ಕಲಬುರಗಿ: ಮಸೀದಿಯಲ್ಲಿರೋ (Mosque) ಕೆಲ ಮುಸ್ಲಿಮರು (Muslim Community) ಕಳ್ಳತನ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಗ್ರಾಮಸ್ಥರಿಂದಲೇ ಮಸೀದಿಗೆ ಮುತ್ತಿಗೆ ಹಾಕಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಅಫಜಲಪುರ ತಾಲೂಕಿನ ಆನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮಸ್ಥರೇ ಮಸೀದಿಗೆ ಮುತ್ತಿಗೆ ಹಾಕಿದ್ದಾರೆ. ಇದನ್ನೂ ಓದಿ: ‘ಕಾಂತಾರ’ ಜಾತಿ, ಧರ್ಮ, ಭಾಷೆ ಮೀರಿ ಬೆಸೆಯುತ್ತಿದೆ: ನಟ ಕಿಶೋರ್
ಮಸೀದಿಯಲ್ಲಿರೋ ಕೆಲ ಮುಸ್ಲಿಮರು (Muslims) ಕಳ್ಳತನ ಮಾಡ್ತಿದ್ದಾರೆ. ಅವರು ಬೇರೆ ಬೇರೆ ಕಡೆ ಹೋಗಿ ಕಳ್ಳತನ ಮಾಡಿಕೊಂಡು, ರಾತ್ರಿ ಮಸೀದಿಯಲ್ಲಿ ಉಳಿದುಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: Love You SO Much – ಪಾಕ್ ವಿರುದ್ಧ ಗೆಲುವಿನ ಬಳಿಕ ಅನುಷ್ಕಾಗೆ ಕೃತಜ್ಞತೆ ಸಲ್ಲಿಸಿದ ಕೊಹ್ಲಿ
ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಅಫಜಲಫುರ ಪೊಲೀಸರು (Police) ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಬಳಿಕ ಮಸೀದಿಯಲ್ಲಿದ್ದ ಐವರನ್ನು ಠಾಣೆಗೆ ಕರೆದೊಯ್ದಿದ್ದಾರೆ. ಠಾಣೆಗೆ ಹೋದ ಬಳಿಕ ಆದ್ರೆ ತಾವು ಜಮಾತ್ಗೆ ಬಂದಿದ್ದೇವೆ, ಕಳ್ಳರಲ್ಲಾ ಅಂತ ಮುಸ್ಲಿಂ ಸಮುದಾಯದವರು ಹೇಳಿದ್ದಾರೆ.