ಸಿನಿಮಾ ಬಿಟ್ಟು ರಾಜಕೀಯದತ್ತ ರಮ್ಯಾ ಕೃಷ್ಣನ್? ಸ್ಪಷ್ಟನೆ ನೀಡಿದ ನಟಿ

Public TV
1 Min Read
RAMYA KRISHNAN

ನ್ನಡದ ರಾಜ ನರಸಿಂಹ, ನೀಲಾಂಬರಿ, ಗಡಿಬಿಡಿ ಗಂಡ ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ರಮ್ಯಾ ಕೃಷ್ಣನ್ (Ramya Krishnan) ರಾಜಕೀಯ ಅಖಾಡಕ್ಕೆ ಇಳಿಯುತ್ತಿದ್ದಾರೆ. ಸಿನಿಮಾರಂಗದಲ್ಲಿ ‘ಬಾಹುಬಲಿ’ (Bahubali) ನಟಿಗೆ ಭರ್ಜರಿ ಡಿಮ್ಯಾಂಡ್ ಇದೆ. ಹೀಗಿರುವಾಗ ರಾಜಕೀಯ ಎಂಟ್ರಿಯ ಬಗ್ಗೆ ನಟಿ ಮಾತನಾಡಿದ್ದಾರೆ.

ramya krishnan

ಸದಾ ಹೊಸ ಹೊಸ ಪಾತ್ರಗಳ ಮೂಲಕ ರಂಜಿಸುವ ನಟಿ ರಮ್ಯಾ ಕೃಷ್ಣನ್ ಇದೀಗ ಸಿನಿಮಾ ಬಿಟ್ಟು ರಾಜಕೀಯ ವಿಚಾರವಾಗಿ ಸೌಂಡ್ ಮಾಡ್ತಿದ್ದಾರೆ. ಇತ್ತೀಚಿಗೆ ಸಚಿವೆ ರೋಜಾ (Roja) ಜೊತೆ ರಮ್ಯಾ ಕೃಷ್ಣನ್ ಕುಟುಂಬ ಕಾಣಿಸಿಕೊಂಡಿರೋದು ಚರ್ಚೆಗೆ ಗ್ರಾಸವಾಗಿದೆ.

ramya krishnan 1

ಕೆಲವು ನಟ-ನಟಿಯರು ಒಂದು ಹಂತ ತಲುಪಿದ ಮೇಲೆ ರಾಜಕೀಯ ಪ್ರವೇಶ ಮಾಡುವುದು ಮಾಮೂಲು. ಕೆಲವರಿಗೆ ಅದೃಷ್ಟ ಒಲಿದರೆ, ರಾಜಕೀಯಲ್ಲಿ ಹಲವು ತಾರೆಯರಿಗೆ ಅದೃಷ್ಟ ಖುಲಾಯಿಸುವುದು ಕಷ್ಟವೇ. ಅದೇನೇ ಇದ್ದರೂ ಈಗ ರಮ್ಯಾ ಕೃಷ್ಣನ್ ಅವರ ವಿಷಯ ಬಹಳ ಸುಳಿದಾಡುತ್ತಿದೆ. ಇತ್ತೀಚಿಗೆ ನಟಿ-ಸಚಿವೆ ರೋಜಾ ಅವರನ್ನು ರಮ್ಯಾಕೃಷ್ಣ ಭೇಟಿ ಮಾಡಿದ್ದರು. ರೋಜಾ ಅವರ ಮನೆಗೂ ಹೋಗಿದ್ದರು. ಇದರಿಂದ ಅವರು ರಾಜಕೀಯಕ್ಕೆ (Politics) ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿಗೆ ನಟಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಅಭಿದಾಸ್‌, ಶರಣ್ಯ ಶೆಟ್ಟಿ ನಟನೆಯ ‌’ನಗುವಿನ ಹೂಗಳ ಮೇಲೆ’ ಸಿನಿಮಾದ ಸಾಂಗ್ ಔಟ್

ಇದಕ್ಕೆ ಸ್ಪಷ್ಟೀಕರಣ ನೀಡಿರುವ ರಮ್ಯಾ ಕೃಷ್ಣನ್, ಸದ್ಯ ಅಂಥದ್ದೇನೂ ವಿಷಯವಿಲ್ಲ ಎಂದಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನದಲ್ಲಿ ದರ್ಶನ ಪಡೆಯಲು ರೋಜಾ ಅವರ ಸಹಾಯವನ್ನು ತೆಗೆದುಕೊಂಡಿದ್ದೆ ಮತ್ತು ರೋಜಾ ಅವರನ್ನು ನೋಡಿ ಬಹಳ ದಿನಗಳಾಗಿದ್ದರಿಂದ ಅವರನ್ನು ಭೇಟಿ ಮಾಡಲು ಅವರ ಮನೆಗೆ ಹೋಗಿದ್ದೆ ಅಷ್ಟೇ ಎಂದಿದ್ದಾರೆ. ಒಂದು ವೇಳೆ ರಾಜಕೀಯ ಸೇರುವ ಯೋಚನೆ ಇದ್ದರೆ ನಿಮಗೇ ಮೊದಲು ತಿಳಿಸುತ್ತೇನೆ. ಯಾವ ಪಕ್ಷ ಎಂದೂ ಆಗಲೇ ಹೇಳುತ್ತೇನೆ ಎನ್ನುವ ಮೂಲಕ ಸದ್ಯ ಗಾಳಿಸುದ್ದಿಗೆ ತೆರೆ ಎಳೆದಿದ್ದಾರೆ. ಒಟ್ನಲ್ಲಿ ತಾವು ರಾಜಕೀಯಕ್ಕೆ ಬರೋದಿಲ್ಲ ಎಂದು ಕ್ಲ್ಯಾರಿಟಿ ನೀಡಿದ್ದಾರೆ.

Share This Article