– ಐವರು ಸಚಿವರ ಜೊತೆ ಸಿಎಂ ಪ್ರತ್ಯೇಕ ಮಾತುಕತೆ
ಬೆಂಗಳೂರು: ಸಚಿವರ ಟ್ರ್ಯಾಪ್‌ಗೆ (Trap) ಯತ್ನ ನಡೆಯುತ್ತಿದೆ, ಹುಷಾರಾಗಿರಿ ಎಂದು ಸಚಿವರಿಗೆ ಸಿಎಂ ಡಿಕೆ ಶಿವಕುಮಾರ್ (DK Shivakumar) ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಡಿಕೆಶಿ ಸಚಿವರಿಗೆ ಕಿವಿಮಾತು ಹೇಳಿದ್ದಾರೆ. ಎರಡು ತಂಡಗಳಿಂದ ಸ್ಟಿಂಗ್ ಆಪರೇಷನ್ ನಡೆಯುತ್ತಿದೆ. ಸಚಿವರ ಚಲನವಲನದ ಮೇಲೆ ನಿಗಾ ಇಡಲಾಗಿದೆ, ಖಾಸಗಿ ಸ್ಟಿಂಗ್ ಆಪರೇಷನ್ ನಡೆಯುತ್ತಿದೆ. ಸಚಿವರು ಹುಷಾರಾಗಿರುವಂತೆ ಸಿಎಂ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಹಿಂದೆ ಸಂಕಷ್ಟ ಬಂದಾಗ ನಲುಗುತ್ತಿತ್ತು, ಆದರೆ ಈಗ ಬಿಕ್ಕಟ್ಟು ಎದುರಾದಾಗ ಭಾರತದ ಬಗ್ಗೆ ವಿಶ್ವವೇ ಚರ್ಚಿಸುತ್ತೆ: ಮೋದಿ
ಯಾರೆಲ್ಲಾ ಹುಷಾರಾಗಿರಬೇಕು ಎಂದು ಪ್ರತ್ಯೇಕವಾಗಿ ಸಿಎಂ ಅಲರ್ಟ್ ಮೆಸೇಜ್ ನೀಡಿದ್ದಾರೆ. ಗುಪ್ತಚರ ಮಾಹಿತಿ ಆಧರಿಸಿ ಡಿಕೆಶಿ ಸುಳಿವು ನೀಡಿದ್ದು, ಟಾರ್ಗೆಟ್ ಮಾಡಿರುವ ಐವರು ಸಚಿವರ ಜೊತೆ ಡಿಕೆಶಿ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಕ್ಯಾಬಿನೆಟ್ ಸಭೆಯಲ್ಲಿ ಒಟ್ಟಾಗಿ ಹೇಳಿ ಬಳಿಕ ಸಿಎಂ ಆ ಐದು ಸಚಿವರ ಜೊತೆ ಪ್ರತ್ಯೇಕ ಮಾತುಕತೆ ಮಾಡಿ ಬುದ್ಧಿಮಾತು ಹೇಳಿದ್ದಾರೆ. ಡಿಕೆಶಿ ಮಾತುಕತೆ ನಡೆಸಿರುವ ಆ ಐವರು ಸಚಿವರು ಯಾರು ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಇದನ್ನೂ ಓದಿ: ಹಾಲು ಆಯ್ತು, ಶೀಘ್ರವೇ ಬಸ್ ದರ ಏರಿಕೆ – ಇಂದು ತಜ್ಞರ ಸಮಿತಿಯಿಂದ ವರದಿ ಸಲ್ಲಿಕೆ

