ಚಾಮರಾಜನಗರ: ಇತ್ತೀಚೆಗೆ ಬಂಡೀಪುರ ಅರಣ್ಯದಲ್ಲಿ ರಣಹದ್ದುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಸಫಾರಿಗೆ ಹೋಗಿದ್ದವರಿಗೆ ರಣಹದ್ದುಗಳ ದರ್ಶನವಾಗಿದೆ.
ರಣಹದ್ದುಗಳ ದೃಶ್ಯ ಪ್ರವಾಸಿಗರಿಂದ ಸೆರೆಯಾಗಿದೆ. ನಶಿಸಿಹೋಗುತ್ತಿರುವ ರಣಹದ್ದುಗಳ ಸಂತತಿ ಕಂಡು ಪ್ರವಾಸಿಗರು ಖುಷ್ ಆಗಿದ್ದಾರೆ. ಆಗಿಂದಾಗ್ಗೆ ರಣಹದ್ದುಗಳು ಪ್ರವಾಸಿಗರ ಕಣ್ಣಿಗೆ ಬೀಳ್ತಿವೆ.
ರಣಹದ್ದುಗಳ ಸಂತತಿ ಹೆಚ್ಚಳಕ್ಕೆ ಅರಣ್ಯಾಧಿಕಾರಿಗಳು ನಿಗಾ ವಹಿಸಿದ್ದಾರೆ.
