ಚಿಕ್ಕಮಗಳೂರು: ಖೋಟಾ ನೋಟು ಚಲಾವಣೆಗೆ ಯತ್ನಿಸಿದ ಇಬ್ಬರನ್ನು ಮೂಡಿಗೆರೆ (Mudigere) ಬಳಿ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ (Mangaluru) ಮಹಮದ್ ಅಲಿ ಹಾಗೂ ಮೂಡಿಗೆರೆಯ ಮಹೇಶ್ ಬಂಧಿತ ಆರೋಪಿಗಳು. ಮೂಡಿಗೆರೆ ಪಟ್ಟಣದ ನೂತನ ಲೇಔಟ್‌ನಲ್ಲಿ ಚಲಾವಣೆಗೆ ಯತ್ನಿಸುವಾಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 200 ರೂ. ಮುಖಬೆಲೆಯ 18 ಸಾವಿರ ರೂ. ಹಣ ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಕ್ಯಾಂಟರ್, ಬೈಕ್ ಮಧ್ಯೆ ಭೀಕರ ಅಪಘಾತ – ದೇವಾಲಯಕ್ಕೆ ತೆರಳುತ್ತಿದ್ದ ಇಬ್ಬರು ಸ್ನೇಹಿತರು ದುರ್ಮರಣ
ನೋಟಿನ ಮೇಲೆ ಬಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂದು ನಮೂದಿಸಲಾಗಿದೆ. ಬಂಧಿತರಿಂದ ಇಬ್ಬರ ಬಳಿಯೂ 45 ನೋಟುಗಳು ಪತ್ತೆಯಾಗಿವೆ. ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ವಿಚಾರಣೆ ನಡೆಯುತ್ತಿದೆ. ಇದನ್ನೂ ಓದಿ: ಹಿಟ್ & ರನ್ ಕೇಸ್‌ಗೆ ಬಿಗ್ ಟ್ವಿಸ್ಟ್ – ಸ್ನೇಹಿತನನ್ನು ಕೊಂದು ಸೈಲೆಂಟಾಗಿದ್ದ ಹಂತಕ ತಿಂಗಳ ಬಳಿಕ ಅರೆಸ್ಟ್
