Bengaluru CityDistrictsKarnatakaLatestMain Post

ಲಕ್ಷ್ಮಣ ಸವದಿಯ ಮುಂದಿನ ರಾಜಕೀಯ ಹಾದಿ ಏನು?

ಬೆಂಗಳೂರು: ವಿಧಾನಪರಿಷತ್‌ನ 7 ಸ್ಥಾನಗಳಿಗೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿಯ ಮುಂದಿನ ರಾಜಕೀಯ ಹಾದಿ ಏನು ಎಂಬ ಪ್ರಶ್ನೆ ಎದ್ದಿದೆ.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಅಥಣಿಯಿಂದ ಸ್ಪರ್ಧೆ ಮಾಡುವ ಸಾಧ್ಯತೆಯಿದೆ. ಈ ಕಾರಣದಿಂದ ಜೂನ್ ನಲ್ಲಿ ನಡೆಯಲಿರುವ ಪರಿಷತ್ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಸ್ಪರ್ಧಿಸುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ. ಇದನ್ನೂ ಓದಿ: ಜೆಡಿಎಸ್ ಭದ್ರ ಕೋಟೆಯಲ್ಲಿ ಬಿಜೆಪಿ ಶಕ್ತಿ ಪ್ರರ್ಶನಕ್ಕೆ ಸಿದ್ಧತೆ

 

ಲೆಹರ್‌ ಸಿಂಗ್‌ಗೂ ಟಿಕೆಟ್‌ ಡೌಟ್‌:
ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಲೆಹರ್ ಸಿಂಗ್‌ರಿಗೆ ಮತ್ತೆ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಈಗಾಗಲೇ ಯಡಿಯೂರಪ್ಪ ಅವರ ದೆಸೆಯಿಂದ ಎರಡು ಸಲ‌ ಪರಿಷತ್‌ಗೆ ಲೆಹರ್ ಸಿಂಗ್ ಆಯ್ಕೆ ಆಗಿದ್ದಾರೆ. ಹೀಗಾಗಿ ಈ ಬಾರಿ ಬಿಜೆಪಿಯಲ್ಲಿ ಲೆಹರ್ ಸಿಂಗ್ ಬದಲು ಬೇರೊಬ್ಬರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಇದನ್ನೂ ಓದಿ: ಯುವಮೋರ್ಚಾ ಸಭೆಯಲ್ಲಿ ದ್ರಾವಿಡ್ ಭಾಗಿಯಾಗಲಿದ್ದಾರೆ: ಬಿಜೆಪಿ ಶಾಸಕ

ಬಿಜೆಪಿಯ ಲಕ್ಷಣ ಸವದಿ, ಲೆಹರ್‌ ಸಿಂಗ್‌ ಕಾಂಗ್ರೆಸ್‌ನ ಆರ್‌ಬಿ ತಿಮ್ಮಾಪೂರ್‌, ಅಲ್ಲಂ ವೀರಭದ್ರಪ್ಪ , ವೀಣಾ ಅಚ್ಚಯ್ಯ ಮತ್ತು ಜೆಡಿಎಸ್‌ನ ರಮೇಶ್‌ ಗೌಡ, ನಾರಾಯಣ ಸ್ವಾಮಿ ಅವರ ಅವಧಿ ಜೂನ್‌ 14ಕ್ಕೆ ಕೊನೆಯಾಗಲಿದೆ. ಜೂನ್ 3 ರಂದು ಚುನಾವಣೆ ನಡೆಯಲಿದ್ದು ಅಂದು ಸಂಜೆ ಫಲಿತಾಂಶ ಪ್ರಕಟವಾಗಲಿದೆ.

Leave a Reply

Your email address will not be published.

Back to top button