ಬೆಂಗಳೂರು: ಬಿ.ವೈ.ವಿಜಯೇಂದ್ರಗೆ (Vijayendra) ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಸಿಕ್ಕಿದ್ದು ಆಕಾಂಕ್ಷಿಗಳಲ್ಲಿ ಅಸಮಾಧಾನ ಕಟ್ಟೆ ಒಡೆಯುವಂತೆ ಮಾಡಿದೆ. ಪಕ್ಷದ ಹಿರಿಯರು, ಅನುಭವಿಗಳೂ ಆದ ನಮಗೇ ಪಕ್ಷದ ಸಾರಥ್ಯ ಸಿಗುತ್ತದೆ ಎಂದುಕೊಂಡಿದ್ದವರು ಈಗ ಬೇಸರಗೊಂಡಿದ್ದಾರೆ. ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡದೇ ಮೌನ ವಹಿಸಿದ್ದಾರೆ.
ವಿಜಯೇಂದ್ರಗೆ ಪಕ್ಷದ ಸಾರಥ್ಯ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಲು ರಾಜ್ಯಾಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಸೋಮಣ್ಣ (Somanna) ನಿರಾಕರಿಸಿದ್ದು, ಮೌನವಾಗಿದ್ದರು. ವಿಜಯೇಂದ್ರ ಅಧ್ಯಕ್ಷ ಪಟ್ಟ ವಿಚಾರವನ್ನು ಸೋಮಣ್ಣ ಒಪ್ಪಿಕೊಳ್ಳುತ್ತಾರಾ ಅಥವಾ ಇಲ್ಲವಾ ಎಂಬುದು ಪ್ರಶ್ನೆಯಾಗಿದ್ದು, ಅವರ ನಡೆ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಬೂತ್ ಗೆದ್ದರೆ, ದೇಶ ಗೆಲ್ತೇವೆ: ಬಿವೈ ವಿಜಯೇಂದ್ರ
Advertisement
Advertisement
ವಿಜಯೇಂದ್ರ ಆಯ್ಕೆ ಕುರಿತು ಮಾಧ್ಯಮದವರು ಕೇಳಿದಾಗ ಸೋಮಣ್ಣ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ನಾನೇ ಸುದ್ದಿಗೋಷ್ಠಿ ಮಾಡ್ತೀನಿ ಎಂದಷ್ಟೇ ಹೇಳಿದವರು, ಮುಂದೆ ಒಂದು ಮಾತು ಕೂಡ ಆಡದೇ ಕಾರು ಹತ್ತಿ ಹೊರಟು ಹೋದರು.
Advertisement
ಈ ಹಿಂದೆಯೇ ಹೈಕಮಾಂಡ್ ಬಳಿ ಬಾಯಿ ಬಿಟ್ಟು ರಾಜ್ಯಾಧ್ಯಕ್ಷ ಸ್ಥಾನ ಕೊಡುವಂತೆ ಸೋಮಣ್ಣ ಕೇಳಿದ್ದರು. ತಮಗೆ ಸಾಮರ್ಥ್ಯ ಇದೆ. ನಿಮ್ಮ ಮಾತು ಕೇಳಿ ಎರಡು ಕಡೆ ಸ್ಪರ್ಧಿಸಿ ಸೋತೆ. ನಿಮ್ಮಿಂದಲೇ ನನ್ನ ರಾಜಕೀಯ ಬದುಕು ಅತಂತ್ರವಾಯ್ತು ಅಂತ ಸೂಕ್ಷ್ಮವಾಗಿ ವರಿಷ್ಠರಿಗೆ ತಿಳಿಸಿದ್ದರು. ಇದನ್ನೂ ಓದಿ: ಈಗ ನಾನೊಬ್ಬ ಸಾಮಾನ್ಯ ಕಾರ್ಯಕರ್ತ: ಅಸಮಾಧಾನ ಹೊರಹಾಕಿದ ಸಿಟಿ ರವಿ
Advertisement
ಆದರೂ ತಮ್ಮನ್ನು ವರಿಷ್ಠರು ಪರಿಗಣಿಸದ ಹಿನ್ನೆಲೆಯಲ್ಲಿ ಸೋಮಣ್ಣ ತೀವ್ರ ಬೇಸರಗೊಂಡಿದ್ದಾರೆ. ಈಗ ಮುಂದೇನು ಮಾಡಬೇಕೆಂದು ಗಂಭೀರ ಆಲೋಚನೆಯಲ್ಲಿ ಇದ್ದಾರೆ. ಸೋಮಣ್ಣರಿಗೆ ಕಾಂಗ್ರೆಸ್ನಿಂದಲೂ ಆಹ್ವಾನ ಇದೆ ಎನ್ನಲಾಗಿದೆ. ಆದರೆ ಇದುವರೆಗೆ ಯಾವುದೇ ನಿರ್ಧಾರ ಮಾಡಿಲ್ಲ. ಇನ್ಮುಂದೆ ಸೋಮಣ್ಣ ನಿರ್ಣಯ ಬಗ್ಗೆ ಕುತೂಹಲ ಸೃಷ್ಟಿಯಾಗಿದೆ. ತಮಗೆ ಭಾರೀ ಅಪಮಾನ ಆಗಿದೆ ಎಂಬ ಭಾವನೆಯಲ್ಲಿ ಸೋಮಣ್ಣ ಇದ್ದಾರೆ ಎನ್ನಲಾಗಿದೆ.