LatestLeading NewsMain PostNational

ನಮೀಬಿಯಾದಿಂದ ಬಂದ ಚೀತಾ `ಆಶಾ’ ಗರ್ಭಿಣಿಯಾಗಿದ್ಯಾ – ಅಧಿಕಾರಿಗಳು ಹೇಳೋದೇನು?

ಭೋಪಾಲ್: ನಮೀಬಿಯಾದಿಂದ (Namibia) ಮಧ್ಯಪ್ರದೇಶದ ಕುನೋ ನ್ಯಾಷನಲ್ ಪಾರ್ಕ್‌ಗೆ (Kuno National Park) ಬಂದಿರುವ 8 ಚೀತಾಗಳ ಪೈಕಿ `ಆಶಾ’ ಹೆಸರಿನ ಚೀತಾ (Cheetah) ಗರ್ಭಿಣಿಯಾಗಿರಬಹುದು. ಆದರೆ ನಾವು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಚೀತಾ ಸಂರಕ್ಷಣಾ ನಿಧಿಯ ಡಾ.ಲಾರಿ ಮಾರ್ಕರ್ ಹೇಳಿದ್ದಾರೆ.

ಚೀತಾದ ಚಲನವಲನಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಮೊದಲ ಬಾರಿಗೆ ಅದು ಗರ್ಭಧರಿಸಿದೆ ಎಂದು ನಂಬಿದ್ದೇವೆ. ಮುಂದೆ ಏನಾಗುತ್ತಿದೆ ಎಂದು ನೋಡಲು ನಾವೂ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಷ್ಟ್ರದ್ರೋಹಿಗಳ ವೋಟು ಬೇಡ ಎಂದು ಹೇಳಲಿ – ಈಶ್ವರಪ್ಪ

ಸಿಸಿಎಫ್ (CCF) ಅನ್ನು ಒಳಗೊಂಡಿರುವ ಕುನೋದಲ್ಲಿ ಪ್ರಾಜೆಕ್ಟ್ ಚೀತಾ ತಂಡವು ಸಜ್ಜಾಗಿದೆ. ಒಂದು ವೇಳೆ ಚೀತಾ ಗರ್ಭ ಧರಿಸಿದ್ದರೆ, ಇದು ನಮೀಬಿಯಾದ ಮತ್ತೊಂದು ಉಡುಗೊರೆಯಾಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಚೀತಾ `ಆಶಾ’ ಗರ್ಭ ಧರಿಸಿದ್ದರೆ, ನಾವು ಆಶಾಳನ್ನು ಶಾಂತ ವಾತಾವರಣದಲ್ಲಿ ಇರಿಸಬೇಕಾಗುತ್ತದೆ. ಸುತ್ತಲೂ ನಿರ್ಜನ ವಾತಾವರಣ ಇರಬೇಕಾಗುತ್ತದೆ. ಹಾಗಾಗಿ ಪ್ರತ್ಯೇಕವಾಗಿ ಹುಲ್ಲಿನ ಗುಡಿಸಲನ್ನು ನಿರ್ಮಿಸಲಾಗಿದೆ ಎಂದು ಡಾ. ಮಾರ್ಕರ್ ಮಾಧ್ಯಮಗಳಿಗೆ ಹೇಳಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ಹೋಗ್ತಾರಲ್ಲ ಇದು ಚೈಲ್ಡಿಶ್ ತನ, ರಾಹುಲ್ ಗಾಂಧಿ ಫನ್ನಿಬಾಯ್ : ರೇಣುಕಾಚಾರ್ಯ ವ್ಯಂಗ್ಯ

ಕುನೋ ರಾಷ್ಟ್ರೀಯ ಉದ್ಯಾನವನದ ಅಧಿಕಾರಿ ಪ್ರಕಾಶ್ ಕುಮಾರ್ ವರ್ಮಾ ಈ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ಹೆಣ್ಣು ಚೀತಾ ಗರ್ಭಿಣಿಯಾಗಿರುವ (Pregnant) ಸುದ್ದಿ ತಪ್ಪು ದಾರಿಗೆಳೆಯುವಂತಿದೆ. ನಮೀಬಿಯಾದಿಂದ ಯಾವುದೇ ಪರೀಕ್ಷೆ ಮಾಡಿಲ್ಲ. ಗರ್ಭಧಾರಣೆಯ ವರದಿಯನ್ನು ನೀಡಿಲ್ಲ. ಈ ಸುದ್ದಿ ಹೇಗೆ ಹರಡಿದೆ ಎಂದು ನನಗೆ ತಿಳಿದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಾಜೆಕ್ಟ್ ಚೀತಾದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಜನ್ಮದಿನವಾದ ಸೆಪ್ಟೆಂಬರ್ 17 ರಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ 8 ಚೀತಾಗಳನ್ನು ಬಿಡಲಾಗಿತ್ತು.

Live Tv

Leave a Reply

Your email address will not be published. Required fields are marked *

Back to top button