ಬೀಜಿಂಗ್: ಚೀನಾದ ಬೀಜಿಂಗ್‌ನಲ್ಲಿ ನಡೆದ ಹೈರಾಕ್ಸ್ (HYROX) ಫಿಟ್ನೆಸ್ ಸ್ಪರ್ಧೆಯಲ್ಲಿ ಆಸ್ಟ್ರೇಲಿಯಾದ ಅಥ್ಲೀಟ್ ಜೋನ್ನಾ ವಿಯೆಟ್ರಿಝಿಕ್ (Joanna Wietrzyk) ಅವರಿಗೆ ಸಂಬಂಧಿಸಿದ ಘಟನೆಯೊಂದು ಜಾಗತಿಕ ಮಟ್ಟದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಮಹಿಳೆಯರ ಪ್ರೊ ವಿಭಾಗದ ರೇಸ್‌ನಲ್ಲಿ ಸ್ಪರ್ಧಿಸುತ್ತಿದ್ದ ಜೋನ್ನಾ ಅವರಿಗೆ ತೀವ್ರ ದೈಹಿಕ ಒತ್ತಡದಿಂದಾಗಿ ಓಡುತ್ತಿರುವಾಗಲೇ ಮಧ್ಯದಲ್ಲಿ ಮಲವಿಸರ್ಜನೆ ನಿಯಂತ್ರಣ ತಪ್ಪಿ ಭೇದಿಯಾಯಿತು. ಆದರೂ ಅವರು ಓಟವನ್ನು ನಿಲ್ಲಿಸದೇ ಇಡೀ ಟ್ರ್ಯಾಕ್ ಮತ್ತು ವ್ಯಾಯಾಮದ ಉಪಕರಣಗಳ ಮೇಲೆ ಮಲದ ಕಲೆಗಳಾಗುತ್ತಿದ್ದರೂ ಲೆಕ್ಕಿಸದೇ ಸ್ಪರ್ಧೆಯನ್ನು ಮುಂದುವರಿಸಿ, ಕೊನೆಗೆ ಪ್ರಥಮ ಸ್ಥಾನ ಪಡೆದರು.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಕೆಲವರು ಜೋನ್ನಾ ವಿಯೆಟ್ರಿಝಿಕ್ ಕ್ರೀಡಾಸ್ಪೂರ್ತಿಯನ್ನು ಮೆಚ್ಚಿಕೊಂಡರೆ ಕೆಲವು ಆಯೋಜಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಹೈರಾಕ್ಸ್ ಸ್ಪರ್ಧೆಯು ಒಳಾಂಗಣದಲ್ಲಿ (Indoor) ನಡೆಯುತ್ತದೆ ಮತ್ತು ಇಲ್ಲಿ ಸ್ಪರ್ಧಿಗಳು ಒಂದೇ ಉಪಕರಣಗಳನ್ನು (ಉದಾಹರಣೆಗೆ ರೋಯಿಂಗ್ ಯಂತ್ರ, ಭಾರವಾದ ಚೀಲಗಳು) ಹಂಚಿಕೊಂಡು ಬಳಸಬೇಕಾಗುತ್ತದೆ. ಇಂತಹ ಜೈವಿಕ ತ್ಯಾಜ್ಯದಿಂದಾಗಿ ಇತರೆ ಸ್ಪರ್ಧಿಗಳಿಗೆ ಸೋಂಕು ತಗುಲುವ ಅಪಾಯವಿತ್ತು ಮತ್ತು ಟ್ರ್ಯಾಕ್‌ನಲ್ಲಿದ್ದ ಮಲದ ಮೇಲೆ ಜಾರಿ ಕೆಲವರು ಬಿದ್ದರು ಎಂದು ಸಹವರ್ತಿ ಅಥ್ಲೀಟ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Fakta Seputar Kemenangan Joanna Wietrzyk dan AWAL TABERAK BERAK
-Mengalami Gangguan Pencernaan Parah: Di tengah perlombaan Joanna mengalami fecal incontinence atau taberak berak akibat tingginya intensitas fisik.
-Alih-alih berhenti karena merasa malu atau lemas, dia terus… pic.twitter.com/mpxQJ5YO8o
— mamam (@IcalBejedor) September 14, 2026
ಸ್ಪರ್ಧೆಯ ನಿಯಮಾವಳಿಗಳಲ್ಲಿ ಉಗುಳುವುದು ಅಥವಾ ಸೀನುವುದಕ್ಕೆ ಪೆನಾಲ್ಟಿ ವಿಧಿಸುವ ನಿಯಮವಿದ್ದರೂ, ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಅಥ್ಲೀಟ್ ಅನ್ನು ತಕ್ಷಣವೇ ತಡೆಯಲು ರೆಫರಿಗಳಿಗೆ ಸೂಕ್ತ ನಿಯಮಗಳಿರಲಿಲ್ಲ. ಸಂಘಟಕರು ತಕ್ಷಣವೇ ಸ್ಪರ್ಧೆಯನ್ನು ತಡೆದು ಜಾಗವನ್ನು ಸ್ವಚ್ಛಗೊಳಿಸಬೇಕಿತ್ತು ಎಂದು ತೀವ್ರ ಟೀಕೆ ವ್ಯಕ್ತವಾಯಿತು.
ಜೋನ್ನಾ ಅವರು ಗೆದ್ದ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಗೆಲುವೇ ಗೆಲುವು (A win is a win) ಎಂದು ಪೋಸ್ಟ್ ಮಾಡಿದ್ದು ಜನನ್ನು ಕೆರಳಿಸಿತ್ತು. ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಅವರು ಅದನ್ನು ಡಿಲೀಟ್ ಮಾಡಿದರು. ಕೆಲವರು ಅವರ ಕ್ರೀಡಾ ಮನೋಭಾವ ಮತ್ತು ಹಠವನ್ನು ಶ್ಲಾಘಿಸಿದರೆ, ಬಹುತೇಕರು ಇದು ಕ್ರೀಡಾ ಜಗತ್ತಿನ ಅತಿರೇಕ ಮತ್ತು ಸ್ವಾರ್ಥದ ನಡವಳಿಕೆ ಎಂದು ಟೀಕಿಸುತ್ತಿದ್ದಾರೆ.
ವಿವಾದ ತಾರಕಕ್ಕೇರಿದ ನಂತರ, ಹೈರಾಕ್ಸ್ ಸಂಸ್ಥೆಯ ಸಹ-ಸಂಸ್ಥಾಪಕ ಮೊರಿಟ್ಜ್ ಫರ್ಸ್ಟೆ (Moritz Fürste) ಅವರು ಅಧಿಕೃತವಾಗಿ ಕ್ಷಮೆಯಾಚಿಸಿದ್ದಾರೆ. ಕ್ರೀಡಾಕೂಟದ ಮಧ್ಯದಲ್ಲೇ ತಕ್ಷಣ ಸ್ಪರ್ಧೆಯನ್ನು ತಡೆಯದೆ ತಪ್ಪು ಮಾಡಿದ್ದೇವೆ ಎಂದು ಒಪ್ಪಿಕೊಂಡಿರುವ ಅವರು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕೂಡಲೇ ಹೊಸ ನಿಯಮಗಳನ್ನು ಜಾರಿಗೆ ತರುತ್ತಿರುವುದಾಗಿ ಘೋಷಿಸಿದ್ದಾರೆ. ಜೊತೆಗೆ ಆ ಕ್ರೀಡಾಂಗಣವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿ ಕಾರ್ಪೆಟ್‌ಗಳನ್ನು ಬದಲಾಯಿಸಲಾಗಿದೆ ಎಂದು ತಿಳಿಸಿದ್ದಾರೆ.
Australian athlete Joanna Wietrzyk was unable to control her bowels during a HYROX race in China. The first thing she did was release her bowels creating a mess ending up on her legs, clothing, the floor, and the equipment.
Now using the contaminated surface and trying to avoid… pic.twitter.com/aQZxlSt9ZR
— Dane (@UltraDane) September 14, 2026
ಏನಿದು ಹೈರಾಕ್ಸ್ ಸ್ಪರ್ಧೆ?
ಈ ಸ್ಪರ್ಧೆಯು ಜಗತ್ತಿನಾದ್ಯಂತ ಒಂದೇ ರೀತಿಯ ಕಟ್ಟುನಿಟ್ಟಾದ ಸ್ವರೂಪವನ್ನು ಹೊಂದಿರುತ್ತದೆ. ಸ್ಪರ್ಧಿಗಳು ಒಟ್ಟು 8 ಕಿಲೋಮೀಟರ್ ಓಟ ಮತ್ತು 8 ವಿಭಿನ್ನ ಫಂಕ್ಷನಲ್ ವರ್ಕ್‌ಔಟ್ ಸ್ಟೇಷನ್‌ಗಳನ್ನು ಪೂರ್ಣಗೊಳಿಸಬೇಕು.
ಜಗತ್ತಿನ ಯಾವುದೇ ದೇಶದಲ್ಲಿ ಹೈರಾಕ್ಸ್ ಸ್ಪರ್ಧೆ ನಡೆದರೂ ಟ್ರ್ಯಾಕ್ ಮತ್ತು ವರ್ಕ್‌ಔಟ್ ನಿಯಮಗಳು ಒಂದೇ ಆಗಿರುತ್ತವೆ. ಇದರಿಂದಾಗಿ ಪ್ರತಿಯೊಬ್ಬ ಸ್ಪರ್ಧಿಯ ಸಮಯವನ್ನು ಜಾಗತಿಕ ಲೀಡರ್‌ಬೋರ್ಡ್‌ನಲ್ಲಿ ಹೋಲಿಕೆ ಮಾಡಬಹುದು. ಇದರಲ್ಲಿ ಪ್ರೊ (Pro) ವಿಭಾಗದ ಜೊತೆಗೆ ಓಪನ್ (Open) ವಿಭಾಗವೂ ಇರುತ್ತದೆ. ಒಬ್ಬರೇ ಭಾಗವಹಿಸಬಹುದು (Singles), ಜೋಡಿಯಾಗಿ (Doubles) ಅಥವಾ ನಾಲ್ಕು ಜನರ ತಂಡವಾಗಿ (Relay) ಭಾಗವಹಿಸಲು ಅವಕಾಶವಿದೆ. ಇದನ್ನೂ ಓದಿ: ಏಷ್ಯಾ ಕಪ್ ಸ್ವೀಕರಿಸಲು ನಿರಾಕರಿಸಿದ ಭಾರತ – ಚೋರ್ ನಖ್ವಿ, ಟ್ರೋಫಿ ಚೋರ್ ಎಂದು ಛೇಡಿಸಿದ ಅಭಿಮಾನಿಗಳು

