ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್ ನಟನೆಯ `ಲಾಲ್ ಸಿಂಗ್ ಚಡ್ಡಾ’ ರಿಲೀಸ್ಗೆ ರೆಡಿ ಆಗಿದೆ. ಈ ಚಿತ್ರದ ನಂತರ ಮಿಸ್ಟರ್ ಪರ್ಫೆಕ್ಟ್ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ, ಯಾವ ರೀತಿಯ ಪಾತ್ರವನ್ನು ಅವರು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿತ್ತು. ಅದಕ್ಕೀಗ ತೆರೆ ಬಿದ್ದಿದೆ. ಅವರು ಮುಂದಿನ ಸಿನಿಮಾದಲ್ಲಿ ರಣ್ಬೀರ್ ಕಪೂರ್ ಜತೆ ನಟಿಸುತ್ತಿದ್ದು, ಹಲವು ವರ್ಷಗಳ ಅವರ ಅಭಿಮಾನಿಗಳ ಆಸೆಯನ್ನು ಈ ಮೂಲಕ ಈಡೇರಿಸುತ್ತಿದ್ದಾರೆ.
ಆಮೀರ್ ಖಾನ್ ಕೆರಿಯರ್ನ ಸೂಪರ್ ಹಿಟ್ `ಪಿಕೆ’ ಚಿತ್ರದಲ್ಲಿ ರಣ್ಬೀರ್ ಕಪೂರ್ ಗೆಸ್ಟ್ ರೋಲ್ ನಲ್ಲಿ ನಟಿಸಿದ್ದರು. `ಪಿಕೆ’ ಚಿತ್ರ ಇಷ್ಟಪಟ್ಟಿದ್ದ ಅಭಿಮಾನಿಗಳು ಇವರಿಬ್ಬರೂ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡರೆ ಹೇಗಿರುತ್ತದೆ ಅಂತಾ ಲೆಕ್ಕಾಚಾರ ಹಾಕಿದ್ದರು. ಈಗ ಅಭಿಮಾನಿಗಳ ಅಭಿಲಾಷೆಯಂತೆ ಆಮೀರ್ ಖಾನ್ ಮತ್ತು ರಣ್ಬೀರ್ ಕಪೂರ್ ಒಂದೇ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ.
- Advertisement 2
ಹೊಸ ಪ್ರಾಜೆಕ್ಟ್ಗಾಗಿ ತೆರೆಯಮರೆಯಲ್ಲಿ ಜೋರಾಗಿಯೇ ತಯಾರಿ ನಡೆಯುತ್ತಿದೆ. ಈ ಹೊಸ ಚಿತ್ರವನ್ನ ಸರ್ಫರೋಶ್ ಎಂಬುವವರು ನಿರ್ಮಾಣ ಮಾಡುತ್ತಿದ್ದು, ಹೊಸ ರೀತಿಯ ಕಥೆಯನ್ನು ಚಿತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ.ಇಬ್ಬರು ಸ್ಟಾರ್ಗಳಿರೋ ಈ ಚಿತ್ರದಲ್ಲಿ ವಿಭಿನ್ನ ಕಂಟೆಂಟ್ ಜೊತೆ ಪವರ್ಫುಲ್ ಪಾತ್ರಗಳೂ ಇರಲಿದ್ದು, `ಪಿಕೆ’ ಚಿತ್ರ ನೋಡಿ ಖುಷಿಪಟ್ಟಿದ್ದ ಅಭಿಮಾನಿಗಳಿಗೆ, ನಯಾ ಪ್ರಾಜೆಕ್ಟ್ನಲ್ಲಿ ಆಮೀರ್ ಮತ್ತು ರಣ್ಬೀರ್ ಕಪೂರ್ ಜುಗಲ್ಬಂದಿ ಅಟ್ರ್ಯಾಕ್ಟ್ ಮಾಡಲಿದೆ. ಇದನ್ನು ಓದಿ: ಕೆಜಿಎಫ್ 2 : ಗಗನ ನೀ.. ಇಂದು ಅಮ್ಮನ ಹಾಡು ರಿಲೀಸ್
- Advertisement 3
ಆಮೀರ್ ಖಾನ್ ನಟನೆಯ `ಲಾಲ್ ಸಿಂಗ್ ಚಡ್ಡಾ’ ಚಿತ್ರದ ಪ್ರೀ ಪ್ರೋಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಸಾಕಷ್ಟು ವಿಚಾರಗಳಿಂದ ಗಮನ ಸೆಳೆಯುತ್ತಿರೋ ಈ ಚಿತ್ರ ಆಗಸ್ಟ್ 11ಕ್ಕೆ ತೆರೆಗೆ ಬರಲು ಸಜ್ಜಾಗಿದೆ. `ಲಾಲ್ ಸಿಂಗ್ ಚಡ್ಡಾ’ ರಿಲೀಸ್ ಬಳಿಕ ಆಮೀರ್ ಮತ್ತು ಆರ್ಕೆ ನಟನೆಯ ಚಿತ್ರ ಸೆಟ್ಟೇರಲಿದೆ.