ಜಕಾರ್ತ: ಇಂಡೋನೇಷ್ಯಾದಲ್ಲಿ (Indonesia) ಶನಿವಾರ ರಾತ್ರಿ ನಡೆದ ಫುಟ್‌ಬಾಲ್ (Football) ಪಂದ್ಯವೊಂದರಲ್ಲಿ ಗಲಭೆ ಸಂಭವಿಸಿ, ಕನಿಷ್ಠ 127 ಜನರು ಸಾವನ್ನಪ್ಪಿದ್ದಾರೆ. ಸತ್ತವರಲ್ಲಿ ಮಕ್ಕಳು ಮತ್ತು ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ.
ಇಂಡೋನೇಷ್ಯಾದ ಪೂರ್ವ ಜಾವಾದ ಪ್ರಾಂತ್ಯದ ಮಲಾಂಗ್‌ನಲ್ಲಿರುವ ಕಂಜುರುಹಾನ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಇದನ್ನೂ ಓದಿ: 2.9 ಕೋಟಿ ಬೆಳಕಿನ ವರ್ಷಗಳ ಹಿಂದಿನ ನಕ್ಷತ್ರಪುಂಜ – ನಾಸಾದ ವೆಬ್ ಟೆಲಿಸ್ಕೋಪ್‌ನಿಂದ ಸೆರೆ
Advertisement
Advertisement
ತವರು ಮೈದಾನದಲ್ಲಿ ಅರೆಮಾ ಫುಟ್‌ಬಾಲ್ ಕ್ಲಬ್ ಅನ್ನು ಪ್ರತಿಸ್ಪರ್ಧಿ ತಂಡ ಪರ್ಸೆಬಾಯಾ ಸೋಲಿಸಿತು. ಇದರಿಂದ ಬೇಸರಗೊಂಡ ಅರೆಮಾ ಫುಟ್‌ಬಾಲ್ ಕ್ಲಬ್ ತಂಡದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಿಚ್‌ಗೆ ನುಗ್ಗುವಂತೆ ಪ್ರೇರೇಪಿಸಿತು. ನಂತರ ಸಾಮೂಹಿಕ ಗಲಭೆಗಳು ಭುಗಿಲೆದ್ದು, ಪೊಲೀಸರು ಸೇರಿದಂತೆ 127 ಮಂದಿ ಸಾವನ್ನಪ್ಪಿದ್ದಾರೆ.
Advertisement
Advertisement
ಜನರನ್ನು ಚದುರಿಸಲು ಘಟನಾ ಸ್ಥಳದಲ್ಲಿ ಅಶ್ರುವಾಯು ಸಿಡಿಸಲಾಯಿತು. ಸಾಕರ್ ಮೈದಾನದಲ್ಲಿ ಗಲಭೆ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಬೀದಿಗಳಲ್ಲಿ ಜನ ಚೆಲ್ಲಾಪಿಲ್ಲಿಯಾಗಿ ಓಡಿದರು. ಈ ವೇಳೆ ಕಾಲ್ತುಳಿತ ಕೂಡ ಸಂಭವಿಸಿತು. ಇದನ್ನೂ ಓದಿ: ನಮೀಬಿಯಾದಿಂದ ಬಂದ ಚೀತಾ `ಆಶಾ’ ಗರ್ಭಿಣಿಯಾಗಿದ್ಯಾ – ಅಧಿಕಾರಿಗಳು ಹೇಳೋದೇನು?