– ನೇಪಾಳದಲ್ಲಿ ನಾಪತ್ತೆಯಾದ ಬೆಂಗಳೂರಿನ ದಂಪತಿ
ಬೆಂಗಳೂರು: ನೇಪಾಳ ಜಲಪ್ರಳಯದಲ್ಲಿ (Nepal Flood)ಬೆಂಗಳೂರಿನ ದಂಪತಿ ನಾಪತ್ತೆಯಾಗಿದ್ದು, 10 ದಿನವಾದ್ರೂ ಹೆತ್ತವರ ಸುಳಿವು ಸಿಗದೇ ಮಗಳು ತನ್ವಿ ಕಂಗಾಲಾಗಿದ್ದಾರೆ.
ಡಿಎನ್ಎ ಟೆಸ್ಟ್ಗೆ ಮೃತದೇಹಗಳನ್ನು ಕಳುಹಿಸಲಾಗಿದ್ದರೂ, ಇದುವರೆಗೂ ಯಾವುದೇ ಮೃತದೇಹವೂ ದಂಪತಿಯೊಂದಿಗೆ ಮ್ಯಾಚ್ ಆಗಿಲ್ಲ. ಅತ್ತ ರೆಸ್ಕ್ಯೂ ಕೂಡ ಆಗಿಲ್ಲ. ಹೀಗಾಗಿ ತಂದೆ-ತಾಯಿ ಇಬ್ಬರೂ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮಗಳು ತನ್ವಿ ಭಾವುಕ ಸಂದೇಶದ ಮೂಲಕ ಸಹಾಯ ಕೋರಿದ್ದಾರೆ.
ʻʻನಾನೀಗ ಬದುಕನ್ನು ಒಂಟಿಯಾಗಿ ಎದುರಿಸಬೇಕಾಗಿದೆ. ಅಪ್ಪ-ಅಮ್ಮ ನನ್ನ ಎಲ್ಲವನ್ನೂ ನೋಡಿಕೊಳ್ತಾ ಇದ್ರು. ಈಗ ದಿಢೀರನೆ ನನ್ನನ್ನು ಬಿಟ್ಟು ಹೋಗಿದ್ದಾರೆʼʼ ಎಂದು ತನ್ವಿ ಭಾವುಕವಾಗಿ ಸಂದೇಶ ನೀಡಿದ್ದಾರೆ.
ನಿನ್ನೆ ವಾಪಸ್ ಯಾತ್ರೆ ಮುಗಿಸಿ ಬೆಂಗಳೂರಿಗೆ ಬರಬೇಕಿದ್ದ ತಂದೆ-ತಾಯಿ ನಾಪತ್ತೆಯಾಗಿದ್ದಾರೆ. ಬೆಂಗಳೂರಿನ ವೆಂಕಟರಾವ್ ಅನ್ನಂದೇವರ ಹಾಗೂ ಅವರ ಪತ್ನಿ ಅನಘಾ ಅನ್ನಂದೇವರ ಅವರು 67 ಜನರ ತಂಡದೊಂದಿಗೆ ಕೈಲಾಸ ಪರ್ವತ ಯಾತ್ರೆಗೆಂದು ನೇಪಾಳಕ್ಕೆ ತೆರಳಿದ್ದರು.
ದಂಪತಿಗಳ ಕೊನೆಯ ಲೊಕೇಷನ್ ವಲಸೆ ಕಚೇರಿ ಹಾಗೂ ನೇಪಾಳದ ಫ್ರೆಂಡ್ಶಿಪ್ ಬ್ರಿಡ್ಜ್ ಬಳಿ ಟ್ರ್ಯಾಕ್ ಆಗಿತ್ತು. ಆಗಸ್ಟ್ 30ರ ಬಳಿಕ ತಂದೆ-ತಾಯಿಯನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ತನ್ವಿ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ – 8 ವಿಮಾನ ನಿಲ್ದಾಣಗಳು ಬಂದ್, 1.70 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಪರದಾಟ
ತಂದೆ-ತಾಯಿಯ ಸುಳಿವು ಸಿಗದ ಹಿನ್ನೆಲೆಯಲ್ಲಿ ತನ್ವಿ, ನನಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ್ರೆ ಹುಷಾರ್ – ತ್ರಿಷಾ ಟೀಕಿಸಿದವರಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ವಿಜಯ್
