Bidar | ಅಮೃತ ಯೋಜನೆಯ ಗ್ಯಾಸ್‌ ಪೈಪ್‌ಲೈನ್‌ ಲೀಕಾಗಿ ಬೆಂಕಿ – ತಪ್ಪಿದ ಭಾರೀ ದುರಂತ

1 Min Read

ಬೀದರ್: ಅಮೃತ ಯೋಜನೆಯ ಎಲ್‌ಪಿಜಿ ಗ್ಯಾಸ್ ಪೈಪ್‌ಲೈನ್‌ ಲೀಕಾಗಿ (Gas Pipeline Leak) ಬೆಂಕಿ ಕಾಣಿಸಿಕೊಂಡು, ಭಾರೀ ದುರಂತ ತಪ್ಪಿದ ಘಟನೆ ಬೀದರ್ ನಗರದ ಜೈಲ್ ಕಾಲೋನಿಯ ಕಾಮತ್ ಹೋಟೆಲ್ ಬಳಿ ನಡೆದಿದೆ.

ಏಕಾಏಕಿ ಎಲ್‌ಪಿಜಿ (LPG) ಗ್ಯಾಸ್ ಪೈಪ್ ಲೈನ್ ಲೀಕಾಗಿ ಬೆಂಕಿ ಹೊತ್ತಿಕೊಂಡಿತ್ತು, ಇದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಇದನ್ನೂ ಓದಿ: ಚೀನಾದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ – 21 ಮಂದಿ ದಾರುಣ ಸಾವು, 61 ಜನಕ್ಕೆ ಗಾಯ

ಎಲ್‌ಪಿಜಿ ಪೈಪ್‌ಲೈನ್‌ ಸಂಪರ್ಕ ನೀಡಿದ್ದ ಕಂಪನಿಯ ಸಿಬ್ಬಂದಿ ಕರೆಸಿ ಗ್ಯಾಸ್‌ ಲೀಕ್‌ ಬಂದ್‌ ಮಾಡಿಸಿದ್ದಾರೆ. ಬಳಿಕ ಆತಂಕದಲ್ಲಿದ್ದ ಕಾಲೋನಿಯ ಜನ ನಿಟ್ಟುಸಿರುಬಿಟ್ಟಿದ್ದಾರೆ. ಇದನ್ನೂ ಓದಿ: ಲವ್ವರ್‌ಗಾಗಿ ಪತ್ನಿಗೆ ಡಿವೋರ್ಸ್ – ಇತ್ತ ಪತಿ ಬಿಟ್ಟು ಬರಲು ಒಪ್ಪದ ಪ್ರಿಯತಮೆಗೆ ಬೆಂಕಿಯಿಟ್ಟು ಕೊಲೆ

ಒಟ್ಟಿನಲ್ಲಿ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಗ್ನಿ ಶಾಮಕ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

Share This Article