FoodLatestMain PostVeg

ಬಾದಾಮಿ ಹಲ್ವಾ ಮಾಡಿ ಸಂಕ್ರಾಂತಿಯನ್ನು ಸ್ಪೆಷಲ್ ಆಗಿ ಸಂಭ್ರಮಿಸಿ

ಸಾಮಾನ್ಯವಾಗಿ ಹಬ್ಬಕ್ಕೆ ಸಿಹಿ ಮಾಡುವುದು ವಾಡಿಕೆ. ಅದರಲ್ಲೂ ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ವಿಶೇಷವಾಗಿ ಪಟ್ ಅಂತಾ ಬಾದಾಮಿ ಹಲ್ವಾವನ್ನು ಮಾಡಿ ಮನೆ ಮಂದಿಗೆಲ್ಲಾ ನೀಡಿ ನೀವು ಸವಿಯಿರಿ.

ಬೇಕಾಗುವ ಸಾಮಗ್ರಿಗಳು:
* ಬಾದಾಮಿ- 2 ಕಪ್
* ಸಕ್ಕರೆ- 1 ಕಪ್
* ತುಪ್ಪ- ಅರ್ಧ ಕಪ್
* ದ್ರಾಕ್ಷಿ, ಗೋಡಂಬಿ ಇದನ್ನೂ ಓದಿ: ಸಿಹಿಯಾದ ಬಾದಾಮ್ ಪುರಿ ಮಾಡುವ ಸರಳ ವಿಧಾನ

ಮಾಡುವ ವಿಧಾನ:
* ಬಿಸಿಯಾದ ನೀರಿನಲ್ಲಿ ಬಾದಾಮಿ ಬೀಜಗಳನ್ನು ಹಾಕಿ, ಸ್ವಲ್ಪ ಸಮಯದ ನಂತರ ಅದನ್ನು ಹೊರತೆಗೆದು ಸಿಪ್ಪೆ ಸುಲಿದಿಟ್ಟುಕೊಳ್ಳಬೇಕು.
* ಬೀಜಗಳನ್ನು ಚೆನ್ನಾಗಿ ಗ್ರೈಂಡ್ ಮಾಡಿಕೊಂಡು ಪೇಸ್ಟ್ ಥರಾ ಮಾಡಿಕೊಳ್ಳಿ. ಇದನ್ನೂ ಓದಿ: ಸಂಕ್ರಾಂತಿ ಹಬ್ಬಕ್ಕೆ ಮಾಡಿ ಎಳ್ಳಿನ ಲಡ್ಡು

* ಒಂದು ಪಾತ್ರೆಯಲ್ಲಿ ಬಾಣಲೆಯಲ್ಲಿ ತುಪ್ಪ ಹಾಕಿ ಅದು ಕರಗಿದ ಮೇಲೆ ಬಾದಾಮಿ ಪೇಸ್ಟ್ ಅನ್ನು ಸೇರಿಸಿ.
* ತುಪ್ಪ ಮತ್ತು ಬಾದಾಮಿ ಪೇಸ್ಟ್ ಅನ್ನು ಚೆನ್ನಾಗಿ ಕಲಕುತ್ತಾ, ಹುರಿದಿಟ್ಟುಕೊಳ್ಳಿ.
* ಬಾದಾಮಿ ಪೇಸ್ಟ್ ಮತ್ತು ತುಪ್ಪಕ್ಕೆ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡುತ್ತಾ ಬಂದರೆ ಬಾದಾಮಿ ಹಲ್ವಾ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

Leave a Reply

Your email address will not be published. Required fields are marked *

Back to top button