ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಸದ್ಯ ಬಾಲಿವುಡ್ ‘ಸಿಟಾಡೆಲ್’ (Citadel) ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸರ್ಬಿಯಾದಲ್ಲಿ ಭರ್ಜರಿಯಾಗಿ ಶೂಟಿಂಗ್ ನಡೆಯುತ್ತಿದೆ. ವರುಣ್ ಧವನ್ ಜೊತೆ ಮೊದಲ ಬಾರಿಗೆ ನಾಯಕಿಯಾಗಿ ಸಮಂತಾ ನಟಿಸುತ್ತಿದ್ದಾರೆ. ಸದ್ಯ ಸೆಕ್ಸಿ ಲುಕ್‌ನಲ್ಲಿರುವ ಫೋಟೋವನ್ನ ಸಮಂತಾ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಅಶು ರೆಡ್ಡಿದು ಒಂದು ಗೋಳಾದರೆ, ನೀನಾದ್ದು ಮತ್ತೊಂದು ಸಂಕಟ
Advertisement
ನಾಗಚೈತನ್ಯ (Nagachaitanya) ಜೊತೆಗಿನ ದಾಂಪತ್ಯಕ್ಕೆ (Wedding) ಅಂತ್ಯ ಹಾಡಿದ ಮೇಲೆ ಸಮಂತಾ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಪುಷ್ಪ’ (Pushpa) ಸಿನಿಮಾದ ಹಾಡಿಗೆ ಸ್ಯಾಮ್ ಮಸ್ತ್ ಆಗಿ ಹೆಜ್ಜೆ ಹಾಕಿದ್ರು. ಸ್ಯಾಮ್ ಸೊಂಟ ಬಳುಕಿಸಿದ್ದಕ್ಕೆ ಸೂಪರ್ ಡೂಪರ್ ಸಕ್ಸಸ್ ಕಾಣ್ತು. ಡಿವೋರ್ಸ್ (Divorce) ನಂತರ ಮತ್ತಷ್ಟು ಬೋಲ್ಡ್ ಆದ ಸಮಂತಾ, ವಿಭಿನ್ನ ಪಾತ್ರಗಳನ್ನ ಮಾಡುವತ್ತ ಮುಂದಾದರು.
Advertisement
Advertisement
ಸದ್ಯ ಸೌತ್ ಸಿನಿಮಾಗಳ ಜೊತೆ ಬಾಲಿವುಡ್‌ನಲ್ಲೂ ನಟಿ ಸಮಂತಾ ಆಕ್ಟೀವ್ ಆಗಿದ್ದಾರೆ. ಸಾಲು ಸಾಲು ಸಿನಿಮಾ ಅವಕಾಶಗಳು ಸಮಂತಾರನ್ನೇ ಅರಸಿ ಬರುತ್ತಿದೆ. ‘ಸಿಟಾಡೆಲ್’ ಪ್ರಾಜೆಕ್ಟ್‌ಗಾಗಿ ಸಮಂತಾ ಶ್ರಮಿಸುತ್ತಿದ್ದಾರೆ. ವರುಣ್ & ಟೀಮ್ ಜೊತೆ ಸಮಂತಾ ಸರ್ಬಿಯಾದಲ್ಲಿ ಶೂಟಿಂಗ್ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸರ್ಬಿಯಾ ಕೆಲ ಫೋಟೋಗಳನ್ನ ನಟಿ ಇತ್ತೀಚಿಗೆ ಹಂಚಿಕೊಂಡಿದ್ದರು.
Advertisement
ಇದೀಗ ಸಮಂತಾ, ಸ್ಟೈಲೀಶ್ ಕಟ್- ಔಟ್ ಡ್ರೆಸ್‌ನಲ್ಲಿ ಸೂಪರ್ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ. ಸಮಂತಾ ಫ್ಯಾಷನ್ ಸೆನ್ಸ್ ಮತ್ತಷ್ಟು ಬದಲಾಗಿದೆ. ಕೇಸರಿ ಬಣ್ಣದ ಡ್ರೆಸ್‌ನಲ್ಲಿ ಕ್ಯಾಮೆರಾಗೆ ಮಸ್ತ್ ಆಗಿ ಪೋಸ್ ನೀಡಿದ್ದಾರೆ. ಸ್ಯಾಮ್ ನಯಾ ಲುಕ್ ಈಗ ಪಡ್ಡೆಹುಡುಗರ ನಿದ್ದೆಗೆಡಿಸಿದೆ. ಈ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.