ಚಿಕ್ಕಮಗಳೂರು: ಇತ್ತೀಚೆಗೆ ತಾಲೂಕಿನ ಹಿರೇಗೌಜ ಬಳಿ ನಡೆದಿದ್ದ ಹಿಟ್ & ರನ್ (Hit And Run) ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹತ್ಯೆಯಾದ ಯುವಕನನ್ನು ಆತನ ಸ್ನೇಹಿತನೇ ಕೊಲೆಗೈದು ಕತೆ ಕಟ್ಟಿರುವುದು ತನಿಖೆ ವೇಳೆ ಗೊತ್ತಾಗಿದೆ.
ಯಶವಂತ್ (26) ಕೊಲೆಯಾಗಿದ್ದ ಯುವಕ. ಈತನ ಸ್ನೇಹಿತ ಸಚಿನ್ ಹತ್ಯೆಗೈದ ಆರೋಪಿಯಾಗಿದ್ದಾನೆ. ಇಬ್ಬರೂ ಹಾಸನದ (Hassan) ವಿಜಯನಗರದ ನಿವಾಸಿಗಳು. ಇದನ್ನೂ ಓದಿ: ಹೆಣ್ಣೆಂದು ಸ್ವಂತ ಮಗುವನ್ನೇ ಸಂಪ್‌ಗೆ ಹಾಕಿ ಹತ್ಯೆಗೈದ ಪಾಪಿ ತಂದೆ
ಕಳೆದ ಜೂನ್ 12 ರಂದು ರಾತ್ರಿ ಹಿರೇಗೌಜ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಶವಂತ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಈ ಜಾಗದಲ್ಲಿ ಗೂಡ್ಸ್ ಆಟೋವೊಂದು ಪಲ್ಟಿಯಾಗಿತ್ತು. ಆಟೋ ಪಕ್ಕದಲ್ಲೇ ಶವ ಪತ್ತೆಯಾಗಿತ್ತು. ಇದರಿಂದಾಗಿ ಅಪಘಾತದಲ್ಲಿ ಯುವಕ ಸಾವನ್ನಪ್ಪಿದ್ದಾನೆ ಎಂದು ಶಂಕಿಸಲಾಗಿತ್ತು. ಈ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಯಶವಂತ್ ಬೈಕ್ ನಾಪತ್ತೆ ಬೆನ್ನಲ್ಲೇ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ತನಿಖೆ ವೇಳೆ ಕೊಲೆ ರಹಸ್ಯ ಬಯಲಿಗೆ ಬಂದಿದೆ. ಕೊಲೆಗೈದು ಏನೂ ಗೊತ್ತಿಲ್ಲದವನಂತೆ ಆರೋಪಿ ಸಚಿನ್ ನಟಿಸಿದ್ದ. ಒಂದೂವರೆ ತಿಂಗಳ ತನಿಖೆ ನಂತರ ಪೊಲೀಸರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಳೆಯ ದ್ವೇಷ, ಹಣಕಾಸು ವಿಚಾರಕ್ಕೆ ಈ ಕೊಲೆ ನಡೆದಿದೆ ಎನ್ನಲಾಗಿದೆ.
ಕಾರು ಮಾರಾಟ ಮಾಡಿದ್ದ ಹಣ ಪಡೆಯಲು ಬಂದಿದ್ದ ಯಶವಂತ್, ಸಚಿನ್ ಜೊತೆ ಬೈಕಿನಲ್ಲಿ ಅಜ್ಜಂಪುರಕ್ಕೆ ಬಂದಿದ್ದ. ಈ ವೇಳೆಯೇ ಕೊಲೆ ಮಾಡಿದ್ದ ಎನ್ನಲಾಗಿದೆ. ಇದನ್ನೂ ಓದಿ: ಹನಿಮೂನ್ ಹಂತಕಿ ಸೋನಮ್‌ಗೆ ಸುಪ್ರೀಂ ಶಾಕ್ – ಜಾಮೀನು ರದ್ದು
