BellaryDistrictsKarnatakaLatestMain Post

ಸಚಿವ ಆನಂದ್ ಸಿಂಗ್, ಕಾರ್ಪೊರೇಟರ್ ನಡುವೆ ರಾಜೀನಾಮೆ ಸಮರ

ಬಳ್ಳಾರಿ: ಸಚಿವ ಆನಂದ್ ಸಿಂಗ್ ದೌರ್ಜನ್ಯ ಆರೋಪ ಪ್ರಕರಣ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಪ್ರತಿದಿನ ಹೊಸಹೊಸ ರೂಪ ಪಡೆದುಕೊಳ್ತಿದೆ. ಇದೀಗ ಮಿನಿಸ್ಟರ್ ವರ್ಸಸ್ ಕಾರ್ಪೋರೇಟರ್ ಹಂತಕ್ಕೆ ತಲುಪಿದ್ದು, ಇಬ್ಬರೂ ಪರಸ್ಪರ ರಾಜೀನಾಮೆ ಕೊಡೊ ಚಾಲೆಂಜ್ ಹಾಕಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಆನಂದ್ ಸಿಂಗ್ ಪ್ರೆಸ್‍ಮೀಟ್ ಮಾಡಿ ತನ್ನ ಮೇಲಿರುವ ಭೂ ಕಬಳಿಕೆ ಆರೋಪ ಸುಳ್ಳು ಅಂತ ಹೇಳಿದ್ರು. ಇದಕ್ಕೆ ಪ್ರತಿಯಾಗಿ ಸುದ್ದಿಗೋಷ್ಟಿ ನಡೆಸಿರೋ ಹೊಸಪೇಟೆ ನಗರಸಭೆ 6ನೇ ವಾರ್ಡ್‍ನ ಕಾರ್ಪೋರೇಟರ್ ಖದೀರ್, ಸಚಿವರ ಮನೆಯ ನಿರ್ಮಾಣವೇ ಅಕ್ರಮ ಅಂತ ದಾಖಲೆ ಬಿಡುಗಡೆ ಮಾಡಿದ್ದಾರೆ. ಆನಂದ್ ಸಿಂಗ್ ಅವರೇ ನಿಮ್ಮ ಅಕ್ರಮ ಸಾಬೀತು ಮಾಡಿದ್ದೀನಲ್ಲ ಈಗ ರಾಜೀನಾಮೆ ಕೊಡಿ. ನೀವು ಅಕ್ರಮ ಮಾಡಿಲ್ಲ ಅಂತ ಸಾಬೀತು ಮಾಡಿದ್ರೆ ನಾನು ರಾಜೀನಾಮೆ ಕೊಡ್ತೀನಿ ಅಂತ ಸವಾಲೆಸೆದಿದ್ದಾರೆ.

ಸಚಿವರ ವಿರುದ್ಧದ ಆರೋಪವೇನು..?: ಹೊಸಕೋಟೆ ಬೈಪಾಸ್ ರಸ್ತೆ ಬಳಿ ಸರ್ಕಾರಿ ಜಮೀನು, ಸರ್ವೇ ನಂ.66 ಬಿ 2ರಲ್ಲಿ ಚರಂಡಿ ಜಾಗ 5 ಸೆಂಟ್ ಹಾಗೂ ಮೆ.ಸುರಕ್ಷಾ ಎಂಟರ್‍ಪ್ರೈಸಸ್‍ನವರಿಂದಲೂ 70 ಸೆಂಟ್‍ವರೆಗೆ ಒತ್ತುವರಿ ಮಾಡಿಕೊಳ್ಳಲಾಗಿದೆ. ಹಳ್ಳದ ನೀರು ಸರಾಗವಾಗಿ ಹೋಗುವ ವ್ಯವಸ್ಥೆ ಹಾಳಾಗಿದೆ. ಅಂದಾಜು 20 ಕೋಟಿ ರೂ. ಮೌಲ್ಯದ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿರುವ ಬಗ್ಗೆ ಸಚಿವರ ವಿರುದ್ಧ ಆರೋಪ ಮಾಡಲಾಗ್ತಿದೆ. ಇದನ್ನೂ ಓದಿ: ಸಚಿವ ಆನಂದ್ ಸಿಂಗ್ ವಿರುದ್ಧ ಪ್ರಕರಣ ದಾಖಲು!

ಈ ಸಂಬಂಧ ಕಳೆದೆರಡು ದಿನಗಳ ಹಿಂದೆ ಸುದ್ದಿಗೋಷ್ಟಿ ನಡೆಸಿದ್ದ ಸಚಿವ ಆನಂದ್ ಸಿಂಗ್, ಜಾಗದ ಸರ್ವೇ ನಡೆಸಿ ಸಂಬಂಧಿಸಿದ ಇಲಾಖೆಗಳಿಂದ ಲೋಕಾಯುಕ್ತರಿಗೆ ವರದಿ ಸಲ್ಲಿಕೆಯಾಗಿದ್ದು, ಅದರಲ್ಲಿ ಯಾವುದೇ ಜಾಗ ಒತ್ತುವರಿಯಾಗಿಲ್ಲ ಅಂತಾ ಲೋಕಾಯುಕ್ತರೇ ಆದೇಶ ಮಾಡಿದ್ದಾರೆ. ಹೊಸಪೇಟೆಯಲ್ಲಿ ನನ್ನ ಮೇಲೆ ಭೂಗಳ್ಳರಿಂದ ಹುನ್ನಾರ ನಡೀತಿದ್ದು, ನನ್ನ ಮೇಲೆ ಎಸ್‍ಸಿ/ ಎಸ್‍ಟಿ ದೌರ್ಜನ್ಯ ಕೇಸ್ ದಾಖಲಾಗಿದೆ ಎಂದಿದ್ರು.

ಏನೇ ಆಗಲಿ ವಿಜಯನಗರ ಕ್ಷೇತ್ರದಲ್ಲೀಗ ಈ ಭೂಕಬಳಿಕೆ ಪ್ರಕರಣ ದಿನೇ ದಿನೇ ಹೊಸ ರೂಪ ಪಡೆದುಕೊಳ್ತಿದೆ. ಸಚಿವ ಹಾಗೂ ಕಾರ್ಪೋರೇಟರ್‍ರ ಈ ಪರಸ್ಪರ ರಾಜೀನಾಮೆ ಚಾಲೆಂಜ್ ಎಲ್ಲಿಗೋಗಿ ನಿಲ್ಲುತ್ತೋ ಕಾದು ನೋಡಬೇಕು.

Live Tv

Leave a Reply

Your email address will not be published.

Back to top button