ಬಾಗಲಕೋಟೆ: ರಾಜ್ಯ ಬಿಜೆಪಿಯಲ್ಲಿ ಅಡ್ಜಸ್ಟ್ ಮೆಂಟ್ ರಾಜಕಾರಣದ ಕದನ ತೀವ್ರಗೊಂಡಿದೆ. ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ನಿನ್ನೆ ಆಡಿದ್ದ ಮಾತುಗಳು ಮುರುಗೇಶ್ ನಿರಾಣಿ (Murugesh Nirani) ಕೋಪಕ್ಕೆ ಕಾರಣವಾಗಿದೆ.
ಬಾಗಲಕೋಟೆ (Bagalkote) ಯಲ್ಲಿ ಮಾತಾಡಿದ ಅವರು, ಯಾರಾದ್ರೂ ಬಾಯಿಗೆ ಬಂದಂತೆ ಮಾತಾಡಿದ್ರೆ, ಅದಕ್ಕಿಂತ ಅಪ್ಪನಂತೆ ಮಾತಾಡಲು ನನಗೂ ಬರುತ್ತೆ. ಬೇರೆಯವರ ಬಗ್ಗೆ ಮಾತಾಡುವ ಮೊದಲು ತಾವೇನು ಮಾಡಿದ್ದೇವೆ ಎಂಬ ಬಗ್ಗೆ ಮೊದಲು ಮಾತಾಡ್ಬೇಕು. ಯಾರ್ಯಾರು ಯಾರ್ಯಾರಿಂದ ಸೋತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇಷ್ಟುದಿನ ನಾನು ಸುಮ್ಮನಿರೋದು ನನ್ನ ದೌರ್ಬಲ್ಯ ಅಲ್ಲ. ಇಲಿ ಹೊಡೆಯಲು ಹೋಗಿ, ಗಣಪತಿಗೆ ಪೆಟ್ಟು ಬೀಳಬಾರದು ಎಂದು ಸುಮ್ಮನಿದ್ದೇನೆ.. ಯಾರಾದ್ರೂ ನನ್ನ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಇರಲಿ ಎಂದು ಗುಡುಗಿದ್ರು.
Advertisement
Advertisement
ಈ ಮೂಲಕ ತಮ್ಮ ಸೋಲಿಗೆ ಯತ್ನಾಳ್ ಕಾರಣ ಎಂದು ಪರೋಕ್ಷವಾಗಿ ದೂಷಿಸಿದ್ರು. ಇದಕ್ಕೆ ಯತ್ನಾಳ್ ವೇದಿಕೆಯಲ್ಲೇ ತಿರುಗೇಟು ಕೊಟ್ರು. ನನ್ನ ಸೋಲಿಸಲು ಎಲ್ಲೆಲ್ಲಿಂದಲೋ ದುಡ್ಡು ಕಳಿಸಿದ್ರು. ನಾನು ನೋಡ್ತೀನಿ, ನಮ್ಮ ಕಡೆನೂ ತಾಕತ್ತಿದೆ ಎನ್ನುವ ಮೂಲಕ ನಿರಾಣಿಗೆ ಎಚ್ಚರಿಕೆ ಕೊಟ್ರು. ಇದಕ್ಕೆ ಮತ್ತೆ ನಿರಾಣಿ ಪ್ರತ್ಯುತ್ತರ ನೀಡಿದ್ರು. ನಾನು ಹಣ ಕೊಟ್ಟಿದ್ದು ಬಿಜೆಪಿಗರಿಗೆ, ಕಾಂಗ್ರೆಸ್ಸಿಗರಿಗಲ್ಲ. ಈ ಅವಮಾನಕ್ಕೆ ಸರಿಯಾದ ಸಮಯದಲ್ಲಿ ಉತ್ತರ ಕೊಡ್ತೀನಿ ಅಂತಾ ವಾರ್ನಿಂಗ್ ನೀಡಿದ್ರು.
Advertisement
Advertisement
ಈ ಮಧ್ಯೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಈಶ್ವರಪ್ಪ, ರವಿಕುಮಾರ್ ಈ ಬೆಳವಣಿಗೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ, ಶೀಘ್ರವೇ ಎಲ್ಲಾ ಸರಿ ಹೋಗುವ ಭರವಸೆ ವ್ಯಕ್ತಪಡಿಸ್ತಿದ್ದಾರೆ. ಇದನ್ನೂ ಓದಿ: ಕೇಂದ್ರದ ಅಕ್ಕಿ ಬೇಕಿದ್ದರೆ ನಮ್ಮನ್ನು ಕೇಳಿಯೇ ಘೋಷಣೆ ಮಾಡ್ಬೇಕು: ಪ್ರಲ್ಹಾದ್ ಜೋಶಿ