ಬೆಂಗಳೂರು: ವೈದ್ಯನ ವಿರುದ್ಧ ಯುವತಿಯನ್ನು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಬೆಂಗಳೂರಿನ ಕೊಡಿಗೆಹಳ್ಳಿಯ ವಿಖ್ಯಾತ್ (Bengaluru) ಡಯಾಗ್ನೋಸ್ಟಿಕ್ ವೈದ್ಯ ಯುವರಾಜ್ ಮನೋಹರ್ ವಿರುದ್ಧ ಎಫ್‌ಐಆರ್ (FIR)ದಾಖಲಾಗಿದೆ.
ಇದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಕೆಲಸದ ವೇಳೆ ಪ್ರಜ್ಞೆ ತಪ್ಪಿಸುವ ಮಾತ್ರೆ ನೀಡಿ ಅತ್ಯಾಚಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದೇ ವೇಳೆ ವಿಡಿಯೋ ಮಾಡಿಕೊಂಡು, ಬ್ಲ್ಯಾಕ್‌ಮೇಲ್ ಮಾಡಿ ಹಲವು ಬಾರಿ ಅತ್ಯಾಚಾರ ಮಾಡಲಾಗಿದೆ ಎಂದು ಯುವತಿ ಆರೋಪಿಸಿದ್ದಾಳೆ. ಇದನ್ನೂ ಓದಿ: ರಾಜ್ಯದ 175 ತಾಲೂಕುಗಳನ್ನ ಬರ ಘೋಷಣೆ ಮಾಡಿ: ಆರ್. ಅಶೋಕ್ ಆಗ್ರಹ
ಸದ್ಯ ವೈದ್ಯ ಯುವರಾಜ್ ಮನೋಹರ್ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಇದನ್ನೂ ಓದಿ: ಮಂಡ್ಯದಲ್ಲಿ ಗಣೇಶೋತ್ಸವಕ್ಕೆ ಖಾಕಿ ಹೈ ಅಲರ್ಟ್; ಕಿಡಿಗೇಡಿಗಳಿಗೆ ಎಸ್‌ಪಿ ಖಡಕ್ ವಾರ್ನಿಂಗ್
