– ಬರೀ 70 ಸಾವಿರ ಅರ್ಜಿ ಸಲ್ಲಿಕೆ
– ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಮಾಹಿತಿ
ಬೆಂಗಳೂರು: ಬಿ ಟು ಎ ಖಾತಾ (A Khata) ಪರಿವರ್ತನೆ ಅರ್ಜಿ ಸಲ್ಲಿಕೆಗೆ ನಾಳೆ (ಆ.23) ಕೊನೆಯ ದಿನವಾಗಿದ್ದು, ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ ಇಲ್ಲ ಎಂದು ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ (Munish Moudgil) ಮಾಹಿತಿ ನೀಡಿದ್ದಾರೆ.
ಎ ಖಾತಾ ಅರ್ಜಿ ಸಲ್ಲಿಕೆ ಕುರಿತು ಮಾತನಾಡಿದ ಅವರು, ಎ ಖಾತಾ ಪರಿವರ್ತನೆಗೆ 70 ಸಾವಿರ ಅರ್ಜಿ ಸಲ್ಲಿಕೆ ಅಷ್ಟೇ ಆಗಿದೆ. ಏಳೂವರೆ ಲಕ್ಷ ಬಿ ಖಾತಾ ಇದ್ದು, ಬರೀ 70 ಸಾವಿರ ಅರ್ಜಿ ಸಲ್ಲಿಕೆಯಾಗಿದೆ. ಇದರಲ್ಲಿ 20 ಸಾವಿರ ಎ ಖಾತಾ ಅಪ್ರೂವ್ ಮಾಡಲಾಗಿದೆ ಎಂದರು. ಇದನ್ನೂ ಓದಿ: ಲಿಂಗಸುಗೂರಲ್ಲಿ ಹೊತ್ತಿ ಉರಿದ ರೇಷ್ಮೆ ಇಲಾಖೆ ಕಟ್ಟಡ – ದಾಖಲೆಗಳು ಭಸ್ಮ
ಇನ್ನು ಮಾರ್ಗಸೂಚಿ ದರ 2% ಕಟ್ಟಿ ಎ ಖಾತಾ ಪರಿವರ್ತನೆಗೆ ಅವಕಾಶ ಇತ್ತು. ಭಾನುವಾರ ಒಂದು ದಿನ ಅರ್ಜಿ ಸಲ್ಲಿಕೆಗೆ ಕಾಲಾವಕಾಶ ಇದೆ. ನಾಳೆ ಅರ್ಜಿ ಸಲ್ಲಿಕೆ ಮಾಡದಿದ್ದರೆ ಸರ್ಕಾರದ ಡಿಸ್ಕೌಂಟ್ ಆಫರ್ ಮುಕ್ತಾಯವಾಗಲಿದೆ. ಈ ಬಾರಿಯು ಕೂಡ ಬಿ ಟು ಎ ಖಾತಾ ಪರಿವರ್ತನೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಡಿಮೆ ಜನ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಕರ್ನಾಟಕದಲ್ಲಿ 1 ವರ್ಷ ಕೃತಕ ಪನ್ನೀರ್ ಬ್ಯಾನ್

