ಲಂಡನ್: ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಹಾಗೂ ಸ್ಟಾರ್ ಆಲ್‌ರೌಂಡರ್ ಬೆನ್‌ಸ್ಟೋಕ್ಸ್ ಸರಣಿ ಮಧ್ಯದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
Ben Stokes announcing his retirement during the ongoing Test. 🥹
– One of the greatest ever all rounders! pic.twitter.com/W6NM1704rI
— Mufaddal Vohra (@mufaddal_vohra) June 28, 2026
ಟ್ರೆಂಟ್ ಬ್ರಿಡ್ಜ್‌ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ 3ನೇ ಮತ್ತು ನಿರ್ಣಾಯಕ ಟೆಸ್ಟ್ ಪಂದ್ಯವು ಅವರ ಕೊನೆಯ ಪಂದ್ಯವಾಗಲಿದೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಡ್ರೆಸ್ಸಿಂಗ್ ರೂಮ್‌ನಲ್ಲಿ ಸ್ಟೋಕ್ಸ್ ಅವರು ಮಾತನಾಡಿದ ವೀಡಿಯೋ ಹಂಚಿಕೊಳ್ಳುವ ಮೂಲಕ ಅವರ ನಿವೃತ್ತಿಯನ್ನ ಖಚಿತಪಡಿಸಿದೆ.
ನಿರ್ಣಾಯಕ ಟೆಸ್ಟ್ ಪಂದ್ಯದ 4ನೇ ದಿನದಾಟ ಶುರುವಾಗುವ ಮೊದಲೇ 35 ವರ್ಷ ವಯಸ್ಸಿನ ಬೆನ್‌ಸ್ಟೋಕ್ಸ್ ತಮ್ಮ ತಂಡದ ಆಟಗಾರರಿಗೆ ನಿವೃತ್ತಿಯ ನಿರ್ಧಾರ ತಿಳಿಸಿದ್ದಾರೆ. ಇದನ್ನೂ ಓದಿ: ವಾಲಿಬಾಲ್‌ನಲ್ಲಿ ಐತಿಹಾಸಿಕ ಸಾಧನೆ- ಕಂಚಿನ ಪದಕ ಗೆದ್ದ ಭಾರತ
GUARD OF HONOUR FOR BEN STOKES. ❤️ pic.twitter.com/Qx0jpJQhkA
— Mufaddal Vohra (@mufaddal_vohra) June 28, 2026
ಇದರ ನಂತರ, ಇಂಗ್ಲೆಂಡ್ ತಂಡವು ಭಾವನಾತ್ಮಕ ಸಂದೇಶ ಹಂಚಿಕೊಂಡಿತು, ಸ್ಟೋಕ್ಸ್ ಅವರನ್ನು ತಂಡದ ಅತ್ಯಂತ ಸ್ಪೂರ್ತಿದಾಯಕ ನಾಯಕ ಮತ್ತು ಶ್ರೇಷ್ಠ ಆಟಗಾರ ಎಂದು ಬಣ್ಣಿಸಿತು.
ಆಲ್‌ರೌಂಡರ್‌ನ ಆಲ್‌ರೌಂಡ್ ಆಟ
ಬೆನ್‌ಸ್ಟೋಕ್ಸ್ ಕೇವಲ ಒಂದೇ ಫಾರ್ಮ್ಯಾಟ್‌ಗೆ ಸೀಮಿತ ಆದವರಲ್ಲ. ಏಕದಿನ, ಟಿ20 ಕ್ರಿಕೆಟ್‌ನಲ್ಲೂ ಅವರ ಪಾರಮ್ಯಕ್ಕೆ ಎಲ್ಲೆಯೇ ಇರಲಿಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ 7,243 ರನ್‌ಗಳೊಂದಿಗೆ 251 ವಿಕೆಟ್, ಏಕದಿನ ಕ್ರಿಕೆಟ್‌ನಲ್ಲಿ 3,463 ರನ್ ಗಳಿಸಿ 74 ವಿಕೆಟ್ ಪಡೆದಿರುವ ಸ್ಟೋಕ್ಸ್, ಟಿ20 ಕ್ರಿಕೆಟ್‌ನಲ್ಲಿ 26 ವಿಕೆಟ್ ಪಡೆದು 585 ರನ್ ಗಳಿಸಿದ್ದಾರೆ.
ಚೊಚ್ಚಲ ಟ್ರೋಫಿ ತಂದುಕೊಟ್ಟ ಸ್ಟೋಕ್ಸ್
2019 ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಇಂಗ್ಲೆಂಡ್ ತಂಡದ ಪಾಲಿಗೆ ಅತ್ಯಂತ ನಿರ್ಣಾಯಕವಾಗಿತ್ತು. ಆ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸ್ಟೋಕ್ಸ್ ಗಳಿಸಿದ ಅಜೇಯ 84 ರನ್ ತಂಡವನ್ನು ಸೂಪರ್ ಓವರ್ ಹಂತಕ್ಕೆ ಕೊಂಡೊಯ್ದಿತು. ಕೊನೆಗೆ ಇಂಗ್ಲೆಂಡ್ ತಂಡವು ಚೊಚ್ಚಲ ವಿಶ್ವ ಕಿರೀಟ ಮುಡಿಗೇರಿಸಿಕೊಳ್ಳಲೂ ಕಾರಣವಾಯಿತು. ಸಾಲದ್ದಕ್ಕೆ 2022 ರಲ್ಲಿ ಟಿ20 ವಿಶ್ವಕಪ್ ತಂದುಕೊಡುವಲ್ಲಿ ಯಶಸ್ವಿ ಪ್ರರ್ದಶನ ನೀಡಿದ್ದರು. ಇದನ್ನೂ ಓದಿ: ಕೊಡಗಿಗೆ ಮತ್ತೊಂದು ಗರಿ – ತಲೆ ಎತ್ತುತ್ತಿದೆ ರಾಷ್ಟ್ರಮಟ್ಟದ ಕ್ರೀಡಾ ತರಬೇತಿ ಕೇಂದ್ರ

ಅಳಿಯದೇ ಉಳಿಯುವ ಸ್ಟೋಕ್ಸ್ ಆಟ
ಅಷ್ಟೇ ಅಲ್ಲ, ಆಶಸ್ ಸರಣಿ ವೇಳೆ ಹೆಡಿಂಗ್ಲಿಯಲ್ಲಿ ನಡೆದ ಪಂದ್ಯದಲ್ಲೂ ಏಕಾಂಗಿ ಪ್ರದರ್ಶನ ನೀಡಿ ಆಸ್ಟ್ರೇಲಿಯಾ ವಿರುದ್ಧ 1 ವಿಕೆಟ್ ರೋಚಕ ಜಯ ತಂದುಕೊಟ್ಟಿದ್ದು ಇದೇ ಸ್ಟೋಕ್ಸ್. ಆ ಪಂದ್ಯದಲ್ಲಿ ಸ್ಟೋಕ್ಸ್ ಅಜೇಯ 135 ರನ್ ಚಚ್ಚಿ, ಕೊನೇವರೆಗೂ ಹೋರಾಡಿದ್ದರು.
2016 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್‌ಟೌನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಬರೋಬ್ಬರಿ 258 ರನ್ (198 ಎಸೆತ, 11 ಸಿಕ್ಸ್, 30 ಬೌಂಡರಿ) ಸಿಡಿಸಿದ್ದರು. ಈ ಮೂಲಕ ಪಂದ್ಯವನ್ನು ಡ್ರಾಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಈ ರೀತಿ ಅನೇಯಕ ಅಸಾಧಾರಣ ಪ್ರದರ್ಶನಗಳಿಗೆ ಸ್ಟೋಕ್ಸ್ ಸಾಕ್ಷಿಯಾಗಿದ್ದಾರೆ. ಇದನ್ನೂ ಓದಿ: ವೆನೆಜುವೆಲಾ ಭೂಕಂಪಕ್ಕೆ ಸಿಲುಕಿ ಅರ್ಜೆಂಟೀನಾ ಫುಟ್ಬಾಲ್ ಆಟಗಾರನ ಪತ್ನಿ, ಮಕ್ಕಳು ದುರಂತ ಸಾವು
