ಲಕ್ನೋ: ಉತ್ತರ ಪ್ರದೇಶದ ಆರ್ಥಿಕತೆ ಸುಧಾರಣೆಯಾಗುವ ಬದಲು ಹದಗೆಡುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಹರಿಹಾಯ್ದಿದ್ದಾರೆ.
Advertisement
ರಾಜ್ಯದ ಆರ್ಥಿಕತೆಯನ್ನು 1 ಲಕ್ಷ ಟ್ರಿಲಿಯನ್ ಡಾಲರ್ ಮಾಡುವ ಬಗ್ಗೆ ಯೋಗಿ ಆದಿತ್ಯನಾಥ್ ಅವರು ಮೌನವಾಗಿದ್ದಾರೆ. ಬಿಜೆಪಿಯ ತಪ್ಪಾದ ನೀತಿಗಳಿಂದ ಉತ್ತರ ಪ್ರದೇಶದ ಆರ್ಥಿಕತೆ ಕುಸಿದಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕೊರೊನಾದೊಂದಿಗೆ ಪ್ರತಿಪಕ್ಷಗಳು ಸ್ನೇಹ ಬೆಳೆಸುತ್ತಿದೆ: ಯೋಗಿ ಆದಿತ್ಯನಾಥ್
Advertisement
Advertisement
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆರ್ಥಿಕತೆಯನ್ನು 5 ಲಕ್ಷ ಟ್ರಿಲಿಯನ್ ಡಾಲರ್ ಮಾಡುವ ಕನಸನ್ನು ತೋರಿಸಿದ್ದಾರೆ. ಆದರೆ ಅದಕ್ಕಾಗಿ ಯಾವುದೇ ಹೆಜ್ಜೆ ಮುಂದಿಟ್ಟಿಲ್ಲ. ಇನ್ನೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಎಂದು ಕರೆಸಿಕೊಳ್ಳುವ ಯೋಗಿ ಆದಿತ್ಯನಾಥ್ ಅವರು ಈ ಮುನ್ನ ರಾಜ್ಯದ ಆರ್ಥಿಕತೆಯನ್ನು ಒಂದು ಲಕ್ಷ ಲಕ್ಷ ಟ್ರಿಲಿಯನ್ ಡಾಲರ್ ಗೊಳಿಸುವುದಾಗಿ ಬೊಬ್ಬೆ ಹೊಡೆದಿದ್ದರು. ಈಗ ಅದರ ಬಗ್ಗೆ ಮೌನವಾಗಿದ್ದಾರೆ. ಆರ್ಥಿಕತೆಯಲ್ಲಿ ಉತ್ತರ ಪ್ರದೇಶ ಮುಂದೆ ಹೋಗುವ ಬದಲು ಹಿಂದೆ ಸಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಆತಂಕ – ಇಂದಿನಿಂದ ದೆಹಲಿಯಲ್ಲಿ ನೈಟ್ ಕರ್ಫ್ಯೂ