ನಟ ಅನಿರುದ್ಧ ಅವರು ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ನಟಿಸಲು ಪಡೆಯುತ್ತಿದ್ದ ಸಂಭಾವನೆ ಬಹಿರಂಗವಾಗಿದೆ. ಜೀ ವಾಹಿನಿಯಲ್ಲೇ ಇವರು ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಕಲಾವಿದ ಎನ್ನುವ ಸುದ್ದಿಯೂ ಹೊರ ಬಿದ್ದಿದೆ. ಜೊತೆ ಜೊತೆಯಲಿ ಧಾರಾವಾಹಿ ಶುರುವಾದಾಗ ಒಂದು ಸಂಭಾವನೆ ಪಡೆಯುತ್ತಿದ್ದ ಅನಿರುದ್ಧ, ಕೋವಿಡ್ ವೇಳೆಯಲ್ಲಿ ಆ ಸಂಭಾವನೆಯನ್ನು ಹೆಚ್ಚಿಸಿಕೊಂಡರು ಎನ್ನುತ್ತವೆ ಆಪ್ತ ಮೂಲಗಳು.
ಜೊತೆ ಜೊತೆಯಲಿ ಧಾರಾವಾಹಿ ಶುರುವಾಗುವಾಗ ನಿರ್ಮಾಪಕರ ಜೊತೆ ಒಪ್ಪಂದ ಮಾಡಿಕೊಂಡಿದ್ದು ದಿನಕ್ಕೆ 25 ಸಾವಿರ ರೂಪಾಯಿ ಸಂಭಾವನೆಯಂತೆ. ಕೋವಿಡ್ ವೇಳೆಯಲ್ಲಿ 38 ಸಾವಿರ ರೂಪಾಯಿ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಪ್ರಮಾಣದ ಸಂಭಾವನೆಯನ್ನು ಪಡೆಯುತ್ತಿದ್ದ ಬೆರಳೆಣಿಕೆಯ ಕಲಾವಿದರಲ್ಲಿ ಇವರೂ ಒಬ್ಬರು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಬಾಲಿವುಡ್ ರಾಧೆ ಆಲಿಯಾ ಭಟ್ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ!
ಅನಿರುದ್ಧ ಅವರ ಸಂಭಾವನೆ ವಿಚಾರದಲ್ಲಿ ನಿರ್ಮಾಣ ಸಂಸ್ಥೆಯಾಗಲಿ ಅಥವಾ ಅನಿರುದ್ಧ ಆಗಲಿ ಬಹಿರಂಗವಾಗಿ ಹೇಳಿಕೊಳ್ಳದೇ ಇದ್ದರೂ, ನಂಬಲರ್ಹ ಮೂಲಗಳ ಪ್ರಕಾರ ಸದ್ಯ 38 ಸಾವಿರ ರೂಪಾಯಿ ಸಂಭಾವನೆಯನ್ನು ಅವರು ಪಡೆದುಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ. ಸಂಭಾವನೆಯ ವಿಚಾರದಲ್ಲೂ ನಿರ್ಮಾಪಕರಿಗೆ ಮತ್ತು ಅನಿರುದ್ಧ ಅವರಿಗೆ ಮನಸ್ತಾಪ ಆಗಿತ್ತು ಎನ್ನುವುದನ್ನು ಸ್ವತಃ ನಿರ್ಮಾಪಕರೇ ಒಪ್ಪಿಕೊಂಡಿದ್ದಾರೆ.