ಬಾಲಿವುಡ್ ಬ್ಯೂಟಿ ಆಲಿಯಾಗೆ ಮದುವೆಯಾಗಿ, ಗರ್ಭಿಣಿ ಆಗಿದ್ದರು ಕೂಡ ಆಲಿಯಾ ಭಟ್‌ಗೆ ಇರುವ ಡಿಮ್ಯಾಂಡ್ ಇನ್ನು ಕಮ್ಮಿಯಾಗಿಲ್ಲ. ದಿನದಿಂದ ದಿನಕ್ಕೆ ಡಿಮ್ಯಾಂಡ್ ಹೆಚ್ಚುತ್ತಲೇ ಇದೆ. ಇದೀಗ ಬಿಟೌನ್‌ನಲ್ಲಿ ಆಲಿಯಾ ಸಂಭಾವನೆ ವಿಚಾರ ಚರ್ಚೆ ಆಗುತ್ತಲೇ ಇದೆ.
Advertisement
ನಟಿ, ನಿರ್ಮಾಪಕಿಯಾಗಿ ಬೆಳೆದು ನಿಂತಿರುವ ಆಲಿಯಾ ಭಟ್ ಬಾಲಿವುಡ್‌ಗೆ ಎಂಟ್ರಿ ಕೊಟ್ಟು 10 ವರ್ಷಗಳಾಗಿದೆ. `ಸ್ಟುಡೆಂಟ್ ಆಫ್ ದಿ ಇಯರ್’ ಚಿತ್ರದ ಮೂಲಕ ಎಂಟ್ರಿ ಕೊಟ್ಟ ನಟಿ, ಇದೀಗ ಇಷ್ಟು ವರ್ಷಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹೀಗಿರುವಾಗ ಆಲಿಯಾ ಸಂಭಾವನೆ ವಿಚಾರವಾಗಿ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ.
Advertisement
Advertisement
ನಾಯಕನಿಲ್ಲದೇ ಏಕಾಂಗಿಯಾಗಿ ಸ್ತ್ರಿ ಪ್ರಧಾನ ಸಿನಿಮಾಗಳಲ್ಲಿ ನಟಿಸಿ, ಆ ಸಿನಿಮಾಗಳನ್ನ ಗೆಲ್ಲಿಸಿ ಕೊಟ್ಟಿದ್ದಾರೆ. ಆಲಿಯಾ ಕೆರಿಯರ್‌ನಲ್ಲಿ ಸೋಲಿಗಿಂತ ಜನರಿಗೆ ಒಂದೊಳ್ಳೆ ರೀಚ್ ಕೊಟ್ಟು ಗೆದ್ದ ಸಿನಿಮಾಗಳೇ ಜಾಸ್ತಿ. ಇನ್ನು ತಮ್ಮ ಮೊದಲ ಸಿನಿಮಾಗೆ ಆಲಿಯಾ, 15 ಲಕ್ಷ ಸಂಭಾವನೆ ಪಡೆದಿದ್ದರು. ಪ್ರಸ್ತುತ ಒಂದು ಸಿನಿಮಾಗೆ ಆಲಿಯಾ 10 ಕೋಟಿ ರೂ. ಚಾರ್ಜ್ ಮಾಡುತ್ತಾರೆ. ತೆಗೆದುಕೊಂಡಿರುವ ಸಂಭಾವನೆಗೆ ಅಷ್ಟೇ ಖಡಕ್ ಆಗಿ ನಟಿಸಿ ಬರುತ್ತಾರೆ. ಇದನ್ನೂ ಓದಿ:ಚಹಲ್-ಧನಶ್ರೀ ದಾಂಪತ್ಯ ಜೀವನದಲ್ಲಿ ಬಿರುಕು ರೂಮರ್ಸ್‍ಗೆ ಟ್ವಿಸ್ಟ್
Advertisement
2022 ಆಲಿಯಾಗೆ ಗೆಲುವಿನ ವರ್ಷವಾಗಿದೆ. ಸಿನಿಮಾ ಕೆರಿಯರ್‌ನಲ್ಲೂ ಒಳ್ಳೆಯ ಸಕ್ಸಸ್ ಕಂಡರು. ರಣ್‌ಬೀರ್ ಜತೆ ಹಸೆಮಣೆ ಏರಿದ್ದರು. ತಾಯಿಯಾಗಿರುವ ಗುಡ್ ನ್ಯೂಸ್ ಸಹ ಅಭಿಮಾನಿಗಳ ಜತೆ ಹಂಚಿಕೊಂಡರು.