ರೂಪೇಶ್(Roopesh) ಅವರ ಕ್ಯಾಪ್ಟೆನ್ಸಿ ಮುಗಿದಿದೆ. ಯಾರೇ ಕ್ಯಾಪ್ಟನ್ ಆದರೂ ಮುಗಿದ ಮೇಲೆ ಮನೆಯವರಿಂದ ಅಂಕ ನೀಡಲಾಗುತ್ತದೆ. ಅದರಂತೆ ರೂಪೇಶ್ಗೂ ಮನೆಯವರೆಲ್ಲ ಪಾಸಿಟಿವ್ ಅಂಡ್ ನೆಗೆಟಿವ್ ಎರಡನ್ನು ಹೇಳಿ ಒಂದಷ್ಟು ಅಂಕ ನೀಡಿದರು.
ಅದರಲ್ಲಿ ಎಲ್ಲಾ ಮುಗಿದ ಮೇಲೂ ರೂಪೇಶ್ ಬೆಂಬಿಡದಂತೆ ರಾಕೇಶ್(Rakesh) ಹೋಗಿ ಬೆಡ್ ರೂಮಿನಲ್ಲಿ ಅದನ್ನೇ ಮಾತನಾಡುತ್ತಿದ್ದಾನೆ. ರೂಪೇಶ್, ನಂಗೆ ಸುತ್ತಿ ಬಳಸಿ ಮಾತನಾಡುವಂತದ್ದು ಏನು ಇಲ್ಲ. ಡೈರೆಕ್ಟ್ ಆಗಿ ಪಾಯಿಂಟ್ಗೆ ಬರ್ತೀನಿ. ಸಾನ್ಯಾ(Sanya) ವಿಚಾರದಲ್ಲಿ ಸಾಫ್ಟ್ ಆದೆ ಅನ್ನಿಸಿತು ಎಂದಿದ್ದಾನೆ. ಆಗ ರೂಪೇಶ್ ಅವಳಿಗೆ ಮಾತ್ರ ಕಳುಹಿಸಿಲ್ಲ. ಎಲ್ಲರಿಗೂ ಅವಕಾಶ ಕೊಡಬೇಕು ಎಂಬ ಕಾರಣಕ್ಕೆ ನಂದುಗೆ ಬಿಟ್ಟುಕೊಟ್ಟಿದ್ದೆ ಎಂದು ಅಂದಿನ ಗೇಮ್ನ ವಿವರಣೆ ನೀಡಿದ್ದಾನೆ.
Advertisement
Advertisement
ಆ ಮೂರು ಜನರಲ್ಲಿ ಪ್ರಿಯಾರಿಟಿ ಜಾಸ್ತಿ ಇತ್ತು ನನಗನ್ನಿಸಿತು. ಇಲ್ಲಿ ಏನು ನಡೀತಾ ಇದೆ ಅಂತ ನನಗೆ ಗೊತ್ತಾಗುತ್ತಿಲ್ಲ. ಆದರೆ ನೀನು ಅದ್ಯಾಕೋ ಪರ್ಸನಾಲಿಟಿಯಲ್ಲಿ ಸ್ವಲ್ಪ ಡಲ್ ಆಗುತ್ತಿದ್ದೀಯಾ ಅನ್ನಿಸುತ್ತಿದೆ. ನಿಮ್ಮಿಬ್ಬರ ನಡುವೆ ಏನೋ ನಡೀತಾ ಇದೆ ಅನ್ನಿಸ್ತಾ ಇದೆ ಎಂದು ರಾಕೇಶ್ ಹೇಳಿದಾಗ ರೂಪೇಶ್ ಸ್ವಲ್ಪ ಗೊಂದಲಕ್ಕೀಡಾಗಿದ್ದಾನೆ. ಆಗ ನನಗೇನು ಆ ರೀತಿ ಅನ್ನಿಸ್ತಾ ಇಲ್ಲ. ಕ್ಯಾಪ್ಟನ್ ಆಗಿ ನಡೆದುಕೊಂಡಿದ್ದೀನಿ. ಬೇಕಾದರೆ ಆ ಬಗ್ಗೆ ನಾನು ಆಲೋಚನೆ ಮಾಡಿಕೊಳ್ಳುತ್ತೇನೆ. ಒಂದು ದಿನ ಆಗಿರುವುದು ಬಿಟ್ಟರೆ ಬೇರೆ ದಿನ ಆಗಿಲ್ಲ ಎಂದು ರೂಪೇಶ್ ಮತ್ತೆ ಸ್ಪಷ್ಟನೆ ನೀಡಿದ್ದಾನೆ.
Advertisement
ಮತ್ತೆ ಮಾತು ಮುಂದುವರೆಸಿದ ರಾಕೇಶ್, ನಿನ್ನ ತಮಾಷೆ, ನಿನ್ನ ತರಲೆಗಳನ್ನು ನಾವೂ ಕೇಳಿಯೇ ಇಲ್ಲ. ನಿನ್ನ ತಮಾಷೆಯನ್ನು ನಾವೂ ಮಿಸ್ ಮಾಡಿಕೊಳ್ಳುತ್ತಾ ಇದ್ದೀವಿ ಎಂದಿದ್ದಾನೆ. ಅದಕ್ಕೆ ತಕ್ಕಂತೆ ತಿರುಗೇಟು ನೀಡಿದ ರೂಪೇಶ್, ಹಾಗೇ ನೋಡಿದರೆ ನೀನು ಸೋನು ಜೊತೆ ಮಾತನಾಡುವ ಶೈಲಿ, ಬೇರೆಯವರ ಹತ್ರ ಮಾತನಾಡುವ ಶೈಲಿಯಲ್ಲಿ ಬದಲಾವಣೆ ಇದೆ. ನನ್ನ ಹತ್ತಿರ ಅಂತು ಓಪನ್ ಅಪ್ ಆಗಿಯೇ ಇಲ್ಲ ಎಂದಿದ್ದಾನೆ. ಈ ಮಾತುಕತೆಗಳು ಮುಂದುವರಿದು ಒಂದು ಹಗ್ ಮಾಡಿ, ಡಿಸ್ಪ್ಯಾಚ್ ಆಗಿದ್ದಾರೆ.
Advertisement
ಇನ್ನು ರೂಪೇಶ್ ಈ ಮಾತನ್ನು ಸಾನ್ಯಾಳಿಗೆ ಹೇಳುತ್ತಿದ್ದಾನೆ. ರಾಕಿಗೆ ನಿಂಗೆ ಅವಕಾಶ ಕೊಟ್ಟಂತೆ ಅನ್ನಿಸುತ್ತಿದೆಯಂತೆ. ನಾನು ಅದನ್ನು ಕ್ಲಾರಿಟಿ ಕೊಟ್ಟಿದ್ದೀನಿ ಎಂದಾಗ ಸಾನ್ಯಾ, ನೀನು ಯಾವಾಗಲೂ ಫ್ರೆಂಡ್ಸ್ ಅಂತ ನೋಡಿನೇ ಇಲ್ಲ ಅಂದಿದ್ದಾಳೆ. ಅವನತ್ರ ಏನು ಇಟ್ಟುಕೊಂಡು ಮಾತನಾಡುತ್ತಿದ್ದಾನೆ ಗೊತ್ತಾಗುತ್ತಿಲ್ಲ. ನನ್ನ ಒಳ್ಳೆಯದ್ದಕ್ಕೆ ಹೇಳುತ್ತಾ ಇರುವುದು ಅಂತ ಹೇಳುತ್ತಾನೆ. ಒಂದು ವೇದಿಕೆ ಅಂದ್ರೆ ಅಗ್ರೆಸ್ಸಿವ್ ಆಗುತ್ತೀನಿ ಅಂತಿದ್ದ. ಹಾಗಾದ್ರೆ ಇದು ಏನು. ಮನೆಯಲ್ಲಿದ್ದಾಗ ಹೇಗೆ ಇರುತ್ತೀವಿ ಆ ರೀತಿ ಇರಬೇಕು ಅಲ್ವಾ ಅಂತ ಸಾನ್ಯಾ ಜೊತೆಗೆ ಮಾತು ಮುಗಿಸಿದ. ಇದನ್ನೂ ಓದಿ: ಚಪ್ಪಲಿಗೆ ಬಟ್ಟೆ ಸುತ್ತುಕೊಂಡು ಹೊಡಿತ್ತೀನಿ ಎಂದು ಜಯಶ್ರೀ ವಾರ್ನಿಂಗ್ ಕೊಟ್ಟಿದ್ಯಾರಿಗೆ?
ಮತ್ತೆ ರಾಕಿ ಬಳಿ ಬಂದ ರೂಪೇಶ್, ನಾನು ಆ ಬಗ್ಗೆ ಮಾತನಾಡುವುದಕ್ಕೆ ಯಾಕೆ ಸಮಯ ತೆಗೆದುಕೊಂಡೆ ಎಂದರೆ ಎಲ್ಲವನ್ನು ಅವಲೋಕನ ಮಾಡಿಕೊಳ್ಳಬೇಕಿತ್ತು ಅದಕ್ಕೆ ಎಂದು ವಿವರಣೆ ನೀಡುತ್ತಾ ಬಂದಿದ್ದು, ನೀನು ಹೇಳಿದ ಕೆಲವೊಂದು ಪಾಯಿಂಟ್ ಓಕೆ ಅನ್ನಿಸಿತು. ಅದನ್ನು ತಿದ್ದುಕೊಳ್ಳುತ್ತೇನೆ. ಆದರೆ ಓವರ್ ಆಲ್ ನನ್ನನ್ನು ನೋಡುವಾಗ ಸಾನ್ಯಾ ಬಂದ್ರೆ ಮಾತ್ರ ಫ್ರೆಂಡ್ಶಿಪ್ ಮಾತ್ರ ಕಾಣಿಸುತ್ತೆ ಎಂದು ಹೇಳುತ್ತಾನೆ. ಅದೇ ವೇಳೆ ಬಿಗ್ಬಾಸ್ ಎಲ್ಲರಿಗೂ ಲೀವಿಂಗ್ ಏರಿಯಾ ಸೋಫಾದಲ್ಲಿ ಕುಳಿತುಕೊಳ್ಳಲು ಹೇಳಿದ್ದರು. ಆಮೇಲೆ ಸಿಗು ಮತ್ತೆ ಈ ಬಗ್ಗೆ ಮಾತನಾಡೋಣ ಎಂದು ಒಂದಷ್ಟು ಚರ್ಚೆ ನಡೆಯಿತು.
ಈ ಬಗ್ಗೆ ಸಂಜೆ ಮತ್ತೆ ಸಾನ್ಯಾ ಮತ್ತು ರೂಪೇಶ್ ಚರ್ಚೆ ನಡೆಸಿದ್ದಾರೆ. ಆಗ ಸಾನ್ಯಾ ಅವನು ನಾನು ಹೇಳಿದ್ದೆ ಯಾವಾಗಲೂ ರೈಟ್ ಎಂಬ ರೀತಿ ಕ್ರಿಯೇಟ್ ಆಗಿದೆ. ಅದನ್ನೇ ಬಂಡವಾಳವಾಗಿಟ್ಟುಕೊಂಡು ಎಲ್ಲೆಲ್ಲಿ ಮಾತು ಅಗತ್ಯವಿಲ್ಲವೋ ಅಲ್ಲಿಯೂ ಮಾತನಾಡುವುದಕ್ಕೆ ಶುರು ಮಾಡಿದ್ದಾನೆ. ಸ್ಮಾರ್ಟ್ ಗೇಮ್ ಎಂದಿದ್ದಾಳೆ. ಇದನ್ನೂ ಓದಿ: ಎಲ್ಲರಿಗೂ ಅವಕಾಶ ಕೊಡುವ ಆತುರದಲ್ಲಿ ಕ್ಯಾಪ್ಟನ್ ರೂಪೇಶ್ ಶೆಟ್ಟಿ ಮಾಡಿದ ಎಡವಟ್ಟೇನು ಗೊತ್ತಾ?