ಅಮರಾವತಿ: ಪ್ರೇಮಿಗಳಿಗೆ (Lovers) ಜಗತ್ತೇ ಕುರುಡಾಗಿರುತ್ತದೆ. ಕೆಲ ಪ್ರೇಮಿಗಳಂತೂ ಅಕ್ಕಪಕ್ಕ ಯಾರಿರುತ್ತಾರೆ ಎಂಬ ಅರಿವೇ ಇಲ್ಲದೇ ಸಾರ್ವಜನಿಕ ಪ್ರದೇಶಗಳಲ್ಲೂ ಹುಚ್ಚಾಟ ಮರೆಯುವುದನ್ನು ನೋಡಿರುತ್ತೇವೆ. ಸದ್ಯ ಪ್ರೇಮಿಗಳಿಬ್ಬರು ಹಾಡಹಗಲೇ ರಸ್ತೆಯಲ್ಲಿ ಬೈಕ್ ಮೇಲೆ ಕುಳಿತು ರೊಮ್ಯಾನ್ಸ್ ಮಾಡಿಕೊಂಡು ಚಲಿಸುತ್ತಿರುವ ವೀಡಿಯೋ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ.
విశాఖలో లవర్స్ ఓవర్ యాక్షన్. స్టీల్ ప్లాంట్ మెయిన్ రోడ్డుపై పట్టపగలు బరితెగింపు. హెల్మెట్ లేకుండా యువకుడు డ్రైవింగ్. కాలేజ్ యూనిఫామ్ ధరించి విద్యార్థిని వికృత చేష్టలు చూసి నివ్వెరపోయిన స్థానికులు. #AndhraPradesh #Visakhapatnam #Vizag pic.twitter.com/i2dGgHKElg
— Vizag News Man (@VizagNewsman) December 29, 2022
ಯುವ ಪ್ರೇಮಿಗಳಿಬ್ಬರು ಹಾಡಹಗಲೇ ಬೈಕ್ ಮೇಲೆ ರಾಜಾರೋಷವಾಗಿ ತಬ್ಬಿಕೊಂಡು ಹೋಗುತ್ತಿದ್ದಾರೆ. ಬೈಕಿನ (Bike) ಪೆಟ್ರೋಲ್ ಟ್ಯಾಂಕ್ ಮೇಲೆ ಉಲ್ಟಾ ಕುಳಿತ ಯುವತಿ ತನ್ನ ಪ್ರಿಯಕರನನ್ನು ಬಿಗಿದಪ್ಪಿಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಇದೇ ವೇಳೆ ಹಿಂಬಂದಿಯಿಂದ ಬರುತ್ತಿದ್ದ ವಾಹನ ಸವಾರರು ಇಬ್ಬರ ರೊಮ್ಯಾನ್ಸ್ (Romance) ದೃಶ್ಯವನ್ನು ವೀಡಿಯೋ ಮಾಡಿ ಜಾಲತಾಣದಲ್ಲಿ (Social Media) ಹರಿಬಿಟ್ಟಿದ್ದಾರೆ. ಈ ಪ್ರೇಮಿಗಳ ನಡೆಗೆ ಎಲ್ಲೆಡೆ ಆಕ್ಷೇಪ ವ್ಯಕ್ತವಾಗಿದೆ. ಇದನ್ನೂ ಓದಿ: ಹೊಸ ವರ್ಷದಂದೇ ವಾಣಿಜ್ಯ ಬಳಕೆಯ ಎಲ್ಪಿಜಿ ದರ 25 ರೂ. ಏರಿಕೆ
ಪೊಲೀಸರು ಕೊಟ್ರು ಶಾಕ್: ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣಂನ ಸ್ಟೀಲ್ ಪ್ಲಾಂಟ್ ರಸ್ತೆಯಲ್ಲಿ ಬೈಕ್ ಮೇಲೆ ರೊಮ್ಯಾನ್ಸ್ ಮಾಡುತ್ತಾ ತೆರಳುತ್ತಿದ್ದ ಪ್ರೇಮಿಗಳಿಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವತಿಯನ್ನು ಇಲ್ಲಿನ ಚೋಡವರಂ ನಿವಾಸಿ ಕೆ.ಶೈಲಜಾ (19) ಹಾಗೂ ಯುವಕ ಅಜಯ್ ಕುಮಾರ್ (22) ಎಂದು ಗುರುತಿಸಲಾಗಿದೆ. ಬಳಿಕ ಯುವಕನ ಬೈಕ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರೇಮಿಗಳಿಬ್ಬರು ನಡೆಸಿದ ಹುಚ್ಚಾಟದಿಂದ ರಸ್ತೆ ಸುರಕ್ಷತೆ ನಿಯಮವನ್ನು ಉಲ್ಲಂಘಿಸಿದ್ದು, ಐಪಿಸಿ (IPC) ಸೆಕ್ಷನ್ 336, 279 ಹಾಗೂ ಮೋಟಾರು ವಾಹನ ಕಾಯ್ದೆ (Motor Vehicle Act) ಸೆಕ್ಷನ್ 132, 129ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ವಿಶಾಖಪಟ್ಟಣಂ ಪೊಲೀಸ್ ಆಯುಕ್ತ ಸಿ.ಎಚ್. ಶ್ರೀಕಾಂತ್ ತಿಳಿಸಿದ್ದಾರೆ. ಅಲ್ಲದೇ ನಾಗಕರಿಕರು ವಾಹನ ಚಲಾಯಿಸುವಾಗ ಸಂಚಾರ ನಿಯಮ ಪಾಲನೆ ಮಾಡುವಂತೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಬೈಕ್ ಟ್ಯಾಂಕ್ ಮೇಲೆ ಕುಳಿತು ಪ್ರೇಮಿಗಳ ಲಿಪ್ಲಾಕ್ – ಲವರ್ಸ್ ಜಾಲಿ ರೈಡ್ ವೀಡಿಯೋ ವೈರಲ್
ಈ ಹಿಂದೆ ದೆಹಲಿಯಲ್ಲಿ ರಾತ್ರಿ ವೇಳೆ ಪ್ರೇಮಿಗಳಿಬ್ಬರು ನಡು ರಸ್ತೆಯಲ್ಲಿ ರೊಮ್ಯಾನ್ಸ್ ಮಾಡಿಕೊಂಡು ಹೋಗುತ್ತಿದ್ದದ್ದು, ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲೂ ಇಂತಹದ್ದೇ ಕೇಸ್ ಬೆಳಕಿಗೆ ಬಂದಿತ್ತು.