ಗಾಂಧೀನಗರ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಅಹಮದಾಬಾದ್‍ನಲ್ಲಿರುವ ಆಟೋ ಚಾಲಕನ(Auto Driver) ಮನೆಯಲ್ಲಿ ಸೋಮವಾರ ರಾತ್ರಿ ಊಟ(Dinner) ಮಾಡಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯ ಎಎಪಿಯ(AAP) ಪ್ರಚಾರದ ಸಲುವಾಗಿ ಅರವಿಂದ್ ಕ್ರೇಜಿವಾಲ್ ಅವರು ಎರಡು ದಿನಗಳ ಕಾಲ ಗುಜರಾತ್ ಪ್ರವಾಸ ಕೈಗೊಂಡಿದ್ದಾರೆ. ಸೋಮವಾರ ಅಹಮದಾಬಾದ್‍ನಲ್ಲಿ(Ahmedabad) ನಡೆದ ಆಟೋ ರಿಕ್ಷಾ ಚಾಲಕರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅರವಿಂದ್ ಕ್ರೇಜಿವಾಲ್ ಅವರನ್ನು ಆಟೋ ಚಾಲಕನೋರ್ವ ಅಹಮದಾಬಾದ್‍ನಲ್ಲಿರುವ ತಮ್ಮ ಮನೆಯಲ್ಲಿ ಔತಣಕೂಟಕ್ಕೆ ಬರುವಂತೆ ಆಹ್ವಾನಿಸಿದ್ದನು. ಇದನ್ನೂ ಓದಿ: ಸಚಿವ ಆನಂದ್ ಸಿಂಗ್, ಕಾರ್ಪೊರೇಟರ್ ನಡುವೆ ರಾಜೀನಾಮೆ ಸಮರ
ನಗರದ ಘಟ್ಲೋಡಿಯಾ ಪ್ರದೇಶದ ನಿವಾಸಿ ವಿಕ್ರಮ್ ದಾಂತನಿ( Vikram Dantani) ಎಂಬ ಆಟೋ ಚಾಲಕ “ನಾನು ನಿಮ್ಮ ಅಭಿಮಾನಿ. ಸೋಶಿಯಲ್ ಮೀಡಿಯಾದಲ್ಲಿ ನಾನು ನೋಡಿದ ವೀಡಿಯೋ ಒಂದರಲ್ಲಿ, ನೀವು ಪಂಜಾಬ್‍ನ(Punjab) ಆಟೋ ಡ್ರೈವರ್‌ನ ಮನೆಗೆ ಊಟಕ್ಕೆ ಹೋಗಿದ್ದೀರಿ. ಹಾಗಾದರೆ, ನೀವು ನನ್ನ ಮನೆಗೆ ಊಟಕ್ಕೆ ಬರುತ್ತೀರಾ ಎಂದು ಕೇಳಿದ್ದನು. ಕೂಡಲೇ ಇದಕ್ಕೆ ಪ್ರತಿಕ್ರಿಯಿಸಿದ ಅರವಿಂದ್ ಕೇಜ್ರಿವಾಲ್ ಅವರು, ಪಂಜಾಬ್ ಮತ್ತು ಗುಜರಾತ್ ಆಟೋ ಚಾಲಕರು ನನ್ನನ್ನು ಪ್ರೀತಿಸುತ್ತಿದ್ದಾರೆ. ನಾನು ಇಂದು ಸಂಜೆ ಬರಬೇಕೇ? ಅಥವಾ ರಾತ್ರಿ 8 ಗಂಟೆಗೆ ಬರಬೇಕೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗುಡ್‌ನ್ಯೂಸ್- ಪೊಲೀಸ್ ಇಲಾಖೆಯಲ್ಲಿ ದೊಡ್ಡ ನೇಮಕಾತಿಗೆ ಅಧಿಸೂಚನೆ
ಆಟೋ ಚಾಲಕನ ಆಹ್ವಾನವನ್ನು ಸ್ವೀಕರಿಸಿದ ಕೇಜ್ರಿವಾಲ್ ಅವರು ರಾತ್ರಿ 7.30ರ ಸುಮಾರಿಗೆ ಹೊಟೇಲ್‍ನಿಂದ ಆಟೋದಲ್ಲಿ ಚಾಲಕನ ಮನೆಗೆ ತಲುಪಲು ಯೋಜಿಸಿದ್ದರು. ಮೊದಲಿಗೆ ಕೇಜ್ರಿವಾಲ್ ಅವರನ್ನು ಆಟೋದಲ್ಲಿ ಹೋಗದಂತೆ ಪೊಲೀಸರು ತಡೆದರು. ಇದರಿಂದ ಕೆಲ ಹೊತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ಬಳಿಕ ಆಟೋ ಚಾಲಕನ ಮನೆಗೆ ತೆರಳಲು ಅವಕಾಶ ನೀಡಿ ಆಟೋ ಚಾಲಕನ ಪಕ್ಕದಲ್ಲಿ ಪೊಲೀಸ್‍ಯೊಬ್ಬರು ಕುಳಿತುಕೊಂಡ, ಮತ್ತೆರಡು ಪೊಲೀಸರ ಕಾರುಗಳು ಆಟೋವನ್ನು ಫಾಲೋವ್ ಮಾಡಿದವು. ನಂತರ ಆಟೋ ಚಾಲಕನ ಮನೆಗೆ ಭೇಟಿ ನೀಡಿ ಪ್ರೀತಿಯಿಂದ ಊಟಮಾಡಿದ್ದಾರೆ.