ದೊಡ್ಮನೆ ಆಟ ಶುರುವಾಗಿ ಈಗ 4ನೇ ವಾರಕ್ಕೆ ಕಾಲಿಡ್ತಿದೆ. ಆದರೆ ಯಾವೊಬ್ಬ ಸ್ಪರ್ಧಿನೂ ಕಿಚ್ಚನ ಕೈಯಿಂದ ಚಪ್ಪಾಳೆ ಗಿಟ್ಟಿಸಿಕೊಂಡಿರಲಿಲ್ಲ. ಆದರೆ ನೀತೂ ಆಟ, ನಡೆ ನುಡಿ ಎಲ್ಲವೂ ಪ್ರೇಕ್ಷಕರ ಮತ್ತು ಕಿಚ್ಚನ ಗಮನ ಸೆಳೆದಿದೆ. ನೀತೂ (Neethu Vanajakshi) ಪ್ರಯತ್ನಕ್ಕೆ ಪ್ರಶಂಸೆ ನೀಡಿ ಸುದೀಪ್ ಚಪ್ಪಾಳೆ ತಟ್ಟಿದ್ದಾರೆ.
ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಒಂದು ಸ್ಪೆಷಲ್ ಇದೆ. ಅದುವೇ ಕಿಚ್ಚನ ಚಪ್ಪಾಳೆ. ಸೀಸನ್ ಶುರುವಾದಾಗ ಇಡೀ ವಾರ ಯಾರು ಚೆನ್ನಾಗಿ ಆಟ ಆಡುತ್ತಾರೆ ಅವರಿಗೆ ಕಿಚ್ಚನ ಚಪ್ಪಾಳೆ ಸಿಗುತ್ತೆ. ಇದೀಗ ಈ ವಾರ ನೀತೂಗೆ ಚಪ್ಪಾಳೆ ಕೊಟ್ಟ ಕಿಚ್ಚ, ಈ ವಾರದ ಚಪ್ಪಾಳೆ ನೀತೂಗೆ ಸಿಕ್ತಾ ಇದೆ. ಕಳೆದ ವಾರ ನೀತೂಗೆ ಖಾಲಿ ಡಬ್ಬ, ವಿಲನ್ ಅಂತೆಲ್ಲಾ ನಾಲ್ಕೈದು ಬೋರ್ಡ್ ಬಿದ್ದಿತ್ತು.
ಆದರೆ ಈ ವಾರ ನೀತೂ ಅವರಲ್ಲಿ ತುಂಬಾ ಸ್ಪಿರಿಟ್ ಇತ್ತು. ಮುಂದೆ ಬಂದ್ರಿ, ಆಟ ಆಡಿದ್ರಿ, ನಿಂತ್ರಿ, ಮಾತಾಡೋ ಕಡೆ ಮಾತಾಡಿದ್ರಿ, ಸೈಲೆಂಟ್ ಆಗಿರುವ ಕಡೆ ಸೈಲೆಂಟ್ ಆಗಿದ್ರಿ ಎಂದು ಕಿಚ್ಚ ಸುದೀಪ್ ಹಾಡಿ ಹೊಗಳಿದ್ದಾರೆ. ಅದರಲ್ಲೂ ಸೀಸನ್ 10ರ ಮೊದಲ ಚಪ್ಪಾಳೆಯನ್ನ ನೀತು ಕಿಚ್ಚನ ಕಡೆಯಿಂದ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ:ಕಿಚ್ಚನ ಮುಂದೆಯೇ ವಿನಯ್‌ಗೆ ಚಾಟಿ ಬೀಸಿದ ಮನೆಮಂದಿ
ನೀತೂಗೆ ಕಳೆದ ವಾರದವರೆಗೂ ಸಾಕಷ್ಟು ನೆಗೆಟಿವ್ ಪಾಯಿಂಟ್‌ಗಳು ಸಿಕ್ಕಿದ್ದವು. ಅದನ್ನು ಸುದೀಪ್ ಕೂಡ ಹೇಳಿದ್ದಾರೆ. ಕಳೆದ ವಾರ ಅವರ ಮೇಲೆ ಸಾಕಷ್ಟು ಮಾತು ಬರುತ್ತೆ. ಆರೋಪ ಬರುತ್ತೆ. ಆದರೆ, ಆ ವ್ಯಕ್ತಿ ಈ ವಾರ ಸಖತ್ತಾಗಿ ಆಡಿ, ರಾಯಲ್ ಆಗಿ ಮಲಗುತ್ತಾರೆ ಎಂದು ನೀತೂ ಬಗ್ಗೆ ಕಿಚ್ಚ ಹೊಗಳಿದ್ದಾರೆ.
ಟ್ರ್ಯಾನ್ಸ್ ಜೆಂಡರ್ ನೀತೂ, ಇದೀಗ ಕ್ಯಾಪ್ಟನ್ ಕೂಡ ಆಗಿದ್ದಾರೆ. ತನಿಷಾಗೆ ಠಕ್ಕರ್ ಕೊಟ್ಟು ನೀತೂ ಗೆದ್ದಿದ್ದಾರೆ. ಸ್ನೇಹಿತ್, ರಕ್ಷಕ್ ಬಳಿಕ ನೀತೂ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]