ಸಹಾಯಕನ ಮದುವೆಗೆ ರಶ್ಮಿಕಾ ಹಾಜರಿ- ನಟಿಯ ಕಾಲಿಗೆ ಬಿದ್ದ ನವಜೋಡಿ

Public TV
4 Min Read
rashmika mandanna

ದಾ ಒಂದಲ್ಲಾ ಒಂದು ಟ್ರೋಲ್‌ನಿಂದ ಸುದ್ದಿಯಾಗುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ತನ್ನ ಸಹಾಯಕನ (Assistant) ಮದುವೆಗೆ ಹಾಜರಿ ಹಾಕುವ ಮೂಲಕ ಗಮನ ಸೆಳೆದಿದ್ದಾರೆ. ಶ್ರೀವಲ್ಲಿ ನಡೆಗೆ ಫ್ಯಾನ್ಸ್ ಭೇಷ್ ಎಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡ್ತಿದೆ. ಇದನ್ನೂ ಓದಿ:‘ಸಮುದ್ರಂ’ ಚಿತ್ರದ ವಿವಾದ : ನಟಿ ಅನಿತಾ ಭಟ್ ಪ್ರತಿಕ್ರಿಯೆ ಏನು?

rashmika 1 1

ಪುಷ್ಪ(Pushpa) ನಟಿ ರಶ್ಮಿಕಾ ಅವರು ತಮ್ಮ ತಂಡದ ಸದಸ್ಯರನ್ನು ಕುಟುಂಬದವರಂತೆ ನೋಡಿಕೊಳ್ಳುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಈ ಕಾರಣದಿಂದಲೇ ಟೀಂನವರಿಗೆ ರಶ್ಮಿಕಾ ಮಂದಣ್ಣ ಅವರನ್ನು ಕಂಡರೆ ಅಚ್ಚುಮೆಚ್ಚು. ರಶ್ಮಿಕಾ ಸಹಾಯಕರಾದ ಸಾಯಿ ಎಂಬುವವರು ಇತ್ತೀಚೆಗೆ ಮದುವೆ ಆಗಿದ್ದಾರೆ. ಹೈದರಾಬಾದ್‌ನಲ್ಲಿ ಈ ಮದುವೆ ಜರುಗಿದೆ. ರಶ್ಮಿಕಾ ಅವರಿಗೂ ಮದುವೆಗೆ ಆಹ್ವಾನ ಇತ್ತು. ಅವರು ಕೂಡ ವಿವಾಹ ಸಮಾರಂಭಕ್ಕೆ ಹೋಗಿ ಶುಭಕೋರಿ ಬಂದಿದ್ದಾರೆ.

ರಶ್ಮಿಕಾ ಸಖತ್ ಬ್ಯುಸಿಯಾಗಿರುವ ಹೀರೋಯಿನ್. ತಮ್ಮ ಕೆಲಸಗಳ ನಡುವೆ ಸಾಯಿಗೋಸ್ಕರ ಕೊಂಚ ಬಿಡುವು ಮಾಡಿಕೊಂಡು ಮದುವೆಗೆ ಹಾಜರಿ ಹಾಕಿದ್ದಾರೆ. ನವದಂಪತಿ ಆಶೀರ್ವಾದ ಪಡೆಯಲು ನಟಿಯ ಕಾಲಿಗೆ ನಮಸ್ಕರಿಸಿದ್ದಾರೆ. ಈ ವೇಳೆ ರಶ್ಮಿಕಾ ಮಂದಣ್ಣಗೆ ಏನು ಮಾಡಬೇಕು ಎಂಬುದೇ ತಿಳಿಯಲಿಲ್ಲ. ಸಾಯಿ ಹಾಗೂ ಅವರ ಪತ್ನಿ ಕಾಲಿಗೆ ನಮಿಸಿದ್ದನ್ನು ನೋಡಿ ರಶ್ಮಿಕಾಗೆ ನಾಚಿಕೆ ಆಗಿದೆ. ಶ್ರೀವಲ್ಲಿ ತುಂಬಾ ಮುಗ್ಧೆ ಎಂದು ಫ್ಯಾನ್ಸ್ ಕೊಂಡಾಡಿದ್ದಾರೆ.

ಕಿರಿಕ್ ಪಾರ್ಟಿ (Kirik Party) ಚೆಲುವೆ, ರಣ್‌ಬೀರ್ ಜೊತೆಗಿನ ಅನಿಮಲ್ (Animal) ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಪುಷ್ಪ 2 ಚಿತ್ರೀಕರಣ ಭರದಿಂದ ಸಾಗುತ್ತಿದೆ. ಧನುಷ್ 50ನೇ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ವಿಕ್ರಮ್- ವಿಜಯ್ ಸೇತುಪತಿ ಜೊತೆಗಿನ ಸಿನಿಮಾ, ಡಿಜೆ ಟಿಲ್ಲು ಸಿದ್ದು ಜೊತೆ ಹೊಸ ಸಿನಿಮಾವನ್ನ ರಶ್ಮಿಕಾ ಒಪ್ಪಿಕೊಂಡಿದ್ದಾರೆ.

Share This Article