Bengaluru CityDistrictsKarnatakaLatestLeading NewsMain Post

ಗುಡ್‌ನ್ಯೂಸ್‌- ಪೊಲೀಸ್ ಇಲಾಖೆಯಲ್ಲಿ ದೊಡ್ಡ ನೇಮಕಾತಿಗೆ ಅಧಿಸೂಚನೆ

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ 3,064 ಕಾನ್ಸ್‌ಟೇಬಲ್‌ ಹುದ್ದೆ ನೇಮಕಾತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ರಾಜ್ಯಸರ್ಕಾರವು 2,996 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (CAR – DAR) ಹುದ್ದೆಗೆ ಅಧಿಸೂಚನೆ ಹೊರಡಿಸಿದೆ. ಇದೇ ಮೊದಲ ಬಾರಿಗೆ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್(Constable) ಹುದ್ದೆ ತೃತೀಯ ಲಿಂಗಿಗಳ ನೇಮಕಾತಿಗೆ ಸರ್ಕಾರ ಅಧಿಸೂಚನೆ (CAR- DAR) ಹೊರಡಿಸಿದ, 68 ತೃತೀಯ ಲಿಂಗಿಗಳ ನೇಮಕಾತಿಗೆ ಸರ್ಕಾರ ಆದೇಶಿಸಿದೆ.

POLICE JEEP

ಆದರೆ ಹುದ್ದೆಗೆ ಅರ್ಜಿ ಹಾಕುವವರಿಗೆ ವಯಸ್ಸಿನ ಮಿತಿಯಿದ್ದು, 18 ವರ್ಷ ತುಂಬಿರಬೇಕು. SC-ST, OBC ಅಭ್ಯರ್ಥಿಗಳಿಗೆ 27 ವರ್ಷ ಹಾಗೂ ಸಾಮಾನ್ಯ ವರ್ಗಕ್ಕೆ 25 ವರ್ಷ ಮೀರಿರಬಾರದು. ಜೊತೆಗೆ ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷ ವಯೋಮಿತಿ ನಿಗದಿ ಮಾಡಿದೆ. ಇದನ್ನೂ ಓದಿ: ಗಣೇಶ ಮೆರವಣಿಗೆಯಲ್ಲಿ ಹಿಂದೂ ಕಾರ್ಯಕರ್ತರಿಂದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ

ತೃತೀಯ ಲಿಂಗಗಳಿಗೆ ಭಾರತ ಸರ್ಕಾರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಧಿಸೂಚನೆ ಅನ್ವಯ ಕೇಂದ್ರ ಸರ್ಕಾರ ಹೊರಡಿಸಿರುವ ತೃತೀಯ ಲಿಂಗ ವ್ಯಕ್ತಿಗಳ ನಿಯಮ (ರಕ್ಷಣಾ ಹಕ್ಕುಗಳು) 2020 ಅನ್ವಯ ಪ್ರಮಾಣ ಪತ್ರ ಇರಬೇಕು. ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರಿಂದ ಪ್ರಮಾಣ ಪತ್ರ ಪಡೆಯಬೇಕು. ಈ ಪ್ರಮಾಣ‌ ಪತ್ರ ಇಲ್ಲದೆ ಹೋದರೆ ನೇಮಕಾತಿಗೆ ತೃತೀಯ ಲಿಂಗಿ ಮೀಸಲಾತಿ ಅನ್ವಯ ಆಗುವುದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಹೊನ್ನಾವರ ಮೀನುಗಾರರ ಮೇಲೆ ದೌರ್ಜನ್ಯ – ಜಿಲ್ಲಾಧಿಕಾರಿ, ಎಸ್ಪಿಗೆ ಸಮನ್ಸ್ ಜಾರಿ

Live Tv

Leave a Reply

Your email address will not be published.

Back to top button