ಕೋಲಾರ: ಕ್ಯಾಂಟರ್ (Canter) ವಾಹನ ಹಾಗೂ ರಾಯಲ್ ಎನ್‌ಫೀಲ್ಡ್ (Royal Enfield) ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ದೇವಾಲಯಕ್ಕೆ ತೆರಳುತ್ತಿದ್ದ ಇಬ್ಬರು ಸ್ನೇಹಿತರು (Friends) ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೋಲಾರ (Kolar) ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅರಿಕೆರೆ ಗೇಟ್ ಸಮೀಪ ನಡೆದಿದೆ.
ಚಿಂತಾಮಣಿ ತಿಮ್ಮಸಂದ್ರದ ಶಶಿ (25), ಬೆಂಗಳೂರು ನೆಲಮಂಗಲದ ತನುಷ್ (25) ಮೃತ ಸ್ನೇಹಿತರು. ಬೆಳ್ಳಂ ಬೆಳಗ್ಗೆ ಕಾಣಿಪಾಕಂ ದೇವಾಲಯಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಎನ್‌ಫೀಲ್ಡ್‌ನಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಭಾರತದ ಮೇಲೆ 10% ಸುಂಕ ಹೇರಿದ ಟ್ರಂಪ್
ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಸೋನಂ ವಾಂಗ್ಚುಕ್ ನಿರಶನ ಅಂತ್ಯ – ತಡರಾತ್ರಿ ಕೇಂದ್ರದಿಂದ ಮನವೊಲಿಕೆ ಸಕ್ಸಸ್
