LatestMain PostNational

ಪಾಕ್ ಪ್ರಧಾನಿ ಅಂತರಾಷ್ಟ್ರೀಯ ಭಿಕ್ಷುಕ: ಸಿರಾಜುಲ್ ಹಕ್

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಂತರಾಷ್ಟ್ರೀಯ ಭಿಕ್ಷುಕ ಎಂದು ಜಮಾಯತ್ ಮುಖ್ಯಸ್ಥ ಸಿರಾಜುಲ್ ಹಕ್ ವ್ಯಂಗ್ಯವಾಡಿದ್ದಾರೆ.

ಪಾಕಿಸ್ತಾನದ ಹಣಕಾಸು ಸಂಕಷ್ಟ ಬೆಟ್ಟದಷ್ಟು ಮಿತಿಮೀರಿದ್ದು, ಪ್ರಧಾನಿ ಇಮ್ರಾನ್ ಖಾನ್ ಅಂತಾರಾಷ್ಟ್ರೀಯ ಭಿಕ್ಷುಕ. ಆತ ಪ್ರಧಾನಿ ಹುದ್ದೆಯಿಂದ ತೊಲಗಿದರೆ ಮಾತ್ರ ಈ ಸಮಸ್ಯೆಗಳಿಗೆಲ್ಲಾ ಪರಿಹಾರ ದೊರಕುವುದು ಎಂದೂ ಜಮಾಯತ್ ಮುಖ್ಯಸ್ಥ ಕಿಡಿಕಾರಿದ್ದಾರೆ. ಇದನ್ನೂ ಓದಿ: ವಜ್ರ ಖಚಿತ ಐಫೋನ್ ಕದ್ದು ವಾಟ್ಸಪ್ ಸ್ಟೇಟಸ್‍ನಲ್ಲಿ ಸಿಕ್ಕಿ ಬಿದ್ರು 

ಪಾಕಿಸ್ತಾನದಲ್ಲಿ ಆರ್ಥಿಕ ದುಸ್ಥಿತಿ ಹೇರಳವಾಗಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಈಗಾಗಲೇ ಎರಡು ಮಿನಿ ಬಜೆಟ್‍ಗಳನ್ನು ಮಂಡಿಸಲಾಗಿದೆ. ದೇಶದ ವ್ಯಾಪಾರ ಕೊರತೆ ತಾಳತಪ್ಪಿದೆ. ಹಣದುಬ್ಬರ ಹೆಚ್ಚುತ್ತಲೇ ಇದೆ. ಇದನ್ನೆಲ್ಲಾ ಸರಿದೂಗಿಸಲು ಶತಕೋಟಿ ಡಾಲರ್ ಸಾಲ ಎತ್ತುವಳಿ ಯೋಜನೆ  ಮೂಲಕ ತಾನು ಅಂತಾರಾಷ್ಟ್ರೀಯ ಭಿಕ್ಷುಕ ಎಂದು ಪಾಕ್ ಪ್ರಧಾನಿ ಸಾಭೀತು ಮಾಡುತ್ತಿದ್ದಾರೆ. ಇದನ್ನೂ ಓದಿ: ಪಾಕ್ ಆರ್ಥಿಕತೆ ಭಾರತಕ್ಕಿಂತ ಚೆನ್ನಾಗಿದೆ: ಇಮ್ರಾನ್ ಖಾನ್

ಪಾಕಿಸ್ತಾನ ಆರ್ಥಿಕತೆ ಸುಸ್ಥಿಗೆ ತರಲು ಹಿಂದಿನ ಸರ್ಕಾರದಿಂದಲೂ ಏನೂ ಮಾಡಲು ಸಾಧ್ಯವಾಗಲಿಲ್ಲ. ಅದಾದ ಮೇಲೆ ತಾನು ಆರ್ಥಿಕತೆಯ ಚಾಂಪಿಯನ್ ಎಂದು ಡಾಯಿ ಕೊಚ್ಚಿಕೊಂಡು ಅಧಿಕಾರಕ್ಕೆ ಬಂದ ಇಮ್ರಾನ್ ಖಾನ್‍ಗೂ ಸಹ ಏನೂ ಮಾಡಲು ಆಗಲಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಲಸಿಕೆ ಜಾಗೃತಿ ಮೂಡಿಸಿದ ಗೂಗಲ್ ಡೂಡಲ್

ಕೆಲವು ದಿನಗಳ ಹಿಂದೆ ಇಮ್ರಾನ್ ಖಾನ್ ಭಾರತ ಆರ್ಥಿಕತೆಗಿಂದ ಪಾಕಿಸ್ಥಾನ ಆರ್ಥಿಕತೆ ಉತ್ತಮವಾಗಿದೆ ಎಂದು ಹೇಳಿದ್ದರು. ಆದರೆ ಇದೇ ಬೆನ್ನಲ್ಲೇ ಪಾಕ್ ಪ್ರಧಾನಿ ಅಂತರಾಷ್ಟ್ರೀಯ ಭಿಕ್ಷುಕ ಎಂದು ಜಮಾಯತ್ ಮುಖ್ಯಸ್ಥ ಸಿರಾಜುಲ್ ಹಕ್ ಟೀಕಿಸಿದ್ದಾರೆ.

Leave a Reply

Your email address will not be published.

Back to top button