ಬೆಂಗಳೂರು: ರಾಜ್ಯದಲ್ಲಿ ಆಜಾನ್ ಮತ್ತು ಸುಪ್ರಭಾತ ನಡುವಿನ ಧರ್ಮ ದಂಗಲ್ ನಡುವೆ ಭಾವೈಕ್ಯತೆ ಸಾರುವ ದೃಶ್ಯಕ್ಕೆ ಬೆಂಗಳೂರು ಸಾಕ್ಷಿಯಾಗಿದೆ.
ಬೆಂಗಳೂರಿನ ಚಂದ್ರಾಲೇಔಟ್‍ನ ಗಂಗೋಂಡನಹಳ್ಳಿ ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿಯ ಪರಿಣಾಮ ಯಾವುದೇ ಜಾತ್ರೆ ಮಹೋತ್ಸವಗಳು ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಅಣ್ಣಮ್ಮದೇವಿ ಜಾತ್ರೆ ಮಹೋತ್ಸವ ನಡೆಯಿತು. ವಿಶೇಷ ಅಂದರೆ ಗಂಗೊಂಡನಹಳ್ಳಿ ಹಿಂದೂಗಳಿಗಿಂತ ಹೆಚ್ಚಾಗಿ ಮುಸ್ಲಿಮರೇ ವಾಸವಾಗಿದ್ದಾರೆ. ಅಣ್ಣಮ್ಮ ಜಾತ್ರೆ ಮೆರವಣಿಗೆಯಲ್ಲಿ ಹಿಂದೂ ಮುಸ್ಲಿಮರು ಎನ್ನುವ ಯಾವುದೇ ಭೇದ, ಭಾವ ಇಲ್ಲದೇ ಪರಸ್ಪರ ಕೈ, ಕೈ ಹಿಡಿದುಕೊಂಡು ದೇವಿ ಮುಂದೆ ಭರ್ಜರಿ ಡಾನ್ಸ್ ಮಾಡಿದ್ದಾರೆ. ಇದನ್ನೂ ಓದಿ: ಮಾಜಿ ಸಿಎಂ ಸಿದ್ದು ಆಪ್ತರ ಮೇಲೆ ಅನುಮಾನ ಪಟ್ಟಿದ್ದಾರಾ ಡಿಕೆಶಿ?
Advertisement
Advertisement
ಮೆರವಣಿಗೆ ಪ್ರಾರಂಭದಿಂದ ಕೊನೆಯವರೆಗೂ ಮುಸ್ಲಿಮರು ಮೆರವಣಿಗೆಯಲ್ಲಿ ಭಾಗಿಯಾಗಿ ಹಿಂದೂಗಳಿಗೆ ಸಾಥ್ ನೀಡಿ ಭಕ್ತಿ ಭಾವದಿಂದ ಅಣ್ಣಮ್ಮ ತಾಯಿ ಕೃಪೆಗೆ ಪಾತ್ರರಾಗಿದ್ದಾರೆ. ದಿನ ಬೆಳಗಾದರೆ, ಧರ್ಮ-ಧರ್ಮಗಳ ನಡುವಿನ ಕಿತ್ತಾಟದ ನಡುವೆ ಈ ರೀತಿ ಭಾವೈಕ್ಯತೆ ಸಾರುವ ಅಪರೂಪದ ಘಟನೆಯಿಂದ ಎರಡು ಧರ್ಮದ ಜನರು ಫುಲ್ ಖುಷ್ ಆಗಿದ್ದಾರೆ. ಇದನ್ನೂ ಓದಿ: ಲಕ್ಷ್ಮಣ ಸವದಿಯ ಮುಂದಿನ ರಾಜಕೀಯ ಹಾದಿ ಏನು?