ಯಾವುದೇ ವಿಶೇಷವಿಲ್ಲ. ಆದರೂ ರುಚಿಯಾಗಿ ಎನಾದರೂ ತಿನ್ನಬೇಕು ಅನ್ನಿಸುತ್ತದೆ. ಇಂದು ಸಿಹಿಯಾಗಿ ಏನಾದರೂ ಮಾಡಿ ತಿಂದರೆ ಚೆನ್ನಾಗಿರುತ್ತದೆ. ಹೀಗಾಗಿ ನೀವು ಇಂದು ಸುಲಭವಾಗಿ ಮತ್ತು ರುಚಿಯಾಗಿ ಫಟಾ ಫಟ್ ಎಂದು ತಯಾರಿಸುವ ಬಾದಾಮ್ ಪುರಿ ಮಾಡಿ ಸವಿಯಿರಿ.
Advertisement
ಬೇಕಾಗುವ ಸಾಮಗ್ರಿಗಳು:
* ಮೈದಾಹಿಟ್ಟು-1 ಕಪ್
* ರವೆ- ಅರ್ಧ ಕಪ್
* ಅಕ್ಕಿಹಿಟ್ಟು-2 ಚಮಚ
* ತುಪ್ಪ- ಅರ್ಧ ಕಪ್
* ಸಕ್ಕರೆ – 2 ಕಪ್
* ಏಲಕ್ಕಿ ಪುಡಿ- ಸ್ವಲ್ಪ
* ಕೇಸರಿ ಬಣ್ಣ – ಸ್ವಲ್ಪ
* ಜಾಯಿಕಾಯಿ ಪುಡಿ – ಸ್ವಲ್ಪ
* ಅಡುಗೆ ಎಣ್ಣೆ- 2 ಕಪ್
Advertisement
ಮಾಡುವ ವಿಧಾನ:
* ಮೈದಾಹಿಟ್ಟು, ರವೆ ಮತ್ತು ಅಕ್ಕಿಹಿಟ್ಟನ್ನು ಮಿಶ್ರಣ ಮಾಡಿ, ಸ್ವಲ್ಪ ತುಪ್ಪ, ನೀರು ಸೇರಿಸಿ ಗಟ್ಟಿಯಾಗಿ ಪೂರಿಯ ಹದಕ್ಕೆ ಕಲೆಸಿಕೊಳ್ಳಬೇಕು. ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ
Advertisement
* ಮತ್ತೋಂದು ಬಾಣಲೆಗೆ ಅರ್ಧ ಕಪ್ ನೀರು, ಸ್ವಲ್ಪ ಸಕ್ಕರೆ ಸೇರಿಸಿ ಕುದಿಸಿ. ಸಕ್ಕರೆ ಪಾಕ ಬರುತ್ತಿದ್ದಂತೆಯೇ ಕೇಸರಿ ಬಣ್ಣ, ಏಲಕ್ಕಿ ಪುಡಿ, ಜಾಯಿಕಾಯಿ ಪುಡಿ, ಸೇರಿಸಿ ಕಲೆಸಿ ಒಲೆಯಿಂದ ಕೆಳಗಿಳಿಸಿಟ್ಟುಕೊಂಡಿರಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ
Advertisement
* ಈಗಾಗಲೇ ತಯಾರಿಸಿಟ್ಟ ಮಿಶ್ರಣದಿಂದ ತೆಳುವಾದ ಪೂರಿ ಲಟ್ಟಿಸಿ ತ್ರಿಕೋನಾಕಾರ ಬರುವಂತೆ ಮಡಚಿ ಅಂಚುಗಳನ್ನು ಸಮನಾಗಿ ಒತ್ತಿ. ಇದನ್ನೂ ಓದಿ: ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ
* ಈಗ ಲಟ್ಟಿಸಿದ ಪೂರಿಯನ್ನು ಎಣ್ಣೆಯಲ್ಲಿ ಕರಿಯಿರಿದು, ಈ ಪೂರಿಗಳನ್ನು ಸಕ್ಕರೆ ಪಾಕದಲ್ಲಿ ಅದ್ದಿ ತೆಗೆದರೆ ರುಚಿಯಾದ ಬಾದಾಮ್ ಪುರಿ ಸವಿಯಲು ಸಿದ್ಧವಾಗುತ್ತದೆ.