Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 40 ವರ್ಷಗಳ ಬಳಿಕ ರಾಮನಗುಡ್ಡ ಜಲಾಶಯಕ್ಕೆ ನೀರು; ಕುಣಿದು ಕುಪ್ಪಳಿಸಿದ ರೈತರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chamarajanagar | 40 ವರ್ಷಗಳ ಬಳಿಕ ರಾಮನಗುಡ್ಡ ಜಲಾಶಯಕ್ಕೆ ನೀರು; ಕುಣಿದು ಕುಪ್ಪಳಿಸಿದ ರೈತರು

Chamarajanagar

40 ವರ್ಷಗಳ ಬಳಿಕ ರಾಮನಗುಡ್ಡ ಜಲಾಶಯಕ್ಕೆ ನೀರು; ಕುಣಿದು ಕುಪ್ಪಳಿಸಿದ ರೈತರು

Public TV
Last updated: January 16, 2026 6:07 pm
Public TV
Share
2 Min Read
Ramanagudda Reservoir
SHARE

ಚಾಮರಾಜನಗರ: ನಾಲ್ಕು ದಶಕಗಳ ಬಳಿಕ ರಾಮನಗುಡ್ಡ ಜಲಾಶಯಕ್ಕೆ (Ramanagudda Reservoir) ಕೊನೆಗೂ ನೀರು ಹರಿದಿದೆ. ಬರಪೀಡಿತ ಪ್ರದೇಶಕ್ಕೆ ಕಾವೇರಿ ನೀರು ಹರಿದಿದ್ದು, ರೈತರ ಸಂಭ್ರಮ ಮುಗಿಲು ಮುಟ್ಟಿದೆ.

ಹನೂರು (Hanur) ತಾಲೂಕು ಸದಾ ಬರಪೀಡಿತ ಪ್ರದೇಶ. ತಮಿಳುನಾಡಿಗೆ ಹನೂರು ತಾಲೂಕಿನ ಮೂಲಕವೇ ಕಾವೇರಿ ಹರಿದು ಹೋದರೂ ಇಲ್ಲಿನ ಜನರಿಗೆ ಮಾತ್ರ ಕಾವೇರಿ ನೀರಿನ ಪ್ರಯೋಜನ ಸಿಗದಂತಾಗಿತ್ತು. ಹನೂರು ಸಮೀಪ‌ ನಲವತ್ತು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ರಾಮನಗುಡ್ಡ ಜಲಾಶಯ ಮಳೆ ಇಲ್ಲದ ಕಾರಣ ನೀರಿಲ್ಲದೇ ಬಣಗುಡುತ್ತಿತ್ತು. ಇಲ್ಲಿಗೆ ಕಾವೇರಿ ನದಿಯಿಂದ 2016 ರಲ್ಲೇ 20 ಕೋಟಿ ವೆಚ್ಚದಲ್ಲಿ ಪೈಪ್‌ಲೈನ್ ಮೂಲಕ ನೀರು ತುಂಬಿಸುವ ಯೋಜನೆ ಸಿದ್ಧಪಡಿಸಲಾಗಿತ್ತು. ಆರ್ಥಿಕ ಹೊರೆಯ ಕಾರಣ ಈ ಯೋಜನೆ ನೆನಗುದಿಗೆ ಬಿದ್ದಿತ್ತು. ಆದರೆ, ಸ್ವತಃ ಸಿವಿಲ್ ಇಂಜಿನಿಯರ್ ಪದವೀಧರರಾಗಿರುವ ಹನೂರು ಕ್ಷೇತ್ರದ ಶಾಸಕ ಎಂ.ಆರ್.ಮಂಜುನಾಥ್ ಈ ಯೋಜನೆಗೆ ಬೇರಯದೇ ಸ್ವರೂಪ ನೀಡುವ ಮೂಲಕ ರಾಮನಗುಡ್ಡ ಜಲಾಶಯಕ್ಕೆ ಕಾವೇರಿ ನೀರು ತುಂಬಿಸುವ ಕಾರ್ಯ ಮಾಡಿದ್ದಾರೆ. ಇದನ್ನೂ ಓದಿ: ಡಿಕೆಶಿ – ರಾಜಣ್ಣ ನಡ್ವೆ ಪ್ರತಿಷ್ಠೆಯ ಕಣವಾಯ್ತಾ ಅಪೆಕ್ಸ್ ಬ್ಯಾಂಕ್ ಚುನಾವಣೆ? – ನಿರ್ದೇಶಕ ಸ್ಥಾನಕ್ಕೆ ಕೆಎನ್‌ಆರ್‌ ನಾಮಪತ್ರ ಸಲ್ಲಿಕೆ!

ಕೊಳ್ಳೇಗಾಲ ತಾಲೂಕು ಸರಗೂರು ಬಳಿ ಹರಿಯುವ ಕಾವೇರಿ ನದಿಯಿಂದ ಹನೂರು ತಾಲೂಕಿನ ಬೂದಬಾಳು ಗ್ರಾಮದವರೆಗೆ ಎರಡೂವರೆ ಕೋಟಿ ವೆಚ್ಚದಲ್ಲಿ ಪೈಪ್‍‌‌ಲೈನ್ ಮೂಲಕ ಕಾವೇರಿ ನೀರು ತಂದು ಬಳಿಕ ಬೂದಬಾಳು ಗ್ರಾಮದಿಂದ ನೈಸರ್ಗಿಕವಾಗಿ ಇರುವ ದೊಡ್ಡಹಳ್ಳದ ಮೂಲಕ ಹರಿಸಿ ರಾಮನಗುಡ್ಡ ಜಲಾಶಯಕ್ಕೆ ತುಂಬಿಸುವ ಯೋಜನೆ ಸಾಕಾರಗೊಳಿಸುವಲ್ಲಿ ಶಾಸಕ ಮಂಜುನಾಥ್ ಯಶಸ್ವಿಯಾಗಿದ್ದಾರೆ.

ಎಂಬತ್ತು ಎಕರೆ ವಿಸ್ತೀರ್ಣದ ರಾಮನಗುಡ್ಡ ಜಲಾಶಯ ಸುಮಾರು ‌980 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಬೂದಬಾಳು ಗ್ರಾಮದಿಂದ ರಾಮನಗುಡ್ಡದವರೆಗೆ ಇರುವ ದೊಡ್ಡ ಹಳ್ಳದ ಮಾರ್ಗದಲ್ಲಿ 27 ಚೆಕ್ ಡ್ಯಾಂಗಳಿವೆ. ದೊಡ್ಡ ಹಳ್ಳದ ಮೂಲಕ ಕಾವೇರಿ ನೀರು ಹರಿಯುವುದರಿಂದ ಚೆಕ್ ಡ್ಯಾಂಗಳು ತುಂಬಿ ಸುತ್ತಮುತ್ತಲ ಸಾವಿರಾರು ಎಕರೆ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗಲಿದೆ. ಕೃಷಿ ಹಾಗೂ ಜನಜಾನುವಾರುಗಳಿಗೆ ನೀರಿನ‌ ಬವಣೆ ತಪ್ಪಲಿದೆ. ಇದನ್ನೂ ಓದಿ: ಹಾವೇರಿ| ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೆಸರು ಮಾಡಿದ್ದ ಕೊಬ್ಬರಿ ಹೋರಿ ಸಾವು

ಈ ಮಹತ್ವದ ಯೋಜನೆಗೆ ಚಾಲನೆ ಸಿಗುತ್ತಿದ್ದಂತೆ ಈ ಭಾಗದ ಜನರ ಸಂತಸಕ್ಕೆ ಪಾರವೇ ಇಲ್ಲದಂತಾಗಿದ್ದು, ಬೂದಬಾಳು ಬಳಿ ಕಾವೇರಿ ನೀರು ಉಕ್ಕಿ ಹರಿಯುತ್ತಿದ್ದಂತೆ ಜನರ ಸಂಭ್ರಮ ಮುಗಿಲುಮುಟ್ಟಿತ್ತು. ಇದೇ ರೀತಿ ನೆನಗುದಿಗೆ ಬಿದ್ದಿರುವ ಹುಬ್ಬೆ ಹುಣಸೆ ಜಲಾಶಯದ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಆ ಮೂಲಕ ಹನೂರು ಭಾಗದ ನೀರಿನ ಸಮಸ್ಯೆಯನ್ನು ‌ನೀಗಿಸಬೇಕು ಎಂಬುದು ಜನರ ಆಶಯ.

TAGGED:ChamarajanagaraHanurRamanagudda Reservoirಚಾಮರಾಜನಗರರಾಮನಗುಡ್ಡ ಜಲಾಶಯಹನೂರು
Share This Article
Facebook Whatsapp Whatsapp Telegram

Cinema news

nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories

You Might Also Like

Weather
Bengaluru City

ಬೆಂಗಳೂರಿನ ಹಲವೆಡೆ ತಂಪೆರೆದ ವರುಣ – ರಾಜ್ಯದಲ್ಲಿ ಏ.30ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ

Public TV
By Public TV
7 minutes ago
Nitin Gadkari
Latest

ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಭವಿಷ್ಯವಿಲ್ಲ: ನಿತಿನ್ ಗಡ್ಕರಿ

Public TV
By Public TV
15 minutes ago
Vaibhav Sooryavanshi 4
Cricket

ನನ್ನ ಜೊತೆ ಸೆಲ್ಫಿ ಬೇಕಾ? ಹಾಗಾದ್ರೆ 100 ರೂಪಾಯಿ ಕೊಡಿ – ಪುಟಾಣಿಗಳ ಜೊತೆ ವೈಭವ್ ಸೂರ್ಯವಂಶಿ ತುಂಟಾಟ!

Public TV
By Public TV
1 hour ago
k.h.muniyappa delhi
Latest

ದೆಹಲಿಗೆ ಸಚಿವರ ದಂಡು – ಮುಖ್ಯಮಂತ್ರಿ ಗೊಂದಲ ಇತ್ಯರ್ಥಪಡಿಸಲು ಸಚಿವರ ಒತ್ತಡ

Public TV
By Public TV
1 hour ago
GBA
Bengaluru City

ಜಿಬಿಎ ಚುನಾವಣೆ ನಡೆಸುವಂತೆ ರಾಜ್ಯಪಾಲರಿಗೆ ಜೆಡಿಎಸ್ ನಿಯೋಗ ದೂರು

Public TV
By Public TV
1 hour ago
odisha man
Latest

ಬ್ಯಾಂಕ್ ಖಾತೆಯಲ್ಲಿದ್ದ ಹಣ ಪಡೆಯಲು ಸಾಕ್ಷಿ ಕೇಳಿದ ಬ್ಯಾಂಕ್ – ಮೃತ ತಂಗಿ ಅಸ್ಥಿಪಂಜರವನ್ನೇ ಬ್ಯಾಂಕ್‌ಗೆ ಹೊತ್ತುತಂದ ಅಣ್ಣ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?