Bengaluru CityCinemaDistrictsKarnatakaLatestMain PostSandalwood

ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಶುಭಾ ಪೂಂಜಾ!

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ, ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ಶುಭಾ ಪೂಂಜಾ ಅವರು ಡಿಸೆಂಬರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ .

ಈ ಕುರಿತು ಸ್ವತಃ ನಟಿಯೇ ಖಾಸಗಿ ಚಾನೆಲ್ ಒಂದರಲ್ಲಿ ನಡೆದ ಶೋನಲ್ಲಿ ಬಹಿರಂಗಪಡಿಸಿದ್ದಾರೆ. ಅಲ್ಲದೆ ಈಗಾಗಲೇ ಮದುವೆ ತಯಾರಿಗಳು ಕೂಡ ನಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಶುಭಾ ಪೂಂಜಾ!

ಶುಭಾ ಪೂಂಜಾ ಅವರು ತಮ್ಮ ಗೆಳೆಯ ಸುಮಂತ್ ಮಹಾಬಲ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರಿಬ್ಬರು ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಕಳೆದ ವರ್ಷವೇ ಇವರ ಮದುವೆ ನಡೆಯಬೇಕಾಗಿತ್ತು. ಆದರೆ ಶುಭಾ ನನಗೆ ಈಗ ಮದುವೆ ಬೇಡ, ನಾನು ಬಿಗ್ ಬಾಸ್ ಶೋಗೆ ಸ್ಪರ್ಧಿಯಾಗಿ ಹೋಗಬೇಕು ಎಂದು ಹಠಕ್ಕೆ ಬಿದ್ದು ಕೊನೆಗೆ ಸ್ಪರ್ಧಿಯಾಗಿ ತೆರಳಿದ್ದರು.

ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಶುಭಾ ಪೂಂಜಾ!

ಬಿಗ್ ಬಾಸ್ ಮನೆಯಲ್ಲಿ ಶುಭಾ ತಮ್ಮ ಗೆಳೆಯನನ್ನು ತುಂಬಾ ಮಿಸ್ ಮಾಡಿಕೊಂಡಿದ್ದರು. ಅಲ್ಲದೆ ಆಗಾಗ ತಮ್ಮ ಸಹ ಸ್ಪರ್ಧಿಗಳ ಜೊತೆ ಚಿನ್ನಿ ಬಾಂಬ್ (ಸುಮಂತ್) ಬಗ್ಗೆ ಮಾತನಾಡುತ್ತಿದ್ದರು. ಇತ್ತ ಸುದೀಪ್ ಮುಂದೆಯೂ ಅನೇಕ ಬಾರಿ ಮದುವೆ ಬಗ್ಗೆ ಮಾತನಾಡಿದ್ದರು. ನನಗಾಗಿ ಸುಮಂತ್ ತುಂಬಾ ಕಾದಿದ್ದಾನೆ, ಇನ್ನೂ ಕಾಯಿಸುವುದಿಲ್ಲ ಬಿಗ್ ಬಾಸ್ ಮನೆಯಿಂದ ಹೊರಗೆ ಹೋದ ಕೂಡಲೇ ಮದುವೆಯಾಗುವುದಾಗಿ ಶುಭಾ ಹೇಳಿದ್ದರು. ಇದನ್ನೂ ಓದಿ: ಮಂಜು ಪಾವಗಡ ಜೊತೆ ಶುಭಾ ಮತ್ತೊಮ್ಮೆ ಟ್ರಿಪ್

ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಶುಭಾ ಪೂಂಜಾ!

ಸುಮಾರು 100ಕ್ಕೂ ಹೆಚ್ಚು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಶುಭಾ ಅಲ್ಲಿಂದ ಹೊರಗೆ ಬಂದ ಬಳಿಕ ತಮ್ಮ ಗೆಳೆಯನ ಜೊತೆ ಗೋವಾಕ್ಕೆ ತೆರಳಿದ್ದರು. ಇತ್ತೀಚೆಗೆ ಭಾವಿ ಪತಿ ಸುಮಂತ್ ಹಾಗೂ ಗೆಳೆಯ ಮಂಜು ಪಾವಗಡ ಜೊತೆ ಸಿಸರಸಿಯ ಮಾರಿಕಾಂಬಾ ದೇಗುಲಕ್ಕೆ ಭೇಟಿ ನೀಡಿದ್ದರು. ಅಲ್ಲಿ ತೆಗೆಸಿಕೊಂಡ ಕೆಲವೊಮದು ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡು, ಆಶೀರ್ವಾದ ಪಡೆದುಕೊಳ್ಳಲು ಶಿರಸಿಯ ಮಾರಿಕಾಂಬಾ ದೇವಾಲಯಕ್ಕೆ ಆಗಮಿಸಿದ್ದೇವೆ. ಜೊತೆಗೆ ಯಾಣ, ಕುಮಟಾ ಮತ್ತು ಗೋಕರ್ಣಕ್ಕೆ ಒಂದು ಸಣ್ಣ ಪ್ರವಾಸ ಬಂದಿದ್ದೇವೆ ಎಂದು ಶುಭಾ ಕ್ಯಾಪ್ಷನ್ ನಿಡಿದ್ದರು.

ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಶುಭಾ ಪೂಂಜಾ!

ಪ್ರೀತಿ ಶುರುವಾಗಿದ್ದು ಹೇಗೆ..?
ಸುಮಂತ್ ಮಹಾದೇವ ಅವರು ಜಯಕರ್ನಾಟಕ ಬೆಂಗಳೂರು ಸೌತ್ ವಿಂಗ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಗ್ಯಾಸ್ ಏಜೆನ್ಸಿ ಕೂಡ ನಡೆಸುತ್ತಿರುವ ಸುಮಂತ್ ಅವರ ಒಂದು ಕಾರ್ಯಕ್ರಮದಲ್ಲಿ ಶುಭಾ ಪೂಂಜಾ ಅತಿಥಿಯಾಗಿ ಹೋಗಿದ್ದರು. ಅಲ್ಲಿ ಶುಭಾ ಮತ್ತು ಸುಮಂತ್ ಪರಿಚಯವಾಗಿದೆ. ಈ ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿದೆ. ಇದನ್ನೂ ಓದಿ: ತನ್ನ ಮುಖ, ಮೈಯಲ್ಲೆಲ್ಲ ಮಣ್ಣಿದ್ದರೂ ನನ್ನ ಮುಖ ಒರೆಸಿದ್ದರು- ಅಪ್ಪು ನೆನಪಿಸಿಕೊಂಡು ಹರ್ಷಿಕಾ ಕಣ್ಣೀರು

Related Articles

Leave a Reply

Your email address will not be published. Required fields are marked *