ತಮಿಳಿನ ಸ್ಟಾರ್ ದಂಪತಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಯಾದ ಮರುದಿನವೇ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋದಾಗ ಭಕ್ತರ ಕಂಗೆಣ್ಣಿಗೆ ಗುರಿಯಾಗಿದ್ದರು. ದೇವಸ್ಥಾನದ ಆವರಣದ ಒಳಗೆ ನಯನತಾರಾ ಚಪ್ಪಲಿ ಹಾಕಿಕೊಂಡು ಹೋದರು ಎನ್ನುವ ಕಾರಣಕ್ಕಾಗಿ ವಿವಾದ ಮಾಡಿಕೊಂಡಿದ್ದರು. ತಿರುಪತಿ ಟ್ರಸ್ಟ್ ಮತ್ತು ತಿಮ್ಮಪ್ಪನ ಭಕ್ತರಿಗೆ ವಿಘ್ನೇಶ್ ಕ್ಷಮೆ ಕೇಳಿದರೂ, ದಂಪತಿಗೆ ನೋಟಿಸ್ ನೀಡುವ ಮೂಲಕ ತಿರುಪತಿ ಆಡಳಿತ ಮಂಡಳಿ ಬಿಸಿ ಮುಟ್ಟಿಸಿತು.
Advertisement
ಇದೀಗ ಮತ್ತೊಂದು ಇಕ್ಕಟ್ಟಿಗೆ ಸಿಲುಕಿದ್ದಾರೆ ನಯನತಾರಾ ಮತ್ತು ವಿಘ್ನೇಶ್ ಶಿವನ್. ಈ ಯಡವಟ್ಟು ಕ್ಷಮೆ ಕೇಳುವ ಮೂಲಕ ಬಗೆಹರಿಯುವಂಥದ್ದು ಅಲ್ಲ ಎನ್ನುವುದು ಸ್ವತಃ ಅವರಿಗೂ ಗೊತ್ತಿರುವ ಸಂಗತಿಯಾಗಿದೆ. ನಯನತಾರಾ ತಮ್ಮ ಮದುವೆಯ ಫೋಟೋ ಮತ್ತು ವಿಡಿಯೋ ಹಕ್ಕುಗಳನ್ನು ಓಟಿಟಿಗೆ ಸೇಲ್ ಮಾಡಿದ್ದರು. ಅದರ ಒಪ್ಪಂದದ ಪ್ರಕಾರ ಮದುವೆಯ ಒಂದೇ ಒಂದು ಫೋಟೋ ಶೇರ್ ಮಾಡಲು ಓಟಿಟಿ ಸಂಸ್ಥೆಗೆ ಅನುಮತಿ ಕೇಳಬೇಕಿತ್ತು. ಆದರೆ, ನಯನತಾರಾ ದಂಪತಿ ಹಾಗೇ ಮಾಡಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಹಲವು ಫೋಟೋಗಳನ್ನು ಶೇರ್ ಮಾಡಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಇದನ್ನೂ ಓದಿ:ಪಡ್ಡೆಹುಡುಗರ ಟೆಂಪ್ರೇಚರ್ ಹೆಚ್ಚಿಸಿದ ದಿಶಾ ಪಟಾನಿ ನಯಾ ಫೋಟೋಶೂಟ್
Advertisement
Advertisement
ಮದುವೆಯನ್ನು ಅದ್ಧೂರಿಯಾಗಿ ಮತ್ತು ಶಿಸ್ತುಬದ್ಧವಾಗಿ ನಡೆಸಿಕೊಟ್ಟಿತ್ತಂತೆ ಓಟಿಟಿ ಸಂಸ್ಥೆ. ಅದಕ್ಕಾಗಿ ಒಬ್ಬ ನಿರ್ದೇಶಕನನ್ನೂ ಅದು ಅಪಾಯಿಂಟ್ ಮಾಡಿತ್ತು. ಸುಸೂತ್ರವಾಗಿ ಮದುವೆಯ ಚಿತ್ರೀಕರಣ ಕೂಡ ಮುಗಿದಿತ್ತು. ಆದರೆ, ನಯನತಾರಾ ಒಂದಷ್ಟು ಫೋಟೋಗಳನ್ನು ಮದುವೆಯ ದಿನ ಮತ್ತು ಇನ್ನೂ ಕೆಲವು ಫೋಟೋಗಳನ್ನು ಮದುವೆಯಾಗಿ ಒಂದು ತಿಂಗಳ ನಂತರ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಹಾಗಾಗಿ ಅನುಮತಿಯ ತಿಕ್ಕಾಟ ಶುರುವಾಗಿದೆ.
Advertisement
ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಕರಾರು ಪತ್ರಕ್ಕೆ ಸಹಿ ಮಾಡಿದ್ದರೂ ಇಂಥದ್ದೊಂದು ಪ್ರಮಾದ ಮಾಡಿದ್ದಕ್ಕಾಗಿ ಮದುವೆಯ ವಿಡಿಯೋ ಮತ್ತು ಫೋಟೋಗಳನ್ನು ತಾನು ಪ್ರಸಾರ ಮಾಡುವುದಿಲ್ಲ ಎಂದು ಓಟಿಟಿ ಸಂಸ್ಥೆ ಹೇಳಿದೆ ಎನ್ನಲಾಗುತ್ತಿದೆ. ಅಲ್ಲದೇ, ಅದಕ್ಕೆ ಖರ್ಚಾದ ಮೊತ್ತ ಮತ್ತು ನಯನತಾರಾ ಅವರಿಗೆ ನೀಡಿರುವ ಹಣವನ್ನು ವಾಪಸ್ಸು ಮಾಡುವಂತೆ ಸಂಸ್ಥೆಯು ತಾಕೀತು ಮಾಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಅಧಿಕೃತವಾಗಿ ಸಂಸ್ಥೆಯಾಗಲಿ ಅಥವಾ ನಯನತಾರಾ ಆಗಲಿ ಎಲ್ಲಿಯೂ ಹೇಳಿಕೊಂಡಿಲ್ಲ.