ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಟಿ ಶ್ವೇತಾ ಚೆಂಗಪ್ಪ ಸ್ನೇಹಿತರನ್ನು ಭೇಟಿಯಾಗಿ ಸಖತ್ ಎಂಜಾಯ್ ಮಾಡಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ತಂಡದ ಸದಸ್ಯರೊಂದಿಗೆ ಶ್ವೇತಾ ಚೆಂಗಪ್ಪ ಮೈಸೂರಿನ ಚಾಂಮುಡಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಬಳಿಕ ನಟ ಮಂಡ್ಯ ರಮೇಶ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರೊಂದಿಗೆ ಸೆಲ್ಫಿಕ್ಲಿಕ್ಕಿಸಿಕೊಂಡಿದ್ದಾರೆ. ಕೊನೆಯದಾಗಿ ಹಲವು ದಿನಗಳ ಬಳಿಕ ಒಟ್ಟಿಗೆ ಸ್ನೇಹಿತೊಂದಿಗೆ ಕುಳಿತು ಊಟ ಮಾಡಿದ್ದಾರೆ.
ಸದ್ಯ ಈ ಫೋಟೋಗಳನ್ನು ಶ್ವೇತಾ ಚೆಂಗಪ್ಪ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದು, ಶ್ವೇತಾ ಜೊತೆಗೆ ಅಪರ್ಣ ವಸ್ತಾರೆ, ಕುರಿ ಪ್ರತಾಪ್, ರೆಮೋ, ಮಾಲಿನಿ ಜಯಪ್ರಕಾಶ್, ಶಾಲಿನಿ ಜಯಪ್ರಕಾಶ್ ಇರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಮೈಸೂರಿನ ಚಿತ್ರನಗರಿಗೆ ಪುನೀತ್ ರಾಜ್ಕುಮಾರ್ ಹೆಸರಿಡಲು ಚಿಂತನೆ: ಎಸ್ಟಿಎಸ್
View this post on Instagram
ಫೋಟೋ ಜೊತೆಗೆ ನಾನು ನಗಲು ಬಯಸದಿದ್ದರೂ ಸಹ ನನ್ನನ್ನು ನಗಿಸುವವರನ್ನು ನಾನು ಪ್ರೀತಿಸುತ್ತೇನೆ ಮತ್ತು ಯಾವಾಗಲೂ ನಂಬುತ್ತೇನೆ. ಜಗತ್ತನ್ನು ವಿಭಿನ್ನವಾಗಿ ಕಾಣುವಂತೆ ಮಾಡುವ ಜನರೊಂದಿಗೆ ನಿಮ್ಮ ಸಮಯವನ್ನು ಕಳೆಯಿರಿ. ನಿಮ್ಮೆಲ್ಲರನ್ನು ಭೇಟಿಯಾಗಿದ್ದು ಮತ್ತು ನಿಮ್ಮೆಲ್ಲರ ಜೊತೆ ಸಮಯ ಕಳೆದಿದ್ದು, ಬಹಳ ಸಂತಸ ತಂದಿದೆ. ಲವ್ ಯು ಆಲ್ ಎಂದು ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳ ಪ್ರಶ್ನೆಗೆ ಖಡಕ್ ಉತ್ತರ ನೀಡಿದ ರಾಧಿಕಾ ಪಂಡಿತ್