೇಳಿ. ಉತ್ತರ ನೀಡುತ್ತೇನೆ. ಆದ್ರೆ ವದಂತಿಗಳನ್ನು ಮಾತ್ರ ಹಬ್ಬಿಸಬೇಡಿ ಅಂತಾ ಪ್ರಥಮ್ ಬೇಡಿಕೊಂಡ್ರು.

ಈ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾಡಿದ್ದ ತಮಾಷೆ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಕನ್ನಡದ ಜನಪ್ರಿಯ ನಟಿಯನ್ನು ಒಂದು ಕಾರ್ಯಕ್ರಮದಲ್ಲಿ ಭೇಟಿ ಮಾಡಿದ್ದೆ. ಈ ವೇಳೆ ಆ ನಟಿ, “ಪ್ರಥಮ್ ಇದು ನನ್ನ ಅಮ್ಮ. ನಿಮ್ಮ ದೊಡ್ಡ ಅಭಿಮಾನಿ” ಅಂತಾ ಹೇಳಿದ್ರು. ಆವಾಗ ನಾನು ಹೌದಾ.. ಹಾಯ್ ಮಮ್ಮಿ ಹೌ ಆರ್ ಯೂ ಅಂದೆ. ಆಗ ಆ ನಟಿ, ಪ್ರಥಮ್… ಅದು ನನ್ನ ಅಮ್ಮ ಅಂದ್ರು. ಅದಕ್ಕೆ ನಾನು ಹಾಯ್ ಅತ್ತೆ ಅಂತಾ ತಬ್ಬಿಕೊಂಡೆ. ಇದು ಕೇವಲ ತಮಾಷೆಗಾಗಿ ಮಾಡಿದೆ. ಆದ್ರೆ ಜನ ಇದನ್ನ ತಪ್ಪು ತಿಳಿದುಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಹುಡುಗಿಯರ ಹುಚ್ಚು ಇಲ್ಲ. ಕ್ರಿಕೆಟ್ ಬೆಟ್ಟಿಂಗ್ ಹುಚ್ಚು ಇಲ್ಲ. ದಯಮಾಡಿ ಈ ಥರ ಮಾಡ್ಬೇಡಿ. ಬಿಗ್ ಬಾಸ್ ಗೆದ್ದ ತಕ್ಷಣ ನಾನು ಬದಲಾಗಿಲ್ಲ. ನಾನಿರುವುದೇ ಹೀಗೆ. ಮೂರು ಸಿನಿಮಾ ಒಪ್ಕೊಂಡಿದ್ದೀನಿ ಅಂದ್ರು.

https://www.youtube.com/watch?v=fRdynS3jT1E&spfreload=10

Click to comment

Leave a Reply

Your email address will not be published. Required fields are marked *

Advertisement
Advertisement