Bengaluru CityDistrictsKarnatakaLatestLeading NewsMain Post
ಮಾಜಿ ಸಿಎಂ ಸಿದ್ದು ಆಪ್ತರ ಮೇಲೆ ಅನುಮಾನ ಪಟ್ಟಿದ್ದಾರಾ ಡಿಕೆಶಿ?

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರ ಮೇಲೆ ಡಿಕೆ ಶಿವಕುಮಾರ್ ಅನುಮಾನ ಪಟ್ಟಿದ್ದಾರಾ ಎಂಬ ಪ್ರಶ್ನೆ ಈಗ ಎದ್ದಿದೆ.
ಪಿಎಸ್‌ಐ ಹಗರಣ ಸಂಬಂಧ ಡಿಕೆಶಿ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಈಗ ಸಂಚಲನ ಸೃಷ್ಟಿಸಿದೆ. ಈ ಮೂಲಕ ಸಿದ್ದು ಆಪ್ತರನ್ನು ಡಿಕೆ ಟಾರ್ಗೆಟ್ ಮಾಡಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಲಕ್ಷ್ಮಣ ಸವದಿಯ ಮುಂದಿನ ರಾಜಕೀಯ ಹಾದಿ ಏನು?
ಅಶ್ವಥ್ ನಾರಾಯಣ ಮತ್ತು ಎಂಬಿ ಪಾಟೀಲ್ ಭೇಟಿ ಬಗ್ಗೆ ಕೇಳಿದ ಪ್ರಶ್ನೆಗೆ ಡಿಕೆಶಿ, ಅವರ ರಕ್ಷಣೆಗೆ ಕಾಂಗ್ರೆಸ್ ಪಕ್ಷದವರು ಏನು ಮಾಡಬಾರದು. ಯಾರು ಏನು ಎತ್ತಬಾರದು ಎಂದು ಭೇಟಿಯಾಗಿದ್ದಾರೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಲಕ್ಷ್ಮಣ ಸವದಿಯ ಮುಂದಿನ ರಾಜಕೀಯ ಹಾದಿ ಏನು?
ಭೇಟಿ ವಿಚಾರವನ್ನು ಪ್ರಶ್ನೆ ಮಾಡಿದರೆ ಅದು ಖಾಸಗಿ ಭೇಟಿ. ಶಿಕ್ಷಣ ಸಂಬಂಧ ಸಲಹೆ ಕೇಳಲು ಬಂದಿದ್ದಾರೆ ಅಂತಾರೆ. ನನಗೆ ಏನೂ ಗೊತ್ತಿಲ್ಲ. ಅವರನ್ನೇ ಕೇಳಿ ಈ ವಿಚಾರ ಈಗ ಬೇಡ ಎಂದು ಹೇಳಿದರು.