‘ಪೊನ್ನಿಯನ್ ಸೆಲ್ವನ್ 2′ (Ponniyin Selvan 2) ಸಕ್ಸಸ್ ನಂತರ ಸಾಲು ಸಾಲು ಸಿನಿಮಾಗಳು ತ್ರಿಷಾ ಕೃಷ್ಣನ್‌ಗೆ (Trisha Krishnan) ಅರಸಿ ಬರುತ್ತಿದೆ. ನವನಟಿಯರನ್ನು ನಾಚಿಸೋ ಹಾಗೆಯೇ ಇರುವ ತ್ರಿಷಾಗೆ ಸ್ಟಾರ್ ನಟನಿಗೆ ತಾಯಿಯಾಗುವ ಆಫರ್ ಸಿಕ್ಕಿದೆಯಂತೆ. ತೆಲುಗಿನ ಹೀರೋಗೆ ತ್ರಿಷಾ ತಾಯಿಯಾಗಿ ನಟಿಸುತ್ತಾರಾ? ಇಲ್ಲಿದೆ ಮಾಹಿತಿ.
ಮಲಯಾಳಂ ‘ಬ್ರೋ ಡ್ಯಾಡಿ’ (Bro Daddy) ಸಿನಿಮಾ ತೆಲುಗಿಗೆ ರಿಮೇಕ್ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಶ್ರೀಲೀಲಾ (Sreeleela) ಹೊಸ ಚಿತ್ರಕ್ಕೆ ಹೀರೋ ಆಗಿ ಶರ್ವಾನಂದ್ ಕಾಣಿಸಿಕೊಳ್ತಿದ್ದಾರೆ. ಶರ್ವಾನಂದ್ ತಾಯಿಯ ಪಾತ್ರಕ್ಕೆ ತ್ರಿಷಾ ಅವರನ್ನ ಕೇಳಲಾಗಿದೆ. ಮೆಗಾಸ್ಟಾರ್ ಚಿರಂಜೀವಿಗೆ (Megastar Chiranjeevi) ನಾಯಕಿಯಾಗಿ ತ್ರಿಷಾಗೆ ನಟಿಸಲು ಬುಲಾವ್ ಬಂದಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ವಿಜಯ ರಾಘವೇಂದ್ರಗೆ ಧೈರ್ಯ ತುಂಬಿದ ಯಶ್
40ನೇ ವರ್ಷದ ವಯಸ್ಸಿನಲ್ಲೂ 20ರ ಯುವತಿಯಂತೆ ಕಾಣೋ ತ್ರಿಷಾ, 39ನೇ ವಯಸ್ಸಿನ ನಟ ಶರ್ವಾನಂದ್‌ಗೆ ತಾಯಿಯಾಗಿ ನಟಿಸುತ್ತಾರಾ ಎಂಬ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಮೆಗಾಸ್ಟಾರ್ ಚಿರಂಜೀವಿ, ಶ್ರೀಲೀಲಾ(Sreeleela), ಶರ್ವಾನಂದ್ (Sharwanand) ಹೊಸ ಚಿತ್ರಕ್ಕೆ ತ್ರಿಷಾ ಕೈಜೋಡಿಸ್ತಾರಾ ಎಂಬುದನ್ನ ಕಾದುನೋಡಬೇಕಿದೆ. ಹೀರೋಯಿನ್ ಆಗಿಯೇ ಕನ್ನಡದ ಪವರ್ ಚಿತ್ರದ ನಾಯಕಿ ತ್ರಿಷಾಗೆ ಬಂಪರ್ ಆಫರ್ಸ್‌ಗಳಿದ್ದು, ಶರ್ವಾನಂದ್‌ಗೆ ತಾಯಿಯಾಗಿ ನಟಿಸಲು ಓಕೆ ಅಂದ್ರಾ? ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.
‘ಪೊನ್ನಿಯನ್ ಸೆಲ್ವನ್ 2’ ನಂತರ ವಿಜಯ್ ದಳಪತಿ ನಟನೆಯ ‘ಲಿಯೋ’ ಸಿನಿಮಾಗೆ ತ್ರಿಷಾ ನಾಯಕಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ.