ಹೈದರಾಬಾದ್: ಸಂಕ್ರಾಂತಿ ಹಬ್ಬದ ಪ್ರಯುಕ್ತ ಆಂಧ್ರದ ಪಶ್ಚಿಮ ಗೋದಾವರಿ ಜಿಲ್ಲೆಯ ನರಸಪುರಂನ ಕುಟುಂಬವೊಂದು ತಮ್ಮ ಭಾವಿ ಅಳಿಯನಿಗೆ 365 ಬಗೆಯ ಅಡುಗೆ ಮಾಡಿ ಉಣಬಡಿಸಿ ಉಪಚರಿಸಿದ್ದಾರೆ.
Advertisement
ತುಮ್ಮಲಪಲ್ಲಿ ಸುಬ್ರಹ್ಮಣ್ಯಂ ಮತ್ತು ಅನ್ನಪೂರ್ಣ ಅವರು ತಮ್ಮ ಮಗ ಸಾಯಿಕೃಷ್ಣರನ್ನು ಚಿನ್ನದ ವ್ಯಾಪಾರಿ ಆಟಂ ವೆಂಕಟೇಶ್ವರ ರಾವ್ ಮತ್ತು ಮಾಧವಿ ದಂಪತಿಯ ಪ್ರೀತಿಯ ಪುತ್ರಿ ಕುಂದವಿಯೊಂದಿಗೆ ವಿವಾಹ ಮಾಡಲು ನಿರ್ಧರಿಸಿದ್ದಾರೆ. ಆದರೆ ಮದುವೆಗೂ ಮುನ್ನ ಹಬ್ಬ ಬಂದಿದ್ದರಿಂದ ವಧುವಿನ ಅಜ್ಜ ಅಚಂತ ಗೋವಿಂದ್ ಮತ್ತು ಅಜ್ಜಿ ನಾಗಮಣಿ ಭಾವಿ ಅಳಿಯನಿಗೆ ಔತಣ ಕೂಟ ಆಯೋಜಿಸಿದ್ದರು. ಈ ಅದ್ಧೂರಿ ಔತಣ ಕೂಟದಲ್ಲಿ ವಧು ಮತ್ತು ವರ ಇಬ್ಬರೂ ಕುಟುಂಬದವರು ಪಾಲ್ಗೊಂಡಿದ್ದರು. ಇದನ್ನೂ ಓದಿ: ಪಾಕ್ ಪ್ರಧಾನಿ ಅಂತರಾಷ್ಟ್ರೀಯ ಭಿಕ್ಷುಕ: ಸಿರಾಜುಲ್ ಹಕ್
Advertisement
Advertisement
30 ವಿವಿಧ ಬಗೆಯ ಕರಿಗಳು, ಅನ್ನ, ಪುಳಿಯೊಗರೆ, ಬಿರಿಯಾನಿ, ಸಾಂಪ್ರದಾಯಿಕ ಗೋದಾವರಿ ಸಿಹಿತಿಂಡಿಗಳು, ಬಿಸಿ ಮತ್ತು ತಂಪಾದ ಪಾನೀಯಗಳು, ಬಿಸ್ಕತ್‍ಗಳು, ಹಣ್ಣಗಳು, ಕೇಕ್‍ಗಳು ಸೇರಿದಂತೆ ಹಲವಾರು ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು. ಈ ಸುದ್ದಿ ಊರಿನಲ್ಲಿ ಭಾರೀ ದೊಡ್ಡ ಸುದ್ದು ಮಾಡಿತ್ತು. ಎರಡು ಕುಟುಂಬದವರು ಬಹಳ ಆತ್ಮೀಯರಾಗಿದ್ದು, ಅಳಿಯನಿಗೆ ಸತ್ಕಾರವನ್ನು ಬಹಳ ಚೆನ್ನಾಗಿ ಮಾಡಿದ್ದಾರೆ. ಇದನ್ನೂ ಓದಿ: ವಜ್ರ ಖಚಿತ ಐಫೋನ್ ಕದ್ದು ವಾಟ್ಸಪ್ ಸ್ಟೇಟಸ್‍ನಲ್ಲಿ ಸಿಕ್ಕಿ ಬಿದ್ರು